ಠಾಣೆಯಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದ ಬಂಕಾಪುರ ಪಿಎಸ್‌ಐ ಅಮಾನತು
ಶಿಗ್ಗಾವಿ : ತಾಲೂಕಿನ ಬಂಕಾಪುರ ಪಟ್ಟಣದ ಪೊಲೀಸ್ ಠಾಣೆ ಪಿ.ಎಸ್.ಐ. ಸಂತೋಷಗೌಡ ಪಾಟೀಲ ರವರು ತಮ್ಮ ಹುಟ್ಟುಹಬ್ಬವನ್ನು ಐ.ಜಿ.ಪಿ. ಪ್ರವೀಣ ಸೂದ್ ರವರು ಹೋರಡಿಸಿದ ಆದೇಶವನ್ನು ದಿಕ್ಕರಿಸಿ ಪೊಲೀಸ್ ಠಾಣೆಯಲ್ಲಿಯೇ ಸಾರ್ವಜನಿಕರೋಂದಿಗೆ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೋಂಡ ಆರೋಪದಡಿ ಪಿ.ಎಸ್.ಐ.ಸಂತೋಷಗೌಡ ಪಾಟೀಲ ರವರನ್ನು ಹಾವೇರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ರವರು ಸಸ್ಪೇಂಡ್ ಮಾಡಿದ್ದಾರೆ.
ಸಾರ್ವಜನಿಕರು ಮಂಗಳವಾರ ಪಿ.ಎಸ್.ಐ.ಸಂತೋಷಗೌಡ ಪಾಟೀಲ ರವರ ಹುಟ್ಟುಹಬ್ಬದ ದಿನದಂದು ಹಾರ ತುರಾಯಿ ಸಿಹಿ ಯೋಂದಿಗೆ ಪೊಲೀಸ್ ಠಾಣೆಗೆ ತೆರಳಿ ಹಾರ ಹಾಕಿ ಸಿಹಿ ತಿನಿಸಿ ಶುಭಾಶಯಗಳನ್ನು ಕೋರಿ, ಪೋಟೋ ತೆಗೆಸಿಕೋಂಡು ಸಮಾಜಿಕಜಾಲತಾಣವಾದ ಪೇಶ್‍ಬುಕ್, ವ್ಯಾಟ್ಸಾಪ್ ಗಳಲ್ಲಿ ಹರಿಬಿಟ್ಟಿದ್ದರು. ಈ ಸುದ್ದಿ ರಾಜ್ಯಾದ್ಯಂತ ವೈರಲ್‍ಆಗಿ ಸಾರ್ವಜನಿಕರ ಟೀಕೆ, ಟಿಪ್ಪಣಿಗೆ ಗುರಿಯಾಗಿತ್ತು. ಈ ವಿಷಯ ಎಸ್.ಪಿ. ಸಾಹೇಬರ ಗಮನಕ್ಕೆ ಬಂದಾಗ ಮಾನ್ಯ ಐ.ಜಿ.ಪಿ.ಯವರು ಪೊಲೀಸ್ ಠಾಣೆಯಲ್ಲಿ ಯಾವುದೇ ಅಧಿಕಾರಿಗಳು ತಮ್ಮ ವೈಯಕ್ತಿಕ ಖಾಸಗಿ ಆಚರಣೆಗಳನ್ನು ಪೊಲೀಸ್ ಠಾಣೆಯಲ್ಲಿ ಮಾಡುವಂತಿಲ್ಲ. ಆದರೆ ಪಿ.ಎಸ್.ಐ. ಸಂತೋಷಗೌಡ ರವರು ತಮ್ಮ ಹುಟ್ಟುಹಬ್ಬವನ್ನು ಪೊಲೀಸ್ ಠಾಣೆಯಲ್ಲಿ ಸಾರ್ವಜನಿಕರೋಂದಿಗೆ ಆಚರಿಸಿ, ಮಾನ್ಯ ಐ.ಜಿ.ಪಿ. ಯವರ ಆದೇಶ ಉಲ್ಲಂಘಿಸಿದ್ದಾರೆ. ಆ ಹಿನ್ನಲೆಯಲ್ಲಿ ಅವರನ್ನು ಸಸ್ಪೇಂಡಮಾಡಲಾಗಿದೆ ಎಂದು ಪತ್ರಿಕಾ ಹೇಳಿಕೆ ನೀಡಿದ್ದಾರೆ.
ಪೊಲೀಸ್ ಠಾಣೆಯಲ್ಲಿ ಸಾರ್ವಜನಿಕರೋಂದಿಗೆ ಹುಟ್ಟುಹಬ್ಬ ಆಚರಿಸಿಕೋಂಡಿದ್ದಕ್ಕಾಗಿ ಸಂತೋಷಗೌಡ ಪಾಟೀಲ ರವರನ್ನು ಅಮಾನತ್ತುಗೋಳಿಸಿ ವಿಚಾರಣೆಗೋಳಪಡಿಸಲಾಗಿದೆ.
ಹನುಮಂತರಾಯ ಹಾವೇರಿ ಜಿಲ್ಲಾ ಎಸ್.ಪಿ.