Sat. Nov 27th, 2021

ಪಾಂಡವ ನ್ಯೂಸ್

ಸಮಾಜದ ಧ್ವನಿ

ಗುತ್ತಲದ ಪ್ರವಾಸಿ ಮಂದಿರದಲ್ಲಿ ಪದವಿಧರ ಕ್ಷೇತ್ರದ ಮತರಾರರ ನೋಂದಣಿ ಕಾರ್ಯಕ್ರ

ಪಾಂಡವ,ಗುತ್ತಲ: ಪದವಿಧರ ಕ್ಷೇತ್ರದ ಚುನಾವಣೆಯಲ್ಲಿ ಮತ ಚಲಾಯಿಸಲು ಅರ್ಹ ಪದವಿಧರರು ಕಡ್ಡಾಯವಾಗಿ ನೋಂದಣೆ ಮಾಡಿಸಬೇಕೆಂದು ಮಾಜಿ ಸಚಿವ ರುದ್ರಪ್ಪ ಲಮಾಣಿ ಮಾತನಾಡಿದರು.


ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪದವಿಧರ ಕ್ಷೇತ್ರದ ಮತರಾರರ ನೋಂದಣಿ ಕಾರ್ಯಕ್ರಮವನ್ನು ಉದ್ದೇಶಿಸಿ ಸೋಮವಾರ ಮಾತನಾಡಿ, ಈ ಮೊದಲು ಒಮ್ಮೆ ಪದವಿಧರ ಕ್ಷೇತ್ರದ ಮತದಾರರು ಆದಲ್ಲಿ ಅವರು ನವೀಕರಣ ಮಾಡಬೇಕಿತ್ತು. ಆದರೆ ಈ ಕೋರ್ಟ ಆದೇಶದನ್ವಯ ಹೊಸದಾನಿ ನೋಂದಣೆ ಆರಂಭವಾಗಿದ್ದು 2016ರ ಒಳಗೆ ಪದವಿ ಪಡೆದವರು, ಹಿಂದಿ ಬಿ.ಎ ಆದವರು, ಬಿಇ ಆದವರು ಸಹ ಪದವಿಧರ ಕ್ಷೇತ್ರದ ಮತದಾರರಾಗಬದುದೆಂದರು.


ಜಿ.ಪಂ ಮಾಜಿ ಸದಸ್ಯ ಸಿ.ಬಿ ಕುರವತ್ತಿಗೌಡರ ಮಾತನಾಡಿ, ಪದವಿಧರ ಕ್ಷೇತ್ರದ ನೋಂದಣೆಯ ಕ್ರಮಗಳು, ಲಗತ್ತಿಸಬೇಕಾದ ದಾಖಲೆಗಳು, ಮತದಾರರ ಅರ್ಹತೆ ಕುರಿತು ವಿವರವಾಗಿ ತಿಳಿಸಿದರು. ಪದವಿಧರ ಮತದಾರರ ಕ್ಷೇತ್ರ ನೋಂದಾಯಿತ ಶಾಲಾ ಘಟಕದ ಜಿಲ್ಲಾಧ್ಯಕ್ಷ ಡಾ. ಸುರೇಶ ಯಳ್ಳಟ್ಟಿ ಮಾತನಾಡಿ, ಈ ಕ್ಷೇತ್ರದಲ್ಲಿ ಚುನಾಯಿತರಾದವರು ವಿಶ್ವ ವಿದ್ಯಾಲಗಳು ನಿರುದ್ಯೋಗ ಉತ್ಪಾಧನಾ ಕಾರ್ಖಾನೆಗಳನ್ನಾಗಿ ಮಾಡದೇ ಪದವಿಧರರ ಸಮಸ್ಯೆಗಳ ಬಗ್ಗೆ ಅಗತ್ಯವಾಗಿ ಕೆಲಸ ಮಾಡಬೇಕಾದ ಅನಿವಾರ್ಯತೆ ಇದೆ ಎಂದ ಅವರು ಪ್ರತಿಯೋಬ್ಬರು ಹೆಚ್ಚಿನ ಪ್ರಮಾಣದಲ್ಲಿ ಪದವಿಧರರ ನೋಂದಾವಣೆಗೆ ಮುಂದಾಗಬೇಕೆಂದರು.


ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಂ.ಎಂ ಹಿರೇಮಠ, ತಾಲೂಕು ಗ್ರಾಮೀಣ ಘಟಕದ ಅಧ್ಯಕ್ಷ ಎಂ.ಎಂ ಮೈದೂರ ಮಾತನಾಡಿದರು. ಕಾರ್ಯಕ್ರಮದಲ್ಲಿ ಕಾಂಗ್ರೆಸ್‍ನ ಹಾವೇರಿ ಶಹರ ಘಟಕದ ಅಧ್ಯಕ್ಷ ಪ್ರಭುಗೌಡ ಬಿಷ್ಟನಗೌಡರ, ಆಶ್ರಯ ಕಮೀಟಿ ಮಾಜಿ ಅಧ್ಯಕ್ಷ ಶಹಜಾನಸಾಬ ಅಗಡಿ, ತಾ.ಪಂ ಅಧ್ಯಕ್ಷ ಕರಿಯಪ್ಪ ಉಂಡಿ, ಜಿಲ್ಲಾ ಕಾಂಗ್ರೆಸ್ ಮುಖಂಡರಾದ ಮಂಜುನಾಥ ಮಾಗಡಿ, ಶ್ರೀಧರ ದೊಡ್ಡಮನಿ, ಫಕ್ಕೀರಪ್ಪ ದೀಪಾಳಿ, ರವೀಂದ್ರಪ್ಪ ಜಂಗಳಿ, ಪ.ಪಂ ಸದಸ್ಯರಾದ ನಾಗರಾಜ ಎರಿಮನಿ, ಲಿಂಗೇಶ ಬೆನ್ನೂರ, ದುರ್ಗಮ್ಮ ಮರಡಿ, ಸುರೇಶ ಲಮಾಣಿ, ಹೊಸರಿತ್ತಿ ಗ್ರಾ.ಪಂ ಉಪಾಧ್ಯಕ್ಷ ಶಂಕ್ರಣ್ಣ ಅಂಬಿಗೇರ, ಬೆಳವಿಗಿ ಗ್ರಾ.ಪಂ ಸದಸ್ಯ ಎಚ್.ಆರ್ ಹುಬ್ಬಳ್ಳಿ, ನಿಂಗಪ್ಪ ಬಣಕಾರ, ಗ್ರಾ.ಪಂ ಮಾಜಿ ಸದಸ್ಯರಾದ ಖಲೀಲಸಾಬ ಖಾಜಿ, ವಿಜಯ ಚಲವಾದಿ, ಮುಸ್ತಾಫ ಕೊಕ್ಕರಗುಂದಿ, ಗುಡದಯ್ಯ ಭರಡಿ, ಅಶೋಕ ವಡ್ಡರ, ಶಿವಪ್ಪ ಬಂಡಿವಡ್ಡರ, ರಮೇಶ ಬಾಳಿಕಾಯಿ ಸೇರಿದಂತೆ ಅನೇಕರಿದ್ದರು.

  •  
  •  
  •  
  •  
  •  
  •  

Leave a Reply

Your email address will not be published. Required fields are marked *

Copyright © All rights reserved. | Developed by EXPOLOG TECHNOLOGIES
error: Content is protected !!