Sun. Oct 17th, 2021

ಪಾಂಡವ ನ್ಯೂಸ್

ಸಮಾಜದ ಧ್ವನಿ

ಸೇವಾಭಾರತಿ ಟ್ರಸ್ಟ್ ಗೆ ನೆಹರು ಓಲೇಕಾರ ಅಂಬುಲೇನ್ಸ್ ಹಸ್ತಾಂತರ: ಸೇವಾಭಾರತಿ ಸಾರ್ವಜನಿಕರಿಂದ‌ ಸಾರ್ವಜನಿಕರಿಗಾಗಿ ಇರುವಂತ ಟ್ರಸ್ಟ್: ನೆಹರು ಓಲೇಕಾರ

1 min read

ಹಾವೇರಿ: ಕೋವಿಡ್ ಮೊದಲ‌ ಹಾಗೂ ಎರಡನೇ ಅಲೆಯಿಂದ‌ ಅನೇಕ ಜನರು ಜೀವ ಕಳೆದುಕೊಂಡಿದ್ದಾರೆ.‌ ತಜ್ಞರು ಸಧ್ಯದಲ್ಲಿ ಮ‌ೂರನೇ ಅಲೆ ಬಗ್ಗೆ ಎಚ್ಚರಿಕೆ ನೀಡಿದ್ದು, ರೋಗದ ಲಕ್ಷಣಗಳು ಕಂಡು ಬಂದರೆ ತಕ್ಷಣ ಸರಕಾರಿ ವೈದ್ಯರನ್ನು ಸಂಪರ್ಕಿಸುವಂತೆ ಶಾಸಕರು ಹಾಗೂ ಪರಿಶಿಷ್ಟ ಜಾತಿ – ಪರಿಶಿಷ್ಟ ಪಂಗಡ ಆಯೋಗದ ಅಧ್ಯಕ್ಷ ನೆಹರು ಓಲೇಕಾರ ಜನರಿಗೆ ಸಲಹೆ ನೀಡಿದ್ದಾರೆ.‌

ಸೋಮವಾರ ನಗರದ ಪ್ರವಾಸಿ ಮಂದಿರದಲ್ಲಿ ಸೇವಾಭಾರತಿ ಟ್ರಸ್ಟ್ ಗೆ ಶಾಸಕರ ಅನುದಾನದಲ್ಲಿ ಖರೀದಿಸಿದ ಅಂಬುಲೇನ್ಸ್ ಹಸ್ತಾಂತರ
ಮತ್ತು ಕೋವಿಡ್ 2 ನೇ ಅಲೆಯ ಸೇವಾ ಭಾರತಿಯಿಂದ ಕೈಗೊಂಡ ಸೇವಾ ಮಾಹಿತಿಯ ಕಿರುಪುಸ್ತಕವನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

ಕೊರೊನಾ ಲಕ್ಷಣಗಳು ಕಂಡುಬಂದರೆ ಜನರು ಖಾಸಗಿ ಆಸ್ಪತ್ರೆಯ ಬದಲಿಗೆ ಸರಕಾರಿ ವೈದ್ಯರನ್ನು ಭೇಟಿಯಾಗಬೇಕು. ಖಾಸಗಿ ಆಸ್ಪತ್ರೆಗೆ ಹೋದರೆ, ನಿಮ್ಮ ರೋಗ ಗುಣಪಡಿಸುವ ಮಟ್ಟವನ್ನು ಮೀರಿ ಹೋಗುವ ಸಾಧ್ಯತೆ ಇರುತ್ತದೆ. ಜನರ ಆರೋಗ್ಯದಲ್ಲಿ ಎನಾದರು ವ್ಯತ್ಯಾಸವಾದರೇ ತಕ್ಷಣ ವೈದ್ಯರನ್ನು ಭೇಟಿಯಾಗಬೇಕು ಎಂದು ತಿಳಿಸಿದರು. ‌

ಶಾಸಕರು ಹಾವೇರಿ, ಸೇವಾ ಭಾರತಿ ಟ್ರಸ್ಟ್, ಹಾಗೂ ಬಹದ್ದೂರ್ ದೇಸಾಯಿ ಮೋಟರ್ಸ್ ಸಹಯೋಗದೊಂದಿಗೆ ಕೊರೊನಾ ಸಂಕಷ್ಟ ಸಮಯದಲ್ಲಿ ತಜ್ಞ ವೈದ್ಯರಿಂದ ವೈದ್ಯಕೀಯ ಸಲಹೆ, ನೆರವು ಜೊತೆಗೆ ಈ-ಕನ್ಸಲ್ಟಷನ್ ಮತ್ತು ಊಟೋಪಚಾರವದ ವ್ಯವಸ್ಥೆ ಮಾಡುವ ಮೂಲಕ ಜಿಲ್ಲೆಯಲ್ಲಿ ಸದ್ದಿಲ್ಲದೇ ಸಾವಿರಾರು ಜನರ ಕಷ್ಟಕ್ಕೆ ನೆರವು ನೀಡಿದೆ. ದಿ. 24-05-2021 ರಿಂದ ದಿ. 09-07-2021 ರವರೆಗೆ 1205 ಹೋಂ ಐಸೋಲೇಷನ್‍ನಲ್ಲಿ ಇರುವ ಸೋಂಕಿತರನ್ನು ನಾವು ಸಂಪರ್ಕಿಸಿದ್ದೇವೆ. 47 ದಿನಗಳಲ್ಲಿ 4661 ಕರೆಗಳನ್ನು ನಿರ್ವಹಿಸಲಾಗಿದೆ. 120 ಪ್ರೀ ಕೋವಿಡ್ ಕಿಟ್, 450 ಪೋಸ್ಟ್ ಕೋವಿಡ್ ಕಿಟ್, ಪಲ್ಸ್ ಆಕ್ಸಿ ಮೀಟರ್ 65 ವಿತರಣೆ ಮಾಡಲಾಗಿದೆ.

85 ಸೊಂಕಿತರು ಒಟ್ಟು 505 ದಿನಗಳ ಕಾಲ ಆಕ್ಸಿಜನ್ ಕಾನ್ಸನ್ಸ್ರಟೇಟರ್‍ಗಳನ್ನು ಪಡೆದುಕೊಂಡಿದ್ದಾರೆ. 181 ಜನರು ಸಹಾಯವಾಣಿಗೆ ಕರೆ ಮಾಡಿ ಆಕ್ಸಿಜನ್ ಬೆಡ್, ಅಂಬ್ಯುಲೇನ್ಸ್, ಅಂತ್ಯಸಂಸ್ಕಾರಕ್ಕೆ ನೆರವು ಹಾಗೂ ಇತರೆ ಸೌಲಭ್ಯ ಪಡೆದುಕೊಂಡಿದ್ದಾರೆ. 49 ಸೋಂಕಿತರು ಮನೆಯಲ್ಲಿ (ವೈದ್ಯಕೀಯ ನೆರವು) ಶುಶ್ರೂಷಕರ ನೆರವು ಪಡೆದುಕೊಂಡಿದ್ದಾರೆ. ಸೇವಾ ಅವಧಿಯಲ್ಲಿ 6 ಲಸಿಕಾ ಜಾಗೃತಿ ಕಾರ್ಯಕ್ರಮ ನಡೆಸಿಕೊಡಲಾಗಿದೆ. ಈ ವೇಳೆ 2500 ಮಾಸ್ಕ್ ವಿತರಣೆ, 500 ಲೀಟರ್ ಸಾನಿಟೈಸರ್ ವಿತರಣೆ ಮಾಡಲಾಗಿದೆ. ಜೊತೆಗೆ 125 ಜನರು ಲಸಿಕೆ ಪಡೆದುಕೊಂಡು ಉಚಿತ ವಾಹನದ ಸೇವೆ ಪಡೆದುಕೊಂಡಿದ್ದಾರೆ. 215 ಸೋಂಕಿತರು ವೈದ್ಯರೊಂದಿಗೆ ಆನ್ ಲೈನ್ ಕನ್ಸಲ್ಟಷನ್ ಪಡೆದುಕೊಂಡಿದ್ದಾರೆ. ಅವಶ್ಯಕತೆಯಿದ್ದ 1115 ಜನರು ಉಪಹಾರದ ವ್ಯವಸ್ಥೆ ಪಡೆದುಕೊಂಡಿದ್ದಾರೆ.

2661 ಸೋಂಕಿತರಿಗೆ ಹಾಗೂ ಕುಟುಂಬಸ್ಥರಿಗೆ ಊಟವನ್ನು ಒದಗಿಸಲಾಗಿದೆ. ಸೋಂಕಿತರಿಗೆ ಆತ್ಮಸ್ಥರ್ಯ ಹೆಚ್ಚಿಸಲು ಪ್ರತಿದಿನ ಗಣ್ಯ ವ್ಯಕ್ತಿಗಳೊಂದಿಗೆ ಸಂವಾದ ನಡೆಸಲಾಗಿದ್ದು, ಇದರ ಸದೂಪಯೋಗವನ್ನು 327 ಸೊಂಕಿತರು ಪಡೆದಿರುತ್ತಾರೆ. ಇದರ ಜೊತೆಗೆ “ಸಂಗೀತ ಸಂಜೀವಿನಿ” ಕಾರ್ಯಕ್ರಮದ ಮೂಲಕ ಕೋಳಲು, ತಬಲ ಹಾಗೂ ಶಹನಾಯಿ ಜಗುಲ್‍ಬಂದಿ ಆನ್ ಲೈನ್ ಸಂಗೀತ ಕಾರ್ಯಕ್ರಮ ನಡೆದಿವೆ. ಎಸ್.ಆರ್.ಎಸ್ ಕರೋಕೆ ತಂಡದಿಂದ ರಸಮಂಜರಿ ಕಾರ್ಯಕ್ರಮವು ನಡೆಯಿತು. ಇವುಗಳನ್ನು ಆನ್‍ಲೈನ್ ನಲ್ಲಿ ಪ್ರಸಾರವಾಗುವ ವೇಳೆ ಲೈವ್ ನಲ್ಲಿ 3000 ಕ್ಕೂ ಅಧಿಕ ಜನರು ವೀಕ್ಷಣೆ ಮಾಡಿದ್ದಾರೆ. ಈ ಕಾರ್ಯಕ್ರಮಗಳನ್ನು ನಿರಂತರವಾಗಿ ನಿಷ್ಠೆಯಿಂದ ಮಾಡಿಕೊಂಡು ಬಂದಿರುವುದು ಹೆಮ್ಮೆಯ ವಿಚಾರವಾಗಿದೆ. ಸೇವಾಭಾರತಿ ಎಂದರೆ ಸಾರ್ವಜನಿಕರಿಂದ‌ ಸಾರ್ವಜನಿಕರಿಗಾಗಿ ಮಾಡುವ ಕೆಲಸವಾಗಿದೆ ಎಂದು ತಿಳಿಸಿದರು. ‌

ಸೇವಾಭಾರತಿಯ ಸಂಸ್ಥಾಪಕ ಟ್ರಷ್ಟಿ ಶ್ರೀಧರ ನಾಡಿಗೇರ ಮಾತನಾಡಿ,
ಸಮಾಜದಲ್ಲಿ ಸೇವೆ ಅಗತ್ಯವನ್ನು ಸಲ್ಲಿಸುವುದಕ್ಕೆ ಸೇವಾ ಭಾರತಿ ಹುಟ್ಟು ಹಾಕಲಾಗಿದೆ. ಸೇವಾ ಮನೋಭಾವದ ಜನರನ್ನು ಜೋಡಿಸುವ ಕೆಲಸವನ್ನು ಈ ಸಂಸ್ಥೆ ಮಾಡುತ್ತಿದೆ. 20 ವರ್ಷಗಳ ಅವಧಿಯಲ್ಲಿ ಉತ್ತರ ಕರ್ನಾಟಕದಲ್ಲಿ ಹೆಚ್ಚು ಸಕ್ರಿಯವಾಗಿದೆ. ಅನಾಥ ಆಶ್ರಮ, ದತ್ತು ಮಕ್ಕಳ ಸ್ವೀಕಾರ ಕೇಂದ್ರ, ವಿದ್ಯಾರ್ಥಿಗಳ‌ ವಸತಿ‌ ನಿಲಯಗಳನ್ನು, ಸ್ಲಂ ನಿವಾಸಿಗಳ ಮಕ್ಕಳಿಗೆ ಟ್ಯೂ಼ಷನ್ ನೀಡುವ ಮೂಲಕ ಸಮಾಜಮುಖಿ ಕಾರ್ಯ ನಡೆಸಿಕೊಂಡು ಬರಲಾಗಿದೆ. ಸೇವಾ ಭಾರತಿ ಮೂಲಕ 4000 ಗ್ರಾಮದಲ್ಲಿ ಸೇವೆ ಸಲ್ಲಿಸಿದೆ. ಇದರಲ್ಲಿ ಯಾರು ಬೇಕಾದರೂ ತಮ್ಮನ್ನು ತಾವು ತೊಡಗಿಸಿಕೊಳ್ಳಬಹುದು ಎಂದರು.

ಈ ಸಮಯದಲ್ಲಿ ಸೇವಾ ಭಾರತೀಯ ಜಿಲ್ಲಾಧ್ಯಕ್ಷ ಪವನ್ ದೇಸಾಯಿ ಸೇರಿದಂತೆ ಮುಂತಾದವರು ಹಾಜರಿದ್ದರು. ‌

  •  
  •  
  •  
  •  
  •  
  •  

Leave a Reply

Your email address will not be published. Required fields are marked *

Copyright © All rights reserved. | Developed by EXPOLOG TECHNOLOGIES
error: Content is protected !!