Sun. Jan 16th, 2022

ಪಾಂಡವ ನ್ಯೂಸ್

ಸಮಾಜದ ಧ್ವನಿ

ಸ.ಪ.ಪೂ.ಕಾಲೇಜಿನಲ್ಲಿ ಸಂವಿಧಾನ ದಿನಾಚರಣೆ

ಹಾನಗಲ್ಲ : ಅಸಮಾನತೆಯ ಅಳಿಸಿ, ಸಾರ್ವಭೌಮ ಸಮಾಜವಾದಿ ರಾಷ್ಟ್ರವನ್ನಾಗಿಸಿ, ಆರ್ಥಿಕ ಸಾಮಾಜಿಕ ಸದೃಢ ಭಾರತ ಕಟ್ಟಲು ನಮ್ಮ ಸಂವಿಧಾನ ಸಮರ್ಥವಾಗಿದ್ದು ಪ್ರತಿ ಪ್ರಜೆ ದೇಶದ ಹಿತಕ್ಕಾಗಿ ಒಡ್ಡಿಕೊಳ್ಳಬೇಕಾಗಿದೆ ಎಂದು ಸಾಹಿತಿ ಪ್ರಾಚಾರ್ಯ ಮಾರುತಿ ಶಿಡ್ಲಾಪೂರ ನುಡಿದರು.
ಶುಕ್ರವಾರ ಹಾನಗಲ್ಲಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಸಹಯೋಗದಲ್ಲಿ ಆಯೋಜಿಸಿದ ಸಂವಿಧಾನ ದಿನದ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಭಾರತ ವೇಷ ಭಾಷೆ ಉಡುಗೆ ತೊಡುಗೆಗಳಲ್ಲಿ ವೈವೈಧ್ಯತೆಯನ್ನು ಹೊಂದಿದ ದೇಶ. ಪ್ರಾದೇಶಿಕ ವೈವಿಧ್ಯತೆಯ ನಡುವೆಯೂ ಇಡೀ ದೇಶ ಒಟ್ಟಾಗಿ ಮುನ್ನಡೆಯುವಂತಹ ಸರ್ವೇಜನಾಹ ಸುಖನೋಭವಂತು ಎಂಬ ಧ್ಯೇಯಕ್ಕೆ ಬದ್ಧರಾಗುವ ಸಂವಿಧಾನ ನಮ್ಮದಾಗಿದೆ. ಇದಕ್ಕಾಗಿ ಡಾ.ಬಿ.ಆರ್.ಅಂಬೇಡ್ಕರ ಅವರಾದಿಯಾಗಿ ನಾಡಿನ ಹಿರಿಯರು ನೀಡಿದ ಸಂವಿಧಾನವನ್ನು ಗೌರವಿಸುವುದು ನಮ್ಮೆಲ್ಲರ ಆದ್ಯತೆಯಾಗಬೇಕು ಎಂದರು..
ಮುಖ್ಯ ಅತಿಥಿಯಾಗಿ ಮಾತನಾಡಿದ ಉಪನ್ಯಾಸಕ ಪ್ರೊ.ಎಚ್.ಎಸ್.ಬಾರ್ಕಿ, ಸ್ವಾಭಿಮಾನಿ ಆತ್ಮಗೌರವದ ದೇಶ ನಮ್ಮದು. ಭಾರತವೇ ಒಂದು ಉಪಖಂಡ ಎನ್ನುವಷ್ಟು ವಿಸ್ತಾರ ವಿಶಾಲ ವೈವಿದ್ಯಮಯ ದೇಶ. ಇಂತಹದ್ದರಲ್ಲಿ ಭಾರತಕ್ಕೆ ಸ್ವಾತಂತ್ರ ಪಡೆದಿರುವುದು ಮಾತ್ರವಲ್ಲ, ಸಂವಿಧಾನ ರಚನೆಯೂ ಒಂದು ಸವಾಲಾಗಿತ್ತು. ಅಂತಹ ಸವಾಲನ್ನು ಸ್ವೀಕರಿಸಿ ಭವ್ಯ ಬಾರತಕ್ಕೆ ಸಮಾನತೆಯನ್ನು ನೀಡುವ ಸಂವಿಧಾನ ನೀಡುವಲ್ಲಿ ಡಾ.ಬಿ.ಆರ್.ಅಂಬೇಡ್ಕರ ಅವರ ಶ್ರಮ ಸಾರ್ಥಕವಾಗಿದೆ. ಸಮಾನತೆ ಸಹೋದರತ್ವ ಸ್ವಾತಂತ್ರ್ಯದ ಧ್ಯೇಯ ವಾಕ್ಯದ ಭಾರತ ಸಂವಿಧಾನ ನಮಗೆಲ್ಲರಿಗೂ ಪೂಜ್ಯವಾದುದು ಎಂದರು.
ಪ್ರೊ.ಸುಮಂಗಲಾ ನಾಯನೇಗಲಿ, ಪ್ರೊ.ರೂಪಾ ಹಿರೇಮಠ, ಪ್ರೊ.ಎಸ್.ವಿ.ರಶ್ಮೀ, ಪ್ರೊ. ಕೆ.ಈಶ್ವರ, ಪ್ರೊ.ಬಸವರಾಜ, ಪ್ರೊ.ವಿದ್ಯಾಶ್ರೀ, ಪ್ರೊ.ಸುಮಾ, ಪ್ರೊ.ಶಿವಮೂರ್ತಿ ಮೊದಲಾದವರಿದ್ದರು.

  •  
  •  
  •  
  •  
  •  
  •  

Leave a Reply

Your email address will not be published. Required fields are marked *

Copyright © All rights reserved. | Developed by EXPOLOG TECHNOLOGIES
error: Content is protected !!