ಕೋಳಿ ಮಾಂಸದಂಗಡಿ ದುರ್ವಾಸನೆ… ನಾಚಿಗೆಯಾಗದ ನಗರಸಭೆ
ರಾಣೇಬೆನ್ನೂರು : ಉತ್ತರ ಕರ್ನಾಟಕದ ಹೆಬ್ಬಾಗಿಲು ರಾಣೇಬೆನ್ನೂರು ಮಧ್ಯ ಕರ್ನಾಟಕದ ಕೇಂದ್ರಭಾಗವೂ ಹೌದು. ಇಲ್ಲಿ ನಾಗರೀಕ ಸಂಸ್ಕøತಿ ಇದೆ ಎಂಬ ವ್ಯಾಪಕ ಪ್ರಶಂಸೆ ಪ್ರಪಂಚದಾದ್ಯಂತ ಇದೆ. ಇಲ್ಲಿ ಆಹಾರ ಸಂಸ್ಕøತಿ, ಪರಿಸರ ಸಂಸ್ಕøತಿ, ನಾಗರೀಕ ಸಂಸ್ಕøತಿ ಇನ್ನೂ ಅಭಿವೃದ್ಧಿಯ ಪಥದಲ್ಲಿಯೇ ಇದೆ. ನಾಗರೀಕ ಜಗತ್ತಿಗೆ ಮಾದರಿಯಾಗಬೇಕಾಗಿದ್ದ ಕರ್ನಾಟಕದ ಕೇಂದ್ರ ಭೂಭಾಗವೇ ನಗರದ ಸ್ಟೇಷನ್ ರಸ್ತೆಯ ಮೇಡ್ಲೇರಿ ಕ್ರಾಸಿನ ಸರ್ಕಲ್.
ಈ ಸರ್ಕಲ್ ಅತ್ಯಂತ ಹೆಚ್ಚಿನ ಜನನಿಬಿಡ ಮಹಾಸ್ಥಳ. ಮೂರು ದಿಕ್ಕಿನಿಂದ ವಾಹನಗಳು ಸಂಚರಿಸುತ್ತವೆ. ಎಂಟು ದಿಕ್ಕಿನ ವ್ಯಾಪಾರ ವಹಿವಾಟು ನಡೆಯುತ್ತದೆ. ಇಲ್ಲಿ ಪರಿಮಳಯುಕ್ತವಾಗಿ ಇರಬೇಕಾದ ಪರಿಸರ ಗಬ್ಬೆದ್ದು ನಾರುತ್ತಿದೆ. ನಾಗರೀಕರು ಹೇವರಿಕೆ ಪಟ್ಟುಕೊಳ್ಳುವಷ್ಟರ ಮಟ್ಟಿಗೆ ಹೇಳಿಕೊಳ್ಳುವ ದುರ್ವಾಸನೆ ದಟ್ಟವಾಗಿದೆ. ದಿಟವಾಗಿ ಹೇಳಬೇಕೆಂದರೆ ಇಲ್ಲಿ ಕೋಳಿ ಮಾಂಸ ಮಾರಾಟವಾಗುತ್ತದೆ. ಕೋಳಿಪುಚ್ಚಗಳು ರಸ್ತೆ ತುಂಬೆಲ್ಲಾ ಹರಿದಾಡುತ್ತವೆ, ಕೋಳಿಗಳ ಹಿಕ್ಕೆಯು ರಸ್ತೆಯ ತುಂಬೆಲ್ಲಾ ಹರಡಿ ಆ ದಾರಿಯಲ್ಲಿ ಸಾಗುವ ದಾರಿಹೋಕರ ಕಾಲಿಗೆ, ವಾಹನಗಳ ಗಾಲಿಗೆ ಮೆತ್ತಿಕೊಂಡು ಇಡೀ ರಾಣೇಬೆನ್ನೂರು ನಗರವೇ ಗಬ್ಬೆದ್ದು ಹೋಗಿದೆ. ಇದರಿಂದ ರೋಸಿಹೋಗಿರುವ ನಾಗರೀಕರು ನಗರಸಭೆಯ ಪೌರಾಯುಕ್ತರಿಗೆ ಕ್ಯಾಕರಿಸಿ… ಕ್ಯಾಕರಿಸಿ… ಉಗಿಯುತ್ತಿದ್ದಾರೆ. ಉಗಿದದ್ದನ್ನು ಪ್ರಸಾದÀವೆಂಬಂತೆ ಸ್ವೀಕರಿಸಿಕೊಂಡು ಮೈಕೊಡವಿಕೊಂಡು ಹೋಗುವ ಇಂತಹಾ ಪೌರಾಯುಕ್ತರಿಂದಾಗಿ ರಾಣೇಬೆನ್ನೂರು ನಗರ ವಿಶ್ವವಾಣಿಜ್ಯ ನಗರವೆಂಬ ಖ್ಯಾತಿಯು ಗಲೀಜೆದ್ದು ಅಪಖ್ಯಾತಿಗೆ ಒಳಗಾಗುವಂತೆ ನಗರಸಭೆಯ ಆಡಳಿತ ಅನಾಗರೀಕತೆ ಪ್ರದರ್ಶನವಾಗಿದೆ.
ಈ ದರಿದ್ರ ನಗರಸಭೆಯ ಸದಸ್ಯರು ಅದೆಲ್ಲಿ ಕಾಲೆತ್ತಿ ಮಲಗಿದ್ದಾರೋ ಗೊತ್ತಿಲ್ಲ. ಇವರಿಗೆ ನಾಚಿಕೆ ಮರ್ಯಾದೆ ಬೇಡವೇ..? ಎಷ್ಟು ಅಂತ ಹೇಳುವುದು, ಇಂತಹಾ ಅನಾಗರೀಕರನ್ನು ಚುನಾವಣೆಯಲ್ಲಿ ಗೆಲ್ಲಿಸಿರುವುದೇ ದೊಡ್ಡ ಅಪರಾಧವಾಗಿ ನಾಗರೀಕ ಜನರನ್ನು ಕಾಡುತ್ತಿದೆ. ಅವಿವೇಕಿಗಳು, ಭ್ರಷ್ಟರು, ದುಷ್ಟರು, ಕಳ್ಳಕಾಕರು ನಗರದ ಸ್ವÀಚ್ಛತೆಯನ್ನು ಕಾಪಾಡುವಲ್ಲಿ ನಿರ್ಲಕ್ಷ್ಯ ತೋರಿರುವುದರಿಂದ ಈ ಭಾಗದಲ್ಲಿ ಜನ ಓಡಾಡದ ಪರಿಸ್ಥಿತಿ ನಿರ್ಮಾಣವಾಗಿದೆ. ಇವರಿಗೆ ಒಂದಿಷ್ಟು ಮನುಷ್ಯತ್ವ ಬೇಡವೇ..? ಇಲ್ಲಿನ ಕೋಳಿಗಳ ಮಾಂಸ ಮಾರಾಟ ಮಾಡುವ ಮಳಿಗೆಗಳನ್ನು ಬೇರೆಡೆಗೆ ಸ್ಥಳಾಂತರಿಸಲು ಏನು ದಾಡಿ.. ನಗರಸಭೆಯ ಎಲ್ಲಾ ಅಧಿಕಾರಿಗಳು, ಸಿಬ್ಬಂದಿಗಳೂ ಮತ್ತು ಜನಪ್ರತಿನಿಧಿಗಳ ಎಲ್ಲಾ ಕುಟುಂಬಗಳ ಸದಸ್ಯರನ್ನು ತಂದು ಈ ಸ್ಥಳದಲ್ಲಿ 24 ಗಂಟೆಗಳ ಕಾಲ ನಿಲ್ಲಿಸಿ, ಈ ಗಬ್ಬು ದುರ್ವಾಸನೆಯನ್ನು ಅನುಭವಿಸುವ ಶಿಕ್ಷೆ ವಿಧಿಸಬೇಕಾಗಿದೆ. ಹೀಗಾದಾಗ ಮಾತ್ರ ಸ್ವಲ್ಪ ಸುಧಾರಣೆ ಆಗಬಹುದೇನೋ.. ಅವರ ಮನೆಯೊಳಗಿಂದ ಸ್ವಚ್ಛತೆಯ ಕ್ರಾಂತಿಗೆ ದಂಗೆ ಎದ್ದರೆ ಬಹುಶಃ ರಾಣೇಬೆನ್ನೂರಿನ ನಾಗರೀಕರ ಮಾನ, ಮರ್ಯಾದೆ ಉಳಿದೀತು ಎಂಬ ನಿರೀಕ್ಷೆಯನ್ನು ರಾಣೇಬೆನ್ನೂರಿನ ಸುಸಂಸ್ಕøತ ಜನ ನಂಬಿದ್ದಾರೆ. ಆದ್ದರಿಂದ ನಗರಸಭೆಯಲ್ಲಿರುವ ತಿಮಿಂಗಿಲಗಳು ಮತ್ತು ಹೆಗ್ಗಣಗಳಿಗೆ ತಕ್ಕ ಶಿಕ್ಷೆಯನ್ನು ನೀಡಲು ಅವರ ಕುಟುಂಬ ಸದಸ್ಯರು ಮುಂದಾಗಬೇಕಾದ ಅಗತ್ಯವಿದೆ ಎಂದು ನಾಗರೀಕರು ಸಿಡಿಮಿಡಿಗೊಂಡಿದ್ದಾರೆ.
ಈ ಜನಪ್ರತಿನಿಧಿಗಳಿಗೆ ಮಾನ, ಮರ್ಯಾದೆ ಇದ್ದುದ್ದೇ ಆದರೆ ಮೊದಲು ನಗರದ ಮೇಡ್ಲೇರಿ ಸರ್ಕಲ್‍ನ ಬಳಿಯಿರುವ ಕೋಳಿಗಳ ಮಾಂಸದ ಅಡ್ಡಾವನ್ನು ಸ್ಥಳಾಂತರ ಮಾಡಿ ಸಾರ್ವಜನಿಕ ಹಿತಾಸಕ್ತಿಯನ್ನು ಕಾಪಾಡಲು ಯಾರಾದರೂ ಮುಂದಾದಾರೇ… ಕಾದುನೋಡಬೇಕಿದೆ.