Fri. Jan 21st, 2022

ಪಾಂಡವ ನ್ಯೂಸ್

ಸಮಾಜದ ಧ್ವನಿ

ರಾಣೇಬೆನ್ನೂರು ನಗರದಲ್ಲಿ ಹೆಚ್ಚಿದ ನಕಲಿ ಪತ್ರಕರ್ತರ ಹಾವಳಿ ರೋಸಿ ಹೋದ ವ್ಯಾಪಾರಸ್ಥರು..!

1 min read

ಪಾಂಡವ ನ್ಯೂಸ್, ರಾಣೇಬೆನ್ನೂರು : ಕೊರೊನಾದಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಜನರು ಕಂಗಾಲಾಗಿ ಹೋಗಿರುವ ಈ ಸಂದರ್ಭದಲ್ಲಿ ಆರ್ಥಿಕ ಪರಿಸ್ಥಿತಿ ಎದುರಿಸುವುದೇ ಕಷ್ಟಕರವಾಗಿದೆ. ಅಂತಹದ್ದರಲ್ಲಿ ‘ತಿರುಕನಿಗೆ ನಾಯಿಗಳ ಕಾಟ’ ಎನ್ನುವ ಹಾಗೆ ನಗರದಾದ್ಯಂತ ಪತ್ರಕರ್ತರೆನ್ನಿಸಿಕೊಂಡ ತಿರಬೋಕಿಗಳು ಅದರಲ್ಲೂ ನಕಲಿ ಪತ್ರಕರ್ತರು ಎನ್ನಿಸಿಕೊಂಡವರು ಚಿಕ್ಕ-ಪುಟ್ಟ ವ್ಯಾಪಾರ ವಹಿವಾಟು ಮಾಡಿಕೊಂಡು ಜೀವನ ಸಾಗಿಸುತ್ತಿರುವ ವ್ಯಾಪಾರಿಗಳನ್ನು ಇನ್ನಿಲ್ಲದಂತೆ ಕಾಡುತ್ತಿದ್ದಾರೆ ಎನ್ನಲಾಗಿದೆ.
ಅಸಲಿಗೆ ಈ ನಕಲಿ ಪತ್ರಕರ್ತರ ಕರ್ತವ್ಯವೆಂಬ ಕುತಂತ್ರದ ಹಿಂದಿರುವ ಉದ್ದೇಶವಾದರೂ ಏನು? ಕೈಯಲ್ಲೊಂದು ಲೋಗೊ, ಕ್ಯಾಮರಾಗಳೆಂಬ ಮುಸಲಾಯುಧಗಳನ್ನು ಹಿಡಿದುಕೊಂಡು ಚಿಕ್ಕ ಪುಟ್ಟ ವ್ಯಾಪಾರ ಮಾಡುವಂತಹ ಬಟ್ಟೆ ವ್ಯಾಪಾರಿಗಳು, ಗೂಡಂಗಡಿಗಳು, ಎಗ್‍ರೈಸ್ ಸೆಂಟರ್, ಫುಟ್‍ಪಾತ್ ವ್ಯಾಪಾರಿಗಳ ಎದುರಿಗೆ ಇವರ ಉತ್ತರನ ಪೌರುಷ. ಇವರ್ಯಾರೋ ಒಬ್ಬ ದೊಡ್ಡ ಅಧಿಕಾರಿಯೇನೋ ಎಂಬಂತೆ ವ್ಯಾಪಾರಿಗಳ ಅಂಗಡಿಗಳನ್ನು ಕ್ಯಾಮರಾದಿಂದ ಫೋಟೊ ತೆಗೆಯುವುದು, ವಿಡಿಯೋ ಮಾಡುವುದು ಇವರ ಕೆಲಸ.
ಅಷ್ಟಕ್ಕೂ ಅವರ ಅಂಗಡಿಗಳನ್ನು ಈ ಹಡಬೆ ನಕಲಿ ಪತ್ರಕರ್ತರು ಫೋಟೊ ತೆಗೆಯುವುದಾದರೂ ಏಕೆ? ಯಾವ ಕಾರಣಕ್ಕಾಗಿ? ಅವರು ಬೀಸಾಕುವ ಇನ್ನೂರು, ಮುನ್ನೂರು ರೂಪಾರಿಗೆ. ಗರಿಷ್ಠವೆಂದರೂ 500 ರೂಪಾಯಿಗೋಸ್ಕರ ಇವರ ನಿಷ್ಠಾವಂತ ಕರ್ತವ್ಯವೇ? ಅಷ್ಟಕ್ಕೂ ಈ ನಕಲಿ ಪತ್ರಕರ್ತರಿಗೆ ವ್ಯಾಪಾರಿಗಳ ಗೊಡವೆಯೇಕೆ? ಇವರ ಲೇಖನಿ ಖಡ್ಗಕ್ಕಿಂತ ಹರಿತವೆಂಬುದನ್ನು ತೋರಿಸಬೇಕಾದರೆ ನಗರದಲ್ಲಿಯೇ ದೊಡ್ಡ ದೊಡ್ಡ ತಿಮಿಂಗಲುಗಳಿವೆ. ಇವರದು ಪತ್ರಿಕೆಯಾಗಿದ್ದರೆ ಅವರ ವಿರುದ್ಧ ಸುದ್ದಿ ಬರೆಯಲಿ, ಅಥವಾ ದೃಶ್ಯ ಮಾಧ್ಯಮವಾಗಿದ್ದರೆ ಅಂತವರ ಪುಂಡಾಟಿಕೆ ಮತ್ತು ಭ್ರಷ್ಟಾಚಾರ ಬಯಲಿಗೆಳೆಯಲಿ.
ಅದನ್ನು ಬಿಟ್ಟು ಸಣ್ಣ ವ್ಯಾಪಾರಿಗಳ ಹತ್ತಿರ ಇವರಿಗೇನು ಕೆಲಸ? ಈ ನಕಲಿ ಪತ್ರಕರ್ತರಿಗೆ ವಿದ್ಯೆಯೆನ್ನುವುದಿದ್ದರೆ ಕಷ್ಟಪಟ್ಟು ದುಡಿಯಲಿ. ಅದನ್ನು ಬಿಟ್ಟು ಹೇಸಿಗೆ ತಿನ್ನುವ ಕೆಲಸಕ್ಕೆ ಕೈ ಹಾಕುವುದು ಏಕೆ? ಇವರಿಗೆ ಬೇಕಾಗಿರುವ 100 ರಿಂದ 500 ರೂಪಾಯಿಗೋಸ್ಕರ ಪವಿತ್ರ ಪತ್ರಿಕೋದ್ಯಮವನ್ನು ಬಳಸಿಕೊಳ್ಳುವುದೇಕೆ? ಸಾರ್ವಜನಿಕರಿಗೆ ತೊಂದರೆ ಕೊಡುವಂತಹ ಇಂತಹ ದರವೇಸಿ ಕಚಡಾ ನಕಲಿ ಪತ್ರಕರ್ತರನ್ನು ಪೊಲೀಸರು ಗುರುತಿಸಿ ಹೆಡಮುರಿಗೆ ಕಟ್ಟವುದೊಂದೇ ಬಾಕಿ ಇದೆ.
ಸಾರ್ವಜನಿಕರೂ ಸಹ ಇಂತಹ ನಕಲಿ ಪತ್ರಕರ್ತರ ಬಗ್ಗೆ ಎಚ್ಚರವಿಟ್ಟುಕೊಳ್ಳಬೇಕು. ಯಾವುದೇ ಒಬ್ಬ ಅನಾಮಿಕ ತಾನೊಬ್ಬ ರೈಟರ್, ಜರ್ನಲಿಸ್ಟ್, ಪತ್ರಕರ್ತ ಎಂದು ಮಾಧ್ಯಮದ ನಾನಾ ಮುಖಗಳನ್ನು ಹೇಳಿಕೊಂಡು ಯಾಮಾರಿಸಲು ನೋಡಿದರೆ, ಆತ / ಅವಳÀ ಬಗ್ಗೆ ಅನುಮಾನ ಬಂದರೆ ಪೊಲೀಸರಿಗೆ ಮಾಹಿತಿ ನೀಡಬೇಕು. ಪೊಲೀಸ್ ಠಾಣೆಯೊಂದೇ ಅವರಿಗೆ ದಂಡಂ ದಶಗುಣಂ ತಾಣ ಮತ್ತು ಅಲ್ಲಿಯೇ ಅವರಿಗೆ ಗೂಟ ಹಾಗೂ ಖಾರದ ಪುಡಿ ಲಭಿಸುವುದು.

  •  
  •  
  •  
  •  
  •  
  •  

Leave a Reply

Your email address will not be published. Required fields are marked *

Copyright © All rights reserved. | Developed by EXPOLOG TECHNOLOGIES
error: Content is protected !!