ಪ್ರತಿ ನಾಗರಿಕರಿಗೂ ಸ್ವತಂತ್ರವಾಗಿ ಜೀವಿಸುವ ಹಕ್ಕಿದೆ- ನ್ಯಾಯಾಧೀಶರಾದ ಯೋಗೇಶ. ಜೆ
1 min readರಾಣೇಬೆನ್ನೂರು : ಜಾತಿ, ವರ್ಣ, ಸ್ತ್ರೀ-ಪುರುಷ ಎಂಬ ಯಾವುದೇ ರೀತಿಯ ಭೇದವಿಲ್ಲದೇ ಪ್ರತಿಯೊಬ್ಬ ನಾಗರಿಕರಿಗೂ ಸ್ವತಂತ್ರವಾಗಿ ಜೀವಿಸುವ ಹಾಗೂ ಆತ್ಮ ಸಂರಕ್ಷಣೆಯ ಹಕ್ಕಿದೆ ಎಂದು ರಾಣೇಬೆನ್ನೂರು ತಾಲೂಕು ಪ್ರಧಾನ ದಿವಾಣಿ ನ್ಯಾಯಧೀಶರು ಹಾಗೂ ತಾಲೂಕಾ ಕಾನೂನು ಸೇವಾ ಸಮಿತಿ ಸದಸ್ಯ ಕಾರ್ಯದರ್ಶಿಗಳಾದ ಯೋಗೇಶ ಜೆ. ಅವರು ಹೇಳಿದರು.
ರಾಣೇಬೆನ್ನೂರು ನಗರದ ಸ್ವಾಧಾರ ಗೃಹ ಆವರಣದಲ್ಲಿ ಶುಕ್ರವಾರ ತಾಲೂಕಾ ಕಾನೂನು ಸೇವಾ ಸಮಿತಿ, ತಾಲೂಕು ನ್ಯಾಯವಾದಿಗಳ ಸಂಘ ಹಾಗೂ ನಿಶಾರ್ಡ್ ಸೇವಾ ಸಂಘದ ಸಹಯೋಗದಲ್ಲಿ ಭಾರತ ಸ್ವಾತಂತ್ರ್ಯ ಮಹೋತ್ಸವ 75ನೇ ವರ್ಷದ ಆಜಾದಿಕಾ ಅಮೃತ ಮಹೋತ್ಸವದ ಅಂಗವಾಗಿ ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಪ್ರಯುಕ್ತ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಯಾವುದೇ ತಾರತಮ್ಯವಿಲ್ಲದೇ ಪ್ರತಿಯೊಬ್ಬರಿಗೂ ಸಮಾನ ಕೆಲಸಕ್ಕೆ ಸಮಾನ ಸಂಬಳ ಪಡೆಯುವ ಹಕ್ಕಿದೆ ಎಂದರು.
ನ್ಯಾಯವಾದಿ ಶ್ರೀಮತಿ ನಾಗರತ್ನ ಮುಗಳಿಶೆಟ್ಟರ ಅವರು ವಿಶ್ವ ಮಾನವ ಹಕ್ಕುಗಳ ದಿನಾಚರಣೆಯ ಮಹತ್ವ ಮತ್ತು ಉದ್ದೇಶ ಹಾಗೂ ಮಹಿಳೆಯರ ಹಕ್ಕುಗಳ ಕುರಿತು ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ವಕೀಲರ ಸಂಘದ ಅಧ್ಯಕ್ಷ ಬಿ.ಎಚ್.ಬುರಡಿಕಟ್ಟಿ, ಉಪಾಧ್ಯಕ್ಷ ಕುಮಾರ ಮಡಿವಾಳರ್, ಕಾರ್ಯದರ್ಶಿ ಜಿ.ಕೆ.ಮುಂಡಾಸದ, ನಿಶಾರ್ಡ್ ಸೇವಾ ಸಂಸ್ಥೆ ಅಧ್ಯಕ್ಷೆ ಶ್ರೀಮತಿ ರುಕ್ಮಿಣಿ ಸಾವುಕಾರ, ಶಿವಕುಮಾರ.ಸಿ.ಡಿ ಇತರರು ಉಪಸ್ಥಿತರಿದ್ದರು.