ರೇಣುಕ ವಿಜಯ ಪ್ರವಚನ ಇಂದಿನಿಂದ
ಪಾಂಡವ,ಗುತ್ತಲ: ಗುತ್ತಲ ಪಟ್ಟಣದಲ್ಲಿ ಶ್ರೀ ಜಗದ್ಗುರು ರೇಣುಕಚಾರ್ಯ ಯುಗಮಾನೋತ್ಸವ ಹಾಗೂ ರಂಭಾಪುರಿ ಜಗದ್ಗುರುಗಳ ಇಷ್ಟಲಿಂಗ ಮಹಾ ಪೂಜೆ ಧರ್ಮ ಜಾಗೃತಿ ಸಮಾರಂಭ ನಿಮಿತ್ಯ ಅ.30.ರಿಂದ ನ.5ರವರಗೆ ಪಟ್ಟಣದ ಎಪಿಎಂಸಿ ಯಾರ್ಡನಲ್ಲಿ ಪ್ರತಿದಿನ ಸಂಜೆ 7 ರಿಂದ ರೇಣುಕ ವಿಜಯ ಪುರಾಣ ಪ್ರವಚನ ಜರಗುವುದು. ಅಮ್ಮಿನಭಾವಿ ಪಂಚಗ್ರಹ ಹಿರೇಮಠದ ಅಭಿನವ ಶಾಂತ ಲಿಂಗ ಶಿವಾಚಾರ್ಯ ಸ್ವಾಮೀಜಿ ಪ್ರವಚನ ನೀಡುವರು. ಮಹಾಂತೇಶ ಗವಾಯಿಗಳು ನರಸಲಗಿ ಸಂಗೀತಕ್ಕೆ ರುದ್ರೇಶ ಗದಗ ತಬಲಾ ಸಾಥ್ ನೀಡುವರು.
ಗುತ್ತಲ ಕಲ್ಮಠದ ಗುರುಸಿದ್ದ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸುವರು. ನೆಗಳೂರಿನ ಗುರುಶಾಂತೇಶ್ವರ ಸ್ವಾಮೀಜಿ ನೇತೃತ್ವ ವಹಿಸುವರು.ನ. 6 ರಿಂದ ರಂಭಾಪುರಿ ಜಗದ್ಗುರುಗಳ ಇಷ್ಟಲಿಂಗ ಮಹಾಪೂಜೆನ. 6, 7,8 ಮೂರು ದಿನಗಳ ಕಾಲ ಪಟ್ಟಣದ ಸಂಗನಬಸವ ಕಲ್ಯಾಣ ಮಂಟಪದಲ್ಲಿ ರಂಭಾಪುರಿ ಜಗದ್ಗುರುಗಳ ಇಷ್ಟಲಿಂಗ ಮಹಾಪೂಜೆ ಪ್ರತಿದಿನ ಬೆಳಗ್ಗೆ 8 ರಿಂದ ಜರಗುವುದು. ಸಂಜೆ 7 ರಿಂದ ಜಗದ್ಗುರುಗಳ ಸಾನ್ನಿದ್ಯದಲ್ಲಿ ಎಪಿಎಂಸಿ ಯಾರ್ಡನಲ್ಲಿರುವ ಧರ್ಮ ವೇದಿಕೆ ಯಲ್ಲಿ ಧರ್ಮ ಜಾಗೃತಿ ನಡೆಯುವುದು.
ಸಮಾರಂಭದಲ್ಲಿ ನಾಡಿನ ವಿವಿಧ ಮಠಗಳ ಮಠಾಧೀಶರು ರಾಜಕೀಯ ಮುಖಂಡರು ಗಳು ಧರ್ಮಾಭಿಮಾನಿಗಳು ಸುತ್ತ ಮುತ್ತಲಿನ ಗ್ರಾಮಗಳ ಸದ್ಭಕ್ತರು ಭಾಗವಹಿಸುವರು ಎಂದು ಸೇವಾ ಸಮಿತಿಯವರು ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.