Sun. Jun 26th, 2022

ಪಾಂಡವ ನ್ಯೂಸ್

ಸಮಾಜದ ಧ್ವನಿ

ಕಿಚ್ಚನ ಅಭಿಮಾನಿಗಳಿಗೆ ಸಂತಸದ ಸುದ್ದಿ: ಬರ್ತಿದೆ ‘ಪೈಲ್ವಾನ್’ ಟ್ರೈಲರ್

ಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷೆಯ ಪೈಲ್ವಾನ್ ಚಿತ್ರದ ಟ್ರೈಲರ್ ರಿಲೀಸ್ ಗೆ ಕ್ಷಣಗಣನೆ ಆರಂಭವಾಗಿದೆ. ಈಗಾಗಲೆ ಹಾಡುಗಳು ಮತ್ತು ಟೀಸರ್ ಮೂಲಕ ಸದ್ದು ಮಾಡುತ್ತಿರುವ ಪೈಲ್ವಾನ್ ಈಗ ಟ್ರೈಲರ್ ಮೂಲಕ ಅಭಿಮಾನಿಗಳ ಮುಂದೆ ಬರುತ್ತಿದ್ದಾರೆ.

ಹೌದು, ಪೈಲ್ವಾನ್ ಟ್ರೈಲರ್ ರಿಲೀಸ್ ಗೆ ಡೇಟ್ ಮತ್ತು ಟೈಂ ಫಿಕ್ಸ್ ಆಗಿದೆ. ಆಗಸ್ಟ್ 22ಕ್ಕೆ ಚಿತ್ರದ ಟ್ರೈಲರ್ ತೆರೆಗೆ ಬರುತ್ತಿದೆ. ನಾಳೆ 1 ಗಂಟೆಗೆ ರಿಲೀಸ್ ಆಗುತ್ತಿದೆ. ವಿಶೇಷ ಅಂದ್ರೆ ಟ್ರೈಲರ್ ಐದು ಭಾಷೆಯಲ್ಲೂ ರಿಲೀಸ್ ಆಗುತ್ತಿದೆ.

ಈ ಬಗ್ಗೆ ಮಾಹಿತಿ ಬಹಿರಂಗ ಪಡಿಸುವ ಜೊತೆಗೆ ಕಿಚ್ಚ ಸುದೀಪ್ ಚಿತ್ರತಂಡಕ್ಕೆ ಶುಭಕೋರಿದ್ದಾರೆ. ಪೈಲ್ವಾನ್ ಅಬ್ಬರ ನೋಡಲು ಕಾಯುತ್ತಿರುವ ಅಭಿಮಾನಿಗಳಿಗೆ ಟ್ರೈಲರ್ ರಿಲೀಸ್ ಆಗುತ್ತಿರುವ ವಿಚಾರ ಕೇಳಿ ಸಖತ್ ಥ್ರಿಲ್ ಆಗಿದ್ದಾರೆ.

ಮೊದಲ ಬಾರಿಗೆ ಪೈಲ್ವಾನ್ ಆಗಿ ಮಿಂಚಿರುವ ಅಭಿನಯ ಚಕ್ರವರ್ತಿಯನ್ನು ನೋಡಲು ಅಭಿಮಾನಿಗಳು ಕಾತುರರಾಗಿದ್ದಾರೆ. ಚಿತ್ರಕ್ಕಾಗಿ ಸಖತ್ ವರ್ಕೌಟ್ ಮಾಡಿ ಮೊದಲ ಬಾರಿಗೆ ಸಿಕ್ಸ್ ಪ್ಯಾಕ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಕೃಷ್ಣ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಪೈಲ್ವಾನ್ ಮುಂದಿನ ತಿಂಗಳು ತೆರೆಗೆ ಬರುವ ಸಾಧ್ಯತೆ ಇದೆ. ಇತ್ತೀಚಿಗಷ್ಟೆ ಚಿತ್ರದ ಆಡಿಯೋವನ್ನು ಅದ್ದೂರಿಯಾಗಿ ರಿಲೀಸ್ ಮಾಡಲಾಗಿದೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಚಿತ್ರದ ಆಡಿಯೋ ರಿಲೀಸ್ ಮಾಡಿದ್ದಾರೆ. ಸ್ಯಾಂಡಲ್ ವುಡ್ ಮಾತ್ರವಲ್ಲದೆ ಸೌತ್ ಸಿನಿ ಇಂಡಸ್ಟ್ರಿಯಲ್ಲಿ ಕುತೂಹಲ ಮೂಡಿಸಿದೆ ಪೈಲ್ವಾನ್.

  •  
  •  
  •  
  •  
  •  
  •  
Copyright © All rights reserved. | Developed by EXPOLOG TECHNOLOGIES
error: Content is protected !!