Sat. Jul 4th, 2020

ಪಾಂಡವ ನ್ಯೂಸ್

ಸಮಾಜದ ಧ್ವನಿ

ಕಡಿಮೆಯಾಯ್ತು ಚಲಾವಣೆ, ಬ್ಯಾನ್ ಆಗುತ್ತಾ 2000 ರೂ. ನೋಟು.?

2016 ರ ನವೆಂಬರ್ ನಲ್ಲಿ ನೋಟ್ ಬ್ಯಾನ್ ಮಾಡಿದ ಸಂದರ್ಭದಲ್ಲಿ ಚಲಾವಣೆಗೆ ತರಲಾಗಿದ್ದ 2000 ರೂಪಾಯಿ ನೋಟು ಮುದ್ರಣವನ್ನು ಭಾರತೀಯ ರಿಸರ್ವ್ ಬ್ಯಾಂಕ್ ಕಡಿಮೆ ಮಾಡಿದೆ.

ಕಪ್ಪು ಹಣ ತಡೆಯುವ ಉದ್ದೇಶದಿಂದ ಈ ಮೊದಲು ಚಲಾವಣೆಯಲ್ಲಿದ್ದ 500 ಮತ್ತು 1000 ರೂ. ಮುಖಬೆಲೆಯ ನೋಟುಗಳನ್ನು ರದ್ದುಗೊಳಿಸಿ 2000 ರೂ. ಮತ್ತು 500 ರೂ. ನೋಟಗಳನ್ನು ಚಲಾವಣೆಗೆ ತರಲಾಗಿದೆ. ಆದರೆ, ಕಪ್ಪು ಹಣ ತಡೆಯುವ ಉದ್ದೇಶ ಈಡೇರಿದಂತೆ ಕಾಣುತ್ತಿಲ್ಲ. ಚಲಾವಣೆಗೆ ಬಂದ ದೊಡ್ಡ ಮೊತ್ತದ ನೋಟುಗಳು ಹೆಚ್ಚಾಗಿ ಕಾಣ ಸಿಗುತ್ತಿಲ್ಲ. ಅವೆಲ್ಲಾ ಬ್ಲಾಕ್ ಮನಿಯಾಗಿರುವ ಸಾಧ್ಯತೆ ಇದೆ.

2000 ರೂ. ಮುಖಬೆಲೆಯ ನೋಟುಗಳನ್ನು ಪರಿಚಯಿಸಿದಾಗ ಚಿಲ್ಲರೆ ಸಮಸ್ಯೆ ಎದುರಾಗಿತ್ತು. ಇದನ್ನು ಹೋಗಲಾಡಿಸಲು 500 ರೂ., 200 ರೂ. ನೋಟುಗಳನ್ನು ಚಲಾವಣೆಗೆ ತರಲಾಗಿತ್ತು. ಇತ್ತೀಚೆಗೆ 2000 ರೂ. ಮುಖಬೆಲೆಯ ನೋಟುಗಳು ನೋಟುಗಳ ಚಲಾವಣೆ ಭಾರಿ ಪ್ರಮಾಣದಲ್ಲಿ ಕಡಿಮೆಯಾಗುತ್ತಿದೆ.

ಭಾರತೀಯ ರಿಸರ್ವ್ ಬ್ಯಾಂಕ್ ಹಂತ ಹಂತವಾಗಿ 2000 ರೂ. ನೋಟುಗಳ ಮುದ್ರಣ ಕಡಿಮೆ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಈ ನೋಟುಗಳನ್ನು ಬ್ಯಾನ್ ಮಾಡಬಹುದಾದ ಸಾಧ್ಯತೆ ಕೂಡ ಇದೆ ಎಂದು ಹೇಳಲಾಗಿದೆ.

2018 ರ ಆರ್ಥಿಕ ವರ್ಷದಲ್ಲಿ ಗುಲಾಬಿ ನೋಟುಗಳ ಮೌಲ್ಯ 6,72,600 ಕೋಟಿ ರೂ. ಗಳಾಗಿದ್ದರೆ, 2019 ರ ಆರ್ಥಿಕ ವರ್ಷದಲ್ಲಿ 6,58,200 ಕೋಟಿ ರೂ.ಗೆ ಇಳಿದಿದೆ. 14,400 ಕೋಟಿ ರೂ. ಅಧಿಕ ಮೌಲ್ಯದ ನೋಟುಗಳನ್ನು ವ್ಯವಸ್ಥೆಯಿಂದ ಹೊರ ತೆಗೆಯಲಾಗಿದೆ. ಅವು ನಕಲಿಯೇ ಅಥವಾ ಇತರ ಕಾರಣಗಳಿಂದಾಗಿಯೇ ಎಂಬುದು ತಿಳಿದಿಲ್ಲ.

2018 ರಲ್ಲಿ 3363 ಮಿಲಿಯನ್ 2000 ರೂ. ಮುಖಬೆಲೆಯ ನೋಟುಗಳನ್ನು ಮುದ್ರಿಸಿದರೆ 2019 ರಲ್ಲಿ ಎರಡು ಪರ್ಸೆಂಟ್ ಮುದ್ರಣ ಕಡಿಮೆ ಮಾಡಿ 2291 ಮಿಲಿಯನ್ ನೋಟುಗಳನ್ನು ಮುದ್ರಿಸಲಾಗಿದೆ. ಇದಕ್ಕೆ ವ್ಯತಿರಿಕ್ತವಾಗಿ 500 ರೂಪಾಯಿ ನೋಟುಗಳ ಮುದ್ರಣ ಶೇ. 39 ರಷ್ಟು ಏರಿಕೆಯಾಗಿದೆ.

ಚಲಾವಣೆಯಲ್ಲಿರುವ ಹೆಚ್ಚಿನ ಮೊತ್ತದ ನೋಟುಗಳಲ್ಲಿ 2017 ರಲ್ಲಿ ಶೇಕಡ 50 ರಷ್ಟು ಪಾಲು ಹೊಂದಿದ್ದ 2000 ರೂ. ನೋಟುಗಳು 2018ರಲ್ಲಿ ಶೇಕಡ 37 ಕ್ಕೆ ಇಳಿದಿದೆ. 2019 ರಲ್ಲಿ ಶೇಕಡ 31 ಕ್ಕೆ ಇಳಿದಿವೆ. ಇದು ಉದ್ದೇಶಪೂರ್ವಕವಾಗಿ ಮಾಡಲಾಗಿದೆಯೇ ಎಂಬುದು ಗೊತ್ತಾಗಿಲ್ಲ. ಆದರೆ 2000 ರೂಪಾಯಿ ನೋಟುಗಳ ಚಲಾವಣೆ ಮಾತ್ರ ಕಡಿಮೆಯಾಗಿಲ್ಲ. 200 ರೂ. ನೋಟು ಮುದ್ರಣ ಕೂಡ ಇಳಿಕೆಯಾಗಿದ್ದು, ಮುಂದಿನ ದಿನಗಳಲ್ಲಿ ಈ ನೋಟು ರದ್ದಾದರೂ ಆಗಬಹುದು ಎಂದು ಹೇಳಲಾಗಿದೆ.

  •  
  •  
  •  
  •  
  •  
  •  

Leave a Reply

Your email address will not be published. Required fields are marked *

Copyright © All rights reserved. | Developed by EXPOLOG TECHNOLOGIES
error: Content is protected !!