ಮಾಸೂರಿನಲ್ಲಿ ಉಚಿತ ನೇತ್ರ ಚಿಕಿತ್ಸಾ ಶಿಬಿರ
ಪಾಂಡವ,ರಟ್ಟೀಹಳ್ಳಿ : ತಾಲ್ಲೂಕಿನ ಮಾಸೂರ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಬುಧವಾರ ರಟ್ಟೀಹಳ್ಳಿ ಲಯನ್ಸ ಕ್ಲಬ್ ಮತ್ತು ಶಿವಮೊಗ್ಗದ ಶಂಕರ ಕಣ್ಣಿನ ಆಸ್ಪತ್ರೆ ಸಹಯೋಗದಲ್ಲಿ ನಡೆದ ಉಚಿತ ನೇತ್ರ ಚಿಕಿತ್ಸಾ ಶಿಬಿರವನ್ನು ಬಿ.ಸಿ.ಪಾಟೀಲ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಮನುಷ್ಯನ ಬದುಕಿನಲ್ಲಿ ಕಣ್ಣಿಗೆ ವಿಶೇಷ ಮಹತ್ವವಿದೆ. ಕಣ್ಣಿನ ಆರೋಗ್ಯದ ಬಗ್ಗೆ ಎಲ್ಲರೂ ಕಾಳಜಿವಹಿಸಬೇಕು. ಹಿಂದಿನವರಿಗಿಂತ ಇಂದಿನ ಯುವ ಜನಾಂಗ ನೇತ್ರ ಸಮಸ್ಯೆಯನ್ನು ಎದುರಿಸುತ್ತಿದೆ. ಬಡ ವರ್ಗದ ಜನತೆಗೆ ಲಯನ್ಸ ಕ್ಲಬ್ ಉಚಿತ ಶಿಬಿರಗಳನ್ನು ಏರ್ಪಡಿಸುವ ಮೂಲಕ ನೆರವಾಗುತ್ತಿದೆ ಎಂದರು.
ಕೆ.ವೈ.ಬಾಜೀರಯರ, ಹಾಲಪ್ಪ ಮುದಿಗೌಡ್ರ, ಎಂ.ಎಚ್.ಹರವಿಶೆಟ್ಟರ, ವಿ.ಎಸ್.ಅರ್ಕಾಚಾರಿ, ಗಣೇಶ ವೆರ್ಣೇಕರ, ನಾಗರಾಜ ಹಿರೇಮಠ, ವಿಜಯ ಮಡಿವಾಳರ, ಮಹೇಶ ಭರಮಗೌಡ್ರ, ನೇತ್ರ ಚಿಕಿತ್ಸಾಲಯದ ಸಿಬ್ಬಂದಿ ಮತ್ತು ಮಾಸೂರಿನ ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿ ಉಪಸ್ಥಿತರಿದ್ದರು. 150 ಕ್ಕೂ ಹೆಚ್ಚಿನ ಜನರು ಶಿಬಿರದಲ್ಲಿ ಭಾಗವಹಿಸಿದ್ದರು.