ಆ.15ಕ್ಕೆ ಒನ್ ಲವ್ ಟು ಸ್ಟೋರಿ ಚಿತ್ರ ರಾಜ್ಯಾದ್ಯಂತ ಬಿಡುಗಡೆ*
1 min readಹುಬ್ಬಳ್ಳಿ: ಯುವ ಪೀಳಿಗೆಯ ಪ್ರೀತಿಯನ್ನು ಕಥಾವಸ್ತುವನ್ನಾಗಿಸಿಕೊಂಡು ಸಿಲ್ವರ್ ಸ್ಕ್ರೀನ್ ಫಿಲ್ಮ್ ಫ್ಯಾಕ್ಟರಿಯ ಸಹಯೋಗದಲ್ಲಿ ನಿರ್ಮಾಣಗೊಂಡಿರುವ ಒನ್ ಲವ್ ಟು ಸ್ಟೋರಿ ಚಿತ್ರ ಇದೇ ಆ.15ರಂದು ರಾಜ್ಯಾದ್ಯಂತ ಬಿಡುಗಡೆಗೊಳ್ಳಲಿದೆ ಎಂದು ಚಿತ್ರ ನಿರ್ದೇಶಕ ವಸಿಷ್ಠ ಬಂಟನೂರು ತಿಳಿಸಿದರು.ಮಂಗಳವಾರ ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ಮಾತನಾಡಿದ ಅವರು,ಹೃದಯಕ್ಕಿಲ್ಲ ಪಂಚರ ಅಂಗಡಿ ಎಂಬ ಅಡಿ ಬರಹವನ್ನು ಒಳಗೊಂಡಿರುವ ವಿಭಿನ್ನ ಹಾಗೂ ವಿಶಿಷ್ಠವಾದ ಪ್ರಯೋಗದಲ್ಲಿ ನಿರ್ಮಾಣಗೊಂಡಿರುವ ಚಿತ್ರ, ಸಿನಿ ರಸಿಕರನ್ನು ರಂಜಿಸಲು ತೆರೆಯ ಮೇಲೆ ಬರಲು ಸಿದ್ಧವಾಗಿದೆ ಎಂದರು.ಪ್ರಸ್ತುತ ದಿನಮಾನದ ಕಾಲೇಜ್ ಹುಡುಗರ ಜೀವನದಲ್ಲಿ ಚಿಗುರೊಡೆಯುವ ಪ್ರೀತಿಯ ಸಹಜ ಪ್ರಕ್ರಿಯೆ ಆಧರಿಸಿ ನಿರ್ಮಿಸಲಾಗಿರುವ ಚಿತ್ರ ಒನ್ ಲವ್ ಟು ಸ್ಟೋರಿ. ಚಿತ್ರದಲ್ಲಿ ಎರಡು ಜೋಡಿಗಳ ವಿಭಿನ್ನ ಜನರೇಷನ್ ಪ್ರೀತಿಯ ಪರಿಯನ್ನು ಸಾರ್ವಜನಿಕರಿಗೆ ಪರಿಚಯಿಸುವ ಸದುದ್ದೇಶದಿಂದ ಚಿತ್ರವನ್ನು ನಿರ್ಮಾಣ ಮಾಡಲಾಗಿದೆ. ಪ್ರತಿಯೊಂದು ಚಿತ್ರದಲ್ಲಿ ಕೂಡ ಪ್ರೀತಿ ಸಹಜ ವಿಷಯವಾಗಿದ್ದರೂ ಒನ್ ಲವ್ ಟು ಸ್ಟೋರಿಯಲ್ಲಿ ತನ್ನದೇ ಆದ ವಿಭಿನ್ನ ರೀತಿಯ ಕಥಾಹಂದಿರದಲ್ಲಿ ಮೂಡಿ ಬಂದಿರುವ ಚಿತ್ರವಾಗಿದೆ ಎಂದು ಅವರು ಹೇಳಿದರು. ಚಿತ್ರದ ನಿರ್ದೇಶನ, ಕಥೆ-ಚಿತ್ರಕಥೆ, ಸಾಹಿತ್ಯ, ಸಂಭಾಷಣೆ, ವಸಿಷ್ಠ ಬಂಟನೂರ ಅವರು ನಿರ್ವಹಿಸಿದ್ದು, ಚಿತ್ರದಲ್ಲಿ ಸಂತೋಷ,ಪಕೃತಿ,ಮಧು, ಆಧ್ಯ ಸೇರಿದಂತೆ ದೊಡ್ಡ ತಾರಗಣವೇ ಚಿತ್ರದಲ್ಲಿ ನಟಿಸಿದೆ. ಚಿತ್ರದಲ್ಲಿ ಸಿದ್ಧಾರ್ಥ್ ಅವರ ರ್ಯಾಪರ್ ಸಾಂಗ್ ಕಲರವ ಸಂಗೀತ ಆಸಕ್ತರಲ್ಲಿ ಹೊಸ ಸಂಚಲನ ಸೃಷ್ಟಿಸಿರುವುದು ಚಿತ್ರಕ್ಕೆ ಧನಾತ್ಮಕ ಬೆಂಬಲ ದೊರತಂತಾಗಿದೆ.ಚಿತ್ರದ ಛಾಯಾಗ್ರಹಣ, ಸಂಕಲನ ಹಾಗೂ ಕಲರಿಸ್ಟ್ ಅನೀಲಕುಮಾರ ಕೆ., ಅವರು ಕಾರ್ಯನಿರ್ವಹಿಸಿದ್ದಾರೆ ಎಂದರು.
ಚಿತ್ರ ನಿರ್ಮಾಣದಲ್ಲಿ ಮಹಾಂತೇಶ ತಾರಾಪೂರ, ರವಿ ಬೆನ್ನಿ, ದಿನೇಶ, ಸುರೇಶ ಪರಂಡಿ ಹಾಗೂ ಸ್ನೇಹಿತರು ಸಹಾಯ ಮಾಡಿದ್ದಾರೆ.ಚಿತ್ರದಲ್ಲಿ ಆಕರ್ಷಣೆ ಹಾಡಾಗಿರುವ ಹ್ಯಾಂಗೋವರ್ ಹಾಡನ್ನು ಖ್ಯಾತ ನಟ ವಸಿಷ್ಠ ಎನ್.ಸಿಂಹ ಹಾಡಿದ್ದು, ನನ್ನ ಮನಸ್ಸಲ್ಲೇನೋ ಶುರುವಾಯಿತು ಹಾಡನ್ನು ಅಲೋಕ ರ್ಯಾಪರ್ ಹಾಡಿದ್ದಾರೆ.ಸಿಂಪಲ್ ಸುನ್ನಿ ರಚಿಸಿರುವ ಮತ್ತೊಂದು ಲವ್ ಆಯ್ತು ಹಾಡಿಗೆ ಸಂಜೀತ ಹೆಗಡೆ ಧ್ವನಿಯಾಗಿದ್ದಾರೆ. ಚಿತ್ರದಲ್ಲಿ ಮೂಡ ಬಂದಿರುವ ಸಂಭಾಷಣೆ ಈಗಾಗಲೇ ಟ್ರೈಲರ್ ಮೂಲಕ ಸಿನಿ ರಸಿಕರ ಮನಸೋರೆಗೊಳಿಸಿದೆ.ಹೊಸ ಪ್ರತಿಭೆಗಳಿಗೆ ಪೂರಕ ವೇದಿಕೆ ಕಲ್ಪಿಸುವ ಸದುದ್ದೇಶದಿಂದ ನಿರ್ಮಾಣಗೊಂಡಿರುವ ಚಿತ್ರ ಸ್ವತಂತ್ರ ದಿನಾಚರಣೆಯ ದಿನ ಅದ್ದೂರಿಯಾಗಿ ಬಿಡುಗಡೆಗೊಳ್ಳಲಿದೆ ಎಂದು ಅವರು ಹೇಳಿದರು.