Sat. Nov 27th, 2021

ಪಾಂಡವ ನ್ಯೂಸ್

ಸಮಾಜದ ಧ್ವನಿ

ಅತಿಯಾದ ಮಳೆಯಿಂದ ಮನೆ ಕುಸಿತ ಭೇಟಿ ನೀಡಿ ಪರಿಶೀಲಿಸಿದ ಶಾಸಕ ನೆಹರು ಓಲೇಕಾರ

1 min read
ಗುತ್ತಲ: ಅತಿಯಾದ ಮಳೆಯಿಂದ ಜನ-ಜೀವನ ಅಸ್ತವ್ಯಸ್ತವಾಗಿದ್ದು ಇಂದು ಗುತ್ತಲ ಪಟ್ಟಣದಲ್ಲಿ ಮಳೆಯಿಂದ ಹಾನಿಗೊಳಗಾಗದ ಸಂತ್ರಸ್ತರ ಮನೆಗೆ ಶಾಸಕ ನೆಹರು ಓಲೇಕಾರ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ನೆಹರು ಓಲೇಕಾರ ಈಗಾಗಲೇ ಪ್ರವಾಹ ನಿಯಂತ್ರಿಸಲು ತಾಲೂಕ ಆಡಳಿತ ಸಕಲ ಸನ್ನದ್ಧವಾಗಿದ್ದು,ನಮ್ಮ ಅಧಿಕಾರಿ ವರ್ಗದವರು ಸೂಕ್ತ ವ್ಯವಸ್ಥೆ ಮಾಡುವಲ್ಲಿ ಕಾರ್ಯನಿರತವಾಗಿದ್ದಾರೆ.

  ಮುಳುಗಡೆ ಪ್ರದೇಶದಲ್ಲಿ ಈಗಾಗಲೇ ಗಂಜಿ ಕೇಂದ್ರಗಳನ್ನು ಪ್ರಾರಂಭಿಸಲಾಗಿದ್ದು,ನಾನು ಕೂಡ ಭೇಟಿ ನೀಡಿ ಜನರ ಸಮಸ್ಯೆಗೆ ಸ್ಪಂದಿಸುವಲ್ಲಿ ಕಾರ್ಯೋನ್ಮುಖನಾಗಿದ್ದೆನೆ ಎಂದರು. ಈ ಸಂದರ್ಭದಲ್ಲಿ ಮುಖಂಡರಾದ ವಸಂತ ಕಳಸಣ್ಣನವರ,ಉಮೇಶ್ ಮಾಗಳ,ಸಂತೋಷ ಸೊಪ್ಪಿನ, ನಾಗರಾಜ ಬಸಗೇಣ್ಣಿ ಹಾಗೂ ಗುತ್ತಲ ಪಟ್ಟಣದ ಪ್ರಮುಖರು ಉಪಸ್ತಿತರಿದ್ದರು.
  •  
  •  
  •  
  •  
  •  
  •  

Leave a Reply

Your email address will not be published. Required fields are marked *

Copyright © All rights reserved. | Developed by EXPOLOG TECHNOLOGIES
error: Content is protected !!