ವಿಧಾನ ಪರಿಷತ್ ಚುನಾವಣೆ- ಶಾಂತಿಯುತ ಮತದಾನ
ಹಾವೇರಿ : ಕರ್ನಾಟಕ ವಿಧಾನ ಪರಿಷತ್ ಧಾರವಾಡ ಕ್ಷೇತ್ರ ವ್ಯಾಪ್ತಿಯ ಹಾವೇರಿ ಜಿಲ್ಲೆಯಲ್ಲಿ ಶಾಂತಿಯುತ ಶೇ.99.85 ರಷ್ಟು ಮತದಾನವಾಗಿದೆ.
ಧಾರವಾಡ, ಹಾವೇರಿ ಹಾಗೂ ಗದಗ ಜಿಲ್ಲೆಗಳು ಒಳಗೊಂಡ ಧಾರವಾಡ ವಿಧಾನ ಪರಿಷತ್ ಕ್ಷೇತ್ರದಿಂದ ಇಬ್ಬರು ಅಭ್ಯರ್ಥಿಗಳನ್ನು ಆಯ್ಕೆಮಾಡಲು ಇಂದು ಮತದಾನ ಜರುಗಿತು. ಜಿಲ್ಲೆಯಲ್ಲಿ 230 ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಎಲ್ಲ ಮತಗಟ್ಟೆಗಳಲ್ಲೂ ಶಾಂತಿಯುತವಾಗಿ ಮತದಾನ ಜರುಗಿದೆ.
ಹಾವೇರಿ ಜಿಲ್ಲೆಯಲ್ಲಿ 1613 ಪುರುಷ, 1748 ಮಹಿಳೆಯರು ಸೇರಿದಂತೆ 3361 ಮತದಾರರು ಒಳಗೊಂಡಿದ್ದು, 1611 ಪುರುಷರು ಹಾಗೂ 1745 ಮಹಿಳಾ ಮತದಾರರು ಸೇರಿದಂತೆ 3356 ಜನರು ಮತ ಚಲಾಯಿಸಿದ್ದಾರೆ. ಶೇ.99.88 ಪುರುಷ ಹಾಗೂ ಶೇ.99.83 ಮಹಿಳೆಯರು ತಮ್ಮ ಹಕ್ಕು ಚಲಾವಣೆ ಮಾಡಿದ್ದಾರೆ.
ತಾಲೂಕಾವಾರು ವಿವರದಂತೆ ಸವಣೂರ, ಶಿಗ್ಗಾಂವ, ಹಾವೇರಿ, ರಾಣೇಬೆನ್ನೂರ, ಹಿರೇಕೆರೂರು ಹಾಗೂ ರಟ್ಟಿಹಳ್ಳಿ ತಾಲೂಕಿನಲ್ಲಿ ಶೇ.100 ರಷ್ಟು ಮತದಾನವಾಗಿದೆ. ಹಾನಗಲ್ ತಾಲೂಕಿನಲ್ಲಿ ಶೇ.99.66 ಹಾಗೂ ಬ್ಯಾಡಗಿಯಲ್ಲಿ ಶೇ.99.35ರಷ್ಟು ಮತದಾನವಾಗಿದೆ. ಸವಣೂರಿನಲ್ಲಿ 340 ಜನ, ಶಿಗ್ಗಾಂವಿಯಲ್ಲಿ 377 ಜನ, ಹಾನಗಲ್‍ನಲ್ಲಿ 625 (ಒಟ್ಟು 626)ಜನ, ಹಾವೇರಿಯಲ್ಲಿ 535 ಜನ, ರಾಣೇಬೆನ್ನೂರಿನಲ್ಲಿ 630, ಬ್ಯಾಡಗಿಯಲ್ಲಿ 318(ಒಟ್ಟು 319) ಜನ, ಹಿರೇಕೆರೂರಿನಲ್ಲಿ 281 ಜನ ಹಾಗೂ ರಟ್ಟಿಹಳ್ಳಿಯಲ್ಲಿ 250 ಜನ ಮತ ಚಲಾಯಿಸಿದ್ದಾರೆ.