Kannada Bigg Boss 7: ಬಿಗ್ ಬಾಸ್ಗೆ ಕಿಚ್ಚನ ಪತ್ನಿ ಪ್ರಿಯಾ ಸುದೀಪ್ ಎಂಟ್ರಿ!
1 min readಬೆಂಗಳೂರು: ಕಳೆದ ಬಾರಿಯ ಬಿಗ್ ಬಾಸ್ ಮನೆಗೆ ಹೋಲಿಸಿದರೆ ಬಿಗ್ ಬಾಸ್ ಏಳನೇ ಆವೃತ್ತಿಯಲ್ಲಿ ಸಾಕಷ್ಟು ಪರಿಚಿತ ಮುಖಗಳಿವೆ. ಕಿರುತೆರೆ ಕಲಾವಿದರು, ಖ್ಯಾತ ಬರಹಗಾರರು ಬಿಗ್ ಬಾಸ್ ಮನೆ ಸೇರಿದ್ದಾರೆ. ಅಂತೆಯೇ ಪ್ರೇಕ್ಷಕರಿಗೆ ಈ ವೀಕೆಂಡ್ನಲ್ಲಿ ವಿಶೇಷ ಉಡುಗೊರೆಯೊಂದು ಸಿಗಲಿದೆ. ಅದೇನೆಂದರೆ, ಪ್ರಿಯಾ ಸುದೀಪ್ ಬಿಗ್ ಬಾಸ್ ವೇದಿಕೆ ಏರಲಿದ್ದಾರೆ.
ಹೌದು, ಶನಿವಾರ-ಭಾನುವಾರದ ಬಿಗ್ ಬಾಸ್ ಕಾರ್ಯಕ್ರಮವನ್ನು ಕಿಚ್ಚ ಸುದೀಪ್ ನಡೆಸಿಕೊಡುತ್ತಾರೆ. ಈ ವೇಳೆ ಎಲಿಮಿನೇಷನ್ ಕೂಡ ನಡೆಯಲಿದೆ. ಜೊತೆಗೆ ಕಿಚ್ಚ ಒಂದು ವಾರದಲ್ಲಿ ಏನೆಲ್ಲ ಆಯ್ತು ಎನ್ನುವುದನ್ನು ಮೆಲುಕು ಹಾಕುತ್ತಾರೆ. ತಪ್ಪಿದ್ದರೆ ತಿದ್ದಿ ಹೇಳುತ್ತಾರೆ. ಅಂತೆಯೇ, ಈ ಬಾರಿ ಕಿಚ್ಚನ ಕುಟುಂಬ ವೇದಿಕೆ ಏರಲಿದೆ.
ಅಷ್ಟಕ್ಕೂ ಇದಕ್ಕೂ ಒಂದು ಪ್ರಮುಖ ಕಾರಣವಿದೆ. ಇಂದು ಕಿಚ್ಚ ಸುದೀಪ್-ಪ್ರಿಯಾ ದಾಂಪತ್ಯಕ್ಕೆ 18 ವರ್ಷಗಳು ತುಂಬಿವೆ. ಈ ಹಿನ್ನೆಲೆಯಲ್ಲಿ ಈ ಸಂಭ್ರವನ್ನು ಬಿಗ್ ಬಾಸ್ ವೇದಿಕೆ ಮೇಲೆ ಆಚರಿಸಲು ಕಲರ್ಸ್ ವಾಹಿನಿ ನಿರ್ಧರಿಸಿದೆ. ಹೀಗಾಗಿ, ಈ ವಾರದ ಬಿಗ್ ಬಾಸ್ ಕಿಚ್ಚನ ಅಭಿಮಾನಿಗಳಿಗೆ ವಿಶೇಷ ಎನಿಸದೆ ಇರದು.
ಒಟ್ಟು, 18 ಸ್ಪರ್ಧಿಗಳು ಬಿಗ್ ಬಾಸ್ ಮನೆ ಸೇರಿದ್ದಾರೆ. ಕುರಿ ಪ್ರತಾಪ್, ಪ್ರಿಯಾಂಕಾ, ರವಿ ಬೆಳಗೆರೆ, ಚಂದನಾ ಅನಂತಕೃಷ್ಣ, ಸಂಗೀತ ನಿರ್ದೇಶಕ / ಗಾಯಕ ವಾಸುಕಿ ವೈಭವ್, ನಟಿ ದೀಪಿಕಾ ದಾಸ್, ನಟ ಜೈ ಜಗದೀಶ್, ಗುರುಲಿಂಗ ಸ್ವಾಮೀಜಿ, ನಟಿ ಭೂಮಿ ಶೆಟ್ಟಿ, ಕಿಶನ್ ಬೆಳಗಲಿ, ನಟಿ ದುನಿಯಾ ರಶ್ಮಿ, ಚಂದನ್ ಆಚಾರ್, ಕಿರುತೆರೆ ನಟಿ ಸುಜಾತಾ, ರಾಜು ತಾಳಿಕೋಟೆ, ನಿರೂಪಕಿ ಚೈತ್ರಾ ವಾಸುದೇವ್, ಚೈತ್ರ ಕೋಟುರ್, ನಟ ಶೈನ್ ಶೆಟ್ಟಿ, ನಟ ಹರೀಶ್ ರಾಜ್ ಬಿಗ್ ಬಾಸ್ ಮನೆಯಲ್ಲಿದ್ದಾರೆ. ಈ ವಾರ ಯಾರು ಎಲಿಮಿನೇಟ್ ಆಗಲಿದ್ದಾರೆ ಎನ್ನುವ ಕುತೂಹಲವೂ ಇದೆ.