Thu. Apr 14th, 2022

ಪಾಂಡವ ನ್ಯೂಸ್

ಸಮಾಜದ ಧ್ವನಿ

ಬೆಳೆ-ಮನೆ ಹಾನಿಗೆ ಸರಕಾರದಿಂದ ಪರಿಹಾರ ಬಿಡುಗಡೆ : ಶ್ರೀನಿವಾಸ್ ಮಾನೆ

ಹಾನಗಲ್ಲ : ತಾಲೂಕಿನಲ್ಲಿ ಕಳೆದ ತಿಂಗಳು ಸುರಿದ ಅಕಾಲಿಕ ಮಳೆಯಿಂದ ಬೆಳೆ ಹಾಗೂ ಮನೆ ಹಾನಿಗೆ ಸಂಬಂಧಿಸಿದಂತೆ ಸರಕಾರದಿಂದ ಪರಿಹಾರ ಬಿಡುಗಡೆಯಾಗಿದೆ ಎಂದು ಶಾಸಕ ಶ್ರೀನಿವಾಸ್ ಮಾನೆ ತಿಳಿಸಿದ್ದಾರೆ.
ಈ ಕುರಿತು ಶುಕ್ರವಾರ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು ಬೆಳೆ ನಾಶಕ್ಕೆ ಸಂಬಂಧಿಸಿದಂತೆ ಇದುವರೆಗೂ ತಾಲೂಕಿನ ಒಟ್ಟು 3897 ರೈತರಿಗೆ 1 ಕೋಟಿ 83 ಲಕ್ಷ 51 ಸಾವಿರ ರೂ. ಬೆಳೆನಷ್ಟ ಪರಿಹಾರ ಲಭಿಸಿದ್ದು, ಈಗಾಗಲೇ ಆರ್‍ಟಿಜಿಎಸ್ ಮೂಲಕ ಪರಿಹಾರ ಹಣ ನೇರವಾಗಿ ಫಲಾನುಭವಿ ರೈತರ ಖಾತೆಗಳಿಗೆ ವರ್ಗಾಯಿಸಲಾಗಿದೆ ಎಂದು ತಿಳಿಸಿದ್ದಾರೆ.
ಇನ್ನು ಮನೆ ಹಾನಿಗೆ ಸಂಬಂಧಿಸಿದಂತೆ ಎ ಕೆಟಗರಿಯ 9 ಫಲಾನುಭವಿಗಳಿಗೆ 8 ಲಕ್ಷ 55 ಸಾವಿರ ರೂ., ಬಿ ಕೆಟಗರಿಯ 168 ಫಲಾನುಭವಿಗಳಿಗೆ 1 ಕೋಟಿ 59 ಲಕ್ಷ 77 ಸಾವಿರ ರೂ. ಹಾಗೂ ಸಿ ಕೆಟಗರಿಯ 76 ಫಲಾನುಭವಿಗಳಿಗೆ 38 ಲಕ್ಷ ರೂ. ಹೀಗೆ ಎಲ್ಲ 253 ಫಲಾನುಭವಿಗಳಿಗೆ ಒಟ್ಟು 2 ಕೋಟಿ 6 ಲಕ್ಷ 32 ಸಾವಿರ ರೂ. ಪರಿಹಾರ ಲಭಿಸಿದೆ ಎಂದು ಶ್ರೀನಿವಾಸ್ ಮಾನೆ ತಿಳಿಸಿದ್ದಾರೆ.

  •  
  •  
  •  
  •  
  •  
  •  

Leave a Reply

Your email address will not be published.

Copyright © All rights reserved. | Developed by EXPOLOG TECHNOLOGIES
error: Content is protected !!