Siima Awards 2019 : ‘ಸ್ಟೈಲ್ ಐಕಾನ್’ ಪಟ್ಟ ಪಡೆದ ರಾಕಿಂಗ್ ಸ್ಟಾರ್
ರಾಕಿಂಗ್ ಸ್ಟಾರ್ ಯಶ್ ಈಗ ಸ್ಟೈಲಿಶ್ ಸ್ಟಾರ್ ಆಗಿದ್ದಾರೆ. ಈ ಬಾರಿಯ ಸೈಮಾ ಅವಾರ್ಡ್ ನಲ್ಲಿ ಯಶ್ ‘ಸ್ಟೈಲ್ ಐಕಾನ್’ ಪ್ರಶಸ್ತಿಯನ್ನು ಪಡೆದಿದ್ದಾರೆ.
ಯಶ್ ಪ್ರಶಸ್ತಿಗೆ ಕಾರಣ ಆದ ವ್ಯಕ್ತಿಯ ಬಗ್ಗೆ ರಾಧಿಕಾ ಪಂಡಿತ್ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಯಶ್ ಅವರ ಕಾಸ್ಟೂಮ್ ಡಿಸೈನ್ ಮಾಡುವ ಸಾನಿಯಾ ಸರ್ದಾರಿಯಾ ಬಗ್ಗೆ ಪೋಸ್ಟ್ ಮಾಡಿದ್ದಾರೆ.
”ಸ್ಟೈಲ್ ಎನ್ನುವುದು ಮಾತನಾಡದೆ ನಾವು ಏನು ಎನ್ನುವುದನ್ನು ಹೇಳುವುದಾಗಿದೆ.” ಎಂದಿರುವ ರಾಧಿಕಾ ಪಂಡಿತ್ ಸಾನಿಯಾ ಸರ್ದಾರಿಯ ಅವರು ಕೇವಲ ನಮ್ಮ ಸ್ಟೈಲಿಸ್ಟ್ ಮಾತ್ರವಲ್ಲ, ಅವರು ನಮ್ಮನ್ನು ತುಂಬ ಕೇರ್ ಮಾಡುತ್ತಾರೆ ಎಂದು ಹೇಳಿದ್ದಾರೆ. ಯಶ್ ಗೆ ಪ್ರಶಸ್ತಿ ಬಂದ ಖುಷಿಯನ್ನು ಸೋಷಿಯಲ್ ಮೀಡಿಯಾದಲ್ಲಿ ರಾಧಿಕಾ ಹಂಚಿಕೊಂಡಿದ್ದಾರೆ.
ಯಶ್ ಹಾಗೂ ರಾಧಿಕಾ ಪಂಡಿತ್ ಸಿನಿಮಾಗಳಿಗೆ ಹಾಗೂ ಕಾರ್ಯಕ್ರಮಗಳಿಗೆ ಸಾನಿಯಾ ಸರ್ದಾರಿಯಾ ಕಾಸ್ಟೂಮ್ ಡಿಸೈನ್ ಮಾಡುತ್ತಾರೆ. ಯಶ್ – ರಾಧಿಕಾ ನಿಶ್ಚಿತಾರ್ಥ, ಮದುವೆಗೆ ಸಹ ಸಾನಿಯಾ ಸರ್ದಾರಿಯಾ ವಸ್ತ್ರ ವಿನ್ಯಾಸ ಮಾಡಿದ್ದರು.
ಅಂದಹಾಗೆ, ಸಾನಿಯಾ ಸರ್ದಾರಿಯಾ ನೃತ್ಯ ನಿರ್ದೇಶಕ ಇಮ್ರಾನ್ ಸರ್ದಾರಿಯಾ ಪತ್ನಿಯಾಗಿದ್ದು, ಸಾಕಷ್ಟು ವರ್ಷಗಳಿಂದ ಕಾಸ್ಟೂಮ್ ಡಿಸೈನರ್ ಆಗಿ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿದ್ದಾರೆ.