10 ತಿಂಗಳಿಂದ ಸಂಬಳ ಸಿಗದೇ ಪರದಾಡುತ್ತಿರುವ ಆಶಾ ಕಾರ್ಯಕರ್ತರು
1 min readರಾಣೇಬೆನ್ನೂರು : ನಗರದಲ್ಲಿ ಆರೋಗ್ಯ ಇಲಾಖೆಯ ಯಾವುದೇ ಕೆಲಸ ನಡೆಯಬೇಕೆಂದರೆ ಆಶಾ ಕಾರ್ಯಕರ್ತರು ಸಾವಿರ ಜನಸಂಖ್ಯೆಗೊಬ್ಬರಂತೆ ಬೇಕೇ ಬೇಕು. ಇವರಿಲ್ಲವೆಂದರೆ ಆರೋಗ್ಯ ಇಲಾಖೆ ಬಂದ್.. ಬಂದ್.. ಬಂದ್..
ನಗರದ ಆಶಾ ಕಾರ್ಯಕರ್ತರಿಗೆ ಸರ್ಕಾರದಿಂದ ಕೊಡುವ ಸಂಬಳ 3,500 ರೂ. ಮಾತ್ರ. ಜತೆಗೆ ಕೆಲವೇ ಕೆಲವು ತಾಯಿ ಮತ್ತು ಮಕ್ಕಳ ಆರೋಗ್ಯಕ್ಕೆ ಸಂಬಂಧಿಸಿದ ಫಲಾನುಭವಿಗಳನ್ನು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಎರಡು ದಿನಗಟ್ಟಲೆ ಉಳಿಯಬೇಕಾದ ಸಂದರ್ಭ ಬಂದರೂ ಕೂಡಾ ಉಳಿದುಕೊಂಡು ಕೇವಲ ನೂರಿನ್ನೂರು ರೂ.ಗಳಿಗೆ ಫಲಾನುಭವಿಗಳೊಂದಿಗೆ ಆಸ್ಪತ್ರೆಯಲ್ಲೇ ಇರಬೇಕಾದ ಇಂತಹಾ ಪರಿಸ್ಥಿತಿ ಅನುಭವಿಸುತ್ತಿದ್ದಾರೆ. ಕಿಲುಬುಕಾಸು ಕೊಟ್ಟು ಲಕ್ಷ ರೂ. ಪಗಾರ ಕೊಡುತ್ತಾರೇನೋ ಎಂಬಂತೆ ಧಿಮಾಕು ತೋರಿಸುವ ಆರೋಗ್ಯ ಇಲಾಖೆಯವರು ಆಶಾ ಕಾರ್ಯಕರ್ತರಿಂದಲೂ ಸಹಾ ಪಗಾರ ನೀಡಲು ತಾಲ್ಲೂಕಿಗೊಬ್ಬರಂತೆ ಇರುವ ಆಶಾ ಮೆಂಟರ್‍ಗಳ ಜೊತೆಗೆ ಲಂಚ ಹೊಡೆಯುವ ಲಂಚಕೋರರು ಆರೋಗ್ಯ ಇಲಾಖೆಯ ಮಾನ-ಮರ್ಯಾದೆಯನ್ನು ಬೀದಿಗೆ ತಂದು ನಿಲ್ಲಿಸಿದ್ದಾರೆ.
ರಾಣೇಬೆನ್ನೂರು ನಗರಕ್ಕೆ ಸಂಬಂಧಿಸಿದಂತೆ ಕಾರ್ಯ ನಿರ್ವಹಿಸುವ 27 ಆಶಾ ಕಾರ್ಯಕರ್ತರಿಗೆ ಕಳೆದ 10 ತಿಂಗಳುಗಳಿಂದ ಯಾವುದೇ ವೇತನ ಅಥವಾ ಹಣಕಾಸಿನ ನೆರವು ನೀಡದೇ ಕತ್ತೆ ದುಡಿಸಿಕೊಂಡಂತೆÉ ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ. ತಾಲ್ಲೂಕಿನ ತಾಲ್ಲೂಕು ಆರೋಗ್ಯಾಧಿಕಾರಿಗಳು ಹಾಗೂ ಇವರ ಅಡಿಯಲ್ಲಿ ಕೆಲಸ ಮಾಡುವ ಮೆಂಟರ್‍ಗಳು ವೇತನ ಕೇಳುವ ಆಶಾ ಕಾರ್ಯಕರ್ತರಿಗೆ ವೇತನ ಕಟ್ ಇರುವ ಕೆಲಸವೇ ಕಟ್.. ಎಂದು ಬರೀ ಕಟ್..ಕಟ್… ಎಂದು ಮಾತಾಡುತ್ತಿದ್ದಾರೆ. ಈ ತಾಲ್ಲೂಕು ಆರೋಗ್ಯಾಧಿಕಾರಿಗಳು ಹಾಗೂ ಮೆಂಟರ್‍ಗಳನ್ನೇ ಕಟ್ ಮಾಡಿದರೆ ಹೇಗೆ..? ಎಂಬ ಚಿಂತನೆ ಸಮಾಜದಲ್ಲಿ ಈಗ ನಡೆಯುತ್ತಿದೆ. ಒಂದು ತಿಂಗಳು ಪಗಾರ ಸಿಗದಿದ್ದರೆ ಖಾಯಂ ಸರ್ಕಾರಿ ನೌಕರರು ಸುಮ್ಮನಿರುತ್ತಾರೆ. ಇವರಿಗೆ 10 ತಿಂಗಳುಗಳ ಪಗಾರ ಕೊಡದಿದ್ದರೆ ಮಾಡಬಾರದ್ದನ್ನು ಮಾಡುತ್ತಾರೆ. ಇಂತಹಾ ತಿಮಿಂಗಿಲಗಳು ಆರೋಗ್ಯ ಇಲಾಖೆಯಲ್ಲಿ ಆಶಾ ಕಾರ್ಯಕರ್ತರನ್ನು ಬಾಯಿಗೆ ಬಂದಂತೆ ಬೈಯುವುದು, ವೇತನ ಕೊಡದೇ ಸತಾಯಿಸುವುದು, ವೇತನ ಕೇಳಿದರೆ ಕೆಲಸದಿಂದಲೇ ತೆಗೆಯುವ ಬೆದರಿಕೆ, ವೇತನ ಕೊಡಲೂ ಸಹ ಲಂಚದ ಬೇಡಿಕೆ ಒಂದೇ.. ಎರಡೇ.. ಈ ತಾಯಂದಿರು ಹೇಗೆ ಸಮಾಜದಲ್ಲಿ ಕೆಲಸ ಮಾಡಬೇಕು. ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ನಾಚಿಕೆಯಾಗಬೇಕು. ಸರ್ಕಾರ ಆರೋಗ್ಯ ಇಲಾಖೆಗೆ ನೀಡುವ ಸಾವಿರಾರು ಕೋಟಿ ರೂ.ಗಳನ್ನು ತಿಂದು ತೇಗುತ್ತಿರುವ ಕಾರ್ಯಕ್ರಮಾಧಿಕಾರಿಗಳೂ, ತಾಲ್ಲೂಕು ಆರೋಗ್ಯಾಧಿಕಾರಿಗಳು, ಆಶಾ ಮೆಂಟರ್‍ಗಳು ಇವರನ್ನೆಲ್ಲಾ ಬೀದಿಗೆ ತಂದು ನಿಲ್ಲಿಸಿ.. ಕೂಳು..ಕೂಳು.. ನೀರು.. ನೀರು.. ಎನ್ನಬೇಕು. ಆ ರೀತಿ ಒದರಿಸಿದರೆ ಇವರಿಗೆ ಮನುಷ್ಯತ್ವದ ಅರಿವು ಆಗಬಹುದೇನೋ..?