Sun. Feb 6th, 2022

ಪಾಂಡವ ನ್ಯೂಸ್

ಸಮಾಜದ ಧ್ವನಿ

ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ: ಜಿಲ್ಲೆಯ 10 ಗ್ರಾ.ಪಂ.ಗಳಿಗೆ ಉಪ ಚುನಾವಣೆ : ಜಿಲ್ಲಾಧಿಕಾರಿ

1 min read

ಹಾವೇರಿ : ಜಿಲ್ಲೆಯ ಆರು ತಾಲೂಕುಗಳ 10 ಗ್ರಾಮ ಪಂಚಾಯತಿಗಳಲ್ಲಿ ವಿವಿಧ ಕಾರಣದಿಂದ ತೆರವಾದ ಸ್ಥಾನಗಳಿಗೆ ಉಪ ಚುನಾವಣೆ ಜರುಗಿಸಲು ಡಿಸೆಂಬರ್ 13 ರಂದು ಅಧಿಸೂಚನೆ ಹೊರಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಅವರು ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹಾವೇರಿ ತಾಲೂಕಿನ 5-ದೇವಿಹೊಸೂರ, 14-ಕಳ್ಳಿಹಾಳ ಹಾಗೂ 33-ನೆಲೋಗಲ್, ಬ್ಯಾಡಗಿ ತಾಲೂಕಿನ 14-ಕದರಮಂಡಲಗಿ, ರಾಣೇಬೆನ್ನೂರ ತಾಲೂಕಿನ 5-ಹಲಗೇರಿ ಹಾಗೂ 38 ಸೋಮಲಾಪೂರ, ರಟ್ಟಿಹಳ್ಳಿ ತಾಲೂಕಿನ 18-ಕುಂಚೂರ, ಶಿಗ್ಗಾಂವ ತಾಲೂಕಿನ 9-ಹೋತನಹಳ್ಳಿ ಹಾಗೂ ಹಾನಗಲ್ ತಾಲೂಕಿನ 27-ಸುರಳೇಶ್ವರ ಮತ್ತು 33-ಸೋಮಸಾಗರ ಗ್ರಾಮ ಪಂಚಾಯತಿಗಳಿಗೆ ಉಪ ಚುನಾವಣೆ ಜರುಗಲಿದೆ ಎಂದು ತಿಳಿಸಿದರು.
ಮತದಾರರ ಪಟ್ಟಿ ತಯಾರಿಕೆ ಅಂತಿಮ ಹಂತದಲ್ಲಿದೆ, 14 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಪ್ರತಿ ಪಂಚಾಯತಿಗೆ ಓರ್ವ ಚುನಾವಣಾಧಿಕಾರಿ ಹಾಗೂ ಓರ್ವ ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಮತಗಟ್ಟೆ ಸಿಬ್ಬಂದಿಗಳನ್ನು ನೇಮಕಾತಿ ಮಾಡಿ ತಹಶೀಲ್ದಾರ ಹಂತದಲ್ಲಿ ಸೂಕ್ತ ತರಬೇತಿ ನೀಡಲಾಗುವುದು. ಆಯಾ ತಹಶೀಲ್ದಾರ ಕಚೇರಿಗಳಲ್ಲಿ ಮಸ್ಟರಿಂಗ್, ಡಿ ಮಸ್ಟರಿಂಗ್ ಹಾಗೂ ಎಣಿಕೆ ಕಾರ್ಯ ನಡೆಸಲಾಗುವುದು ಎಂದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಎನ್.ತಿಪ್ಪೇಸ್ವಾಮಿ, ಚುನಾವಣಾ ತಹಶೀಲ್ದಾರ ಎ.ಬಿ.ಪಾಟೀಲ ಉಪಸ್ಥಿತರಿದ್ದರು.

  •  
  •  
  •  
  •  
  •  
  •  

Leave a Reply

Your email address will not be published.

Copyright © All rights reserved. | Developed by EXPOLOG TECHNOLOGIES
error: Content is protected !!