ಸೇನಾ ಮುಖ್ಯಸ್ಥ ಬಿಪಿನ್ ರಾವತ್‍ರಿಗೆ ಭಾವಪೂರ್ಣ ಶ್ರದ್ಧಾಂಜಲಿ
ಹಿರೇಕೆರೂರು : ಪಟ್ಟಣದ ಸಿಇಎಸ್ ವಿದ್ಯಾ ಸಂಸ್ಥೆಯ ವಿವಿಧ ಶಾಲಾ ಕಾಲೇಜುಗಳ ವತಿಯಿಂದ ಡಿಸೆಂಬರ 8 ರಂದು ತಮಿಳುನಾಡಿನ ವೆಲ್ಲಿಂಗ್‍ಟನ್‍ನಲ್ಲಿ ಉಪನ್ಯಾಸ ನೀಡಲು ಹೊರಟ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹಾಗೂ ರಾವತ್ ಪತ್ನಿ, ಸೇನಾ ಸಿಬ್ಬಂದಿ ಹೆಲಿಕ್ಯಾಪ್ಟರ್ ಅಪಘಾತದಲ್ಲಿ ವಿಧಿವಶರಾದ ಹಿನ್ನೆಲೆ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಕಾರ್ಯಕ್ರವನ್ನು ಆಚರಿಸಲಾಯಿತು.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಸಂಸ್ಥೆಯ ಗೌರವ ಕಾರ್ಯದರ್ಶಿ ಎಸ್.ಎಸ್.ಪಾಟೀಲ, ರಾವತ್ ಅವರು ದೇಶ ಕಂಡ ದಕ್ಷ ಭಾರತೀಯ ಸೇನಾ ಮುಖ್ಯಸ್ಥರಲೊಬ್ಬರು. ಭಾರತ ದೇಶದ 26 ನೇ ಸೇನಾ ಮುಖ್ಯಸ್ಥರಾಗಿ ಅಮೋಘ ಸೇವೆ ಸಲ್ಲಿಸಿದ ರಾವತ್‍ರವರು ರಾಷ್ಟ್ರೀಯ ಅಕ್ಯಾಡಮಿ, ಇಂಡಿಯನ್ ಮಿಲಿಟರಿ ಅಕ್ಯಾಡಮಿ ಯುಎಸ್ ಆರ್ಮಿ ಕಮಾಂಡೊ ಹೀಗೆ ದೇಶ ಸೇನಾ ವಿಭಾಗದ ಉನ್ನತ ಹುದ್ದೆಗಳನ್ನಲಂಕರಿಸಿ ದೇಶದ ಪ್ರಪಥಮ ಸಿಡಿಎಸ್ ಮುಖ್ಯಸ್ಥರಾಗಿ ಅಪ್ರತಿಮ ಸೇವೆ ಸಲ್ಲಿಸಿದ ಮಹಾ ದಂಡನಾಯಕ ರಾವತ್‍ರವರು. ಡಿಸೆಂಬರ 8 ರಂದು ರಾವತ್ ಅವರ ಪತ್ನಿ ಹಾಗೂ ಸೇನಾ ಸಿಬ್ಬಂದಿಯವರೊಂದಿಗೆ ತಮಿಳುನಾಡಿನ ವೆಲ್ಲಿಂಗ್‍ಟನ್‍ನಲ್ಲಿ ಉಪನ್ಯಾಸ ನೀಡಲು ಹೊರಟ ಸಮಯದಲ್ಲಿ ಹೆಲಿಕ್ಯಾಪ್ಟರ್ ಅಪಘಾತದಲ್ಲಿ ವಿಧಿವಶರಾದ ಸುದ್ದಿ ಭಾರತ ದೇಶಕ್ಕೆ ಬರಸಿಡಿಲೆರಗಿದಂತಾಯಿತು. ದೇಶದ ಧೀರ ಪುತ್ರರನ್ನು ಕಳೆದುಕೊಂಡ ಭಾರತ ಮಾತೆಗೆ ತುಂಬಲಾರದ ನಷ್ಟವಾಗಿದೆ ಎಂದರು.
ಮಾಜಿ ಸೈನಿಕ ಸಂಘದ ತಾಲೂಕ ಅಧ್ಯಕ್ಷ ಇ.ಕೆ.ಮರಕಳ್ಳಿ ಮಾತನಾಡಿ, ರಾವತ್ ಅವರು ತಮ್ಮ 43 ವರ್ಷಗಳ ವೃತ್ತಿ ಜೀವನದಲ್ಲಿ ಭಾರತೀಯ ವಿವಿಧ ಹುದ್ದೇಗಳನ್ನು ಸಮರ್ಥವಾಗಿ ನಿರ್ವಹಿಸುವ ಮೂಲಕ ಸೇನೆಯ ಅತ್ಯನ್ನತ್ತ ಮೇಜರ ಜನರಲ್ ಹುದ್ದೆಯನ್ನಲಂಕರಿಸಿ ಭಾರತ ದೇಶ ಎಂದೂ ಮರೆಯದ ಸೇನಾನಾಯಕರಾಗಿ ನಮ್ಮಿಂದ ದೂರವಾಗಿದ್ದು ಇಂತಹ ಅಮರ ಪುತ್ರರು ಮತ್ತೊಮ್ಮೆ ಹುಟ್ಟಿ ಬರಲೆಂದು ಬಯಸಿ ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂಬುದೇ ನಮ್ಮ ಕೊನೆಯ ಹಾರೈಕೆಯಾಗಿದೆ.
ಈ ಸಂಧರ್ಭದಲ್ಲಿ ಸಂಸ್ಥೆಯ ಆಡಳಿತಾಧಿಕಾರಿ ಎಸ್.ವೀರಭದ್ರಯ್ಯ, ಮಾಜಿ ಸೈನಿಕರಾದ ಆಂಜನೇಯ ಹೊಸಕಟ್ಟಿ, ವಿಶ್ವನಾಥ ಬಿ.ಪಿ, ಮಲ್ಲನಗೌಡ ಕೋರಿಗೌಡ್ರ, ಲೋಕೇಶ ಮುತ್ತಗಿ, ರಾಜು ಲಮಾಣಿ, ಡಾ.ಎಸ್.ಬಿ.ಚನ್ನಗೌಡರ, ಏಕೇಶ ಬಣಕಾರ, ರಾಜು ಕರೇಗೌಡರ, ಪರಮೇಶಪ್ಪ ಡಮ್ಮಳ್ಳಿ, ಬಿ.ವಿ.ಸನ್ನೇರ, ನಾಗರಾಜ ಎಚ್.ಪಿ, ಆರ್.ಎಚ್.ಪೂಜಾರ, ಎಂ.ಎಸ್.ಪಾಟೀಲ, ಸಿ.ಬಿ.ಚಂದ್ರಕೇರಿ, ಸಿ.ಆರ್.ದೂದೀಹಳ್ಳಿ, ಕೆ.ಎಂ.ಮರಡಿಬಣಕಾರ, ಜಿ.ಎಚ್.ಮತ್ತೂರ, ಮಲ್ಲನಗೌಡ ಮುದಿಗೌಡರ, ಎಸ್.ಸಿ.ಗೀತಾವಾಣಿ, ವಿ.ಎಸ್.ಗೋದೇರ ಹಾಗೂ ಸಂಸ್ಥೆಯ ಸಹಸ್ರಾರು ವಿದ್ಯಾರ್ಥಿಗಳು ಇತರರಿದ್ದರು.