ಅಂತರಾಷ್ಟ್ರೀಯ ಮಾನವ ಹಕ್ಕುಗಳ ದಿನಾಚರಣೆ
1 min readರಾಣೇಬೆನ್ನೂರು : ಸ್ಥಳೀಯ ಕೆ.ಎಲ್.ಇ. ಸಂಸ್ಥೆಯ, ರಾಜ-ರಾಜೇಶ್ವರಿ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯ, ರಾಣೇಬೆನ್ನೂರು. ದಿನಾಂಕ 10-12-2021 ರಂದು ಮದ್ಯಾಹ್ನ 12=00 ಗಂಟೆಗೆ ನಮ್ಮ ಮಹಾವಿದ್ಯಾಲಯದಲ್ಲಿ ಅಂತರಾಷ್ಟ್ರೀಯ ಮಾನವ ಹಕ್ಕುಗಳ ದಿನವನ್ನು ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಉಚ್ಛನ್ಯಾಯಾಲಯದ ನ್ಯಾಯವಾದಿಗಳಾದ ಶ್ರೀಮತಿ ಚೇತನಾ ಜಿ.ಎಸ್ ಇವರು ಮಾತನಾಡಿ ಡಿಸೆಂಬರ್ 10 ರಂದೇ ಅಂತರಾಷ್ಟ್ರೀಯ ಮಾನವ ಹಕ್ಕುಗಳ ದಿನವನ್ನು ಆಚರಿಸುವುದರ ಹಿನ್ನಲೆ ಮಾನವ ಹಕ್ಕುಗಳ ಅಗತ್ಯ ವಿವಿಧ ಮಾನವ ಹಕ್ಕುಗಳು ಹಾಗೂ ಹಕ್ಕುಗಳಿಗೆ ಧಕ್ಕೆಯಾದಾಗ ಪಡೆಯಬಹುದಾದ ಕಾನೂನಾತ್ಮಕ ರಕ್ಕಣೆಯನ್ನು ಕುರಿತು ವಿವರಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಮಹಾವಿದ್ಯಾಲಯದ ಪ್ರಾಚಾರ್ಯರಾದ ಪ್ರೊ. ನಾರಾಯಣ ನಾಯಕ ಎ ಮಾತನಾಡಿ, ಕಾನೂನಿನ ಜಾÐನ ಆತ್ಮವಿಸ್ವಾಸವನ್ನು ಹೆಚ್ಚಿಸುತ್ತದೆ. ಕು. ಭೂಮಿಕಾ ಹುಲ್ಮನಿ ಪ್ರಾರ್ಥಿಸಿದರು. ಪ್ರೊ. ಸುಜಾತಾ ಹುಲ್ಲೂರ ಸ್ವಾಗತಿಸಿದರು. ಪ್ರೊ. ವೀರಣ್ಣ ಸಿ. ಕೆ ವಂದಿಸಿದರು. ಕು. ಶಿವಾನಿ ನಿರೂಪಿಸಿದರು. ಮಹಾವಿದ್ಯಾಲಯದ ಎಲ್ಲ ಬೋಧಕ ಮತ್ತು ಬೋಧಕೇತರ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.