Sat. Nov 27th, 2021

ಪಾಂಡವ ನ್ಯೂಸ್

ಸಮಾಜದ ಧ್ವನಿ

ನಗರಸಭೆ ಅಧಿಕಾರಿ, ವಾರ್ಡ್ ಸದಸ್ಯೆಗೆ ಕಣ್ಣು ಕಾಣಿಸುತ್ತಿಲ್ಲವೇ..?

1 min read

ಪಾಂಡವ ನ್ಯೂಸ್, ರಾಣೇಬೆನ್ನೂರು: ಯಾವುದೇ ಒಂದು ಕಾಮಗಾರಿಯನ್ನು ಕೈಗೆತ್ತಿಕೊಳ್ಳಬೇಕಾದರೂ ಸಹ ಅದರ ಸಾದಕ – ಬಾದಕಗಳನ್ನು ಮನಗಾಣುವುದೂ ಕೂಡ ಅಷ್ಟೇ ಮುಖ್ಯ. ಕಾಮಗಾರಿಯನ್ನು ಕೈಗೆತ್ತಿಕೊಂಡ ನಂತರ ಅದು ಸುತ್ತಲಿನ ಪರಿಸರದ ಮೇಲೆ ಎಂತಹ ಪರಿಣಾಮ ಬೀರಬಹುದು ಎಂಬುದನ್ನು ಮನಗಂಡು ಅದರ ಪರಿಹಾರವನ್ನೂ ಸಹ ಕಂಡುಕೊಳ್ಳಬೇಕಾಗುತ್ತದೆ. ಆದರೆ, ರಾಣೇಬೆನ್ನೂರು ನಗರದಲ್ಲೊಂದು ಯುಜಿಡಿ ಕಾಮಗಾರಿ ಪ್ರಾರಂಭಿಸಿದ ಎಪ್ರಾ ತುಪ್ರಿ ಗುತ್ತಿಗೆದಾರರು, ಅದ್ಯಾವುದನ್ನೂ ಲೆಕ್ಕಿಸದೆ, ಯುಜಿಡಿ ಒಡೆದು ಹೋಗಿ ಅದರೊಳಗಿನ ಕೊಳಕು ರಸ್ತೆಗೆ ಎರಚುತ್ತಾ, ವಾಹನ ಸವಾರರು, ದಾರಿ ಹೋಕರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಹೌದು..! ಚೌಡೇಶ್ವರಿ ನಗರ (ಮೇಡ್ಲೇರಿ ರಸ್ತೆ) 2ನೇ ಕ್ರಾಸ್ ಎದುರಿಗೆ ಮಸೀದಿ ಮುಂದೆಯೇ ಯುಜಿಡಿ ಕಾಮಗಾರಿ ಪ್ರಾರಂಭ ಮಾಡಿದ್ದಾರೆ. ಅಲ್ಲಿನ ಯುಜಿಡಿ ಪೈಪ್‍ಲೈನ್ ಸಂಪೂರ್ಣ ಒಡೆದು ಹೋಗಿದ್ದರಿಂದ ಅಲ್ಲಿ ಓಡಾಡುವುದೇ ದುಸ್ತರವಾಗಿದೆ. ಅಕ್ಕ-ಪಕ್ಕದ ಮನೆಗಳ ನಿವಾಸಿಗಳು, ಪಾದಾಚಾರಿಗಳು, ವಾಹನ ಸವಾರರು ಮೂಗು ಮುಚ್ಚಿಕೊಂಡು ಓಡಾಡುತ್ತ ನಗರಸಭೆ ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ಹಿಡಿಶಾಪ ಹಾಕುತ್ತಿದ್ದ ದೃಶ್ಯ ಬುಧವಾರ ಬೆಳ್ಳಂಬೆಳಗ್ಗೆ ಕಂಡು ಬಂದಿತು. ಲಾಕ್‍ಡೌನ್ ಇರುವ ಸಂಬಂಧ ಬೆಳಗಿನ 10 ಗಂಟೆಯೊಳಗೆ ಮಾತ್ರ ಜನರು ಓಡಾಡಬೇಕಾದ ನಿರ್ಬಂಧವಿದೆ. ಆದರೆ, ಈ ಮನೆಹಾಳು ಗುತ್ತಿಗೆದಾರರು ಈ ರಸ್ತೆಯಲ್ಲಿ ಯುಜಿಡಿ ಪೈಪ್‍ಲೈನ್ ಒಡೆದಿದ್ದರಿಂದ ಆ ರಸ್ತೆಯನ್ನು ಬ್ಯಾರಿಕೇಡ್ ಹಾಕಿ ತಡೆಯಲಾಗಿದೆ.
ಇದರಿಂದ ಸಾರ್ವಜನಿಕರು ಕೇವಲ ಒಂದೇ ಬದಿಯಲ್ಲಿ ಓಡಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಅಷ್ಟೇ ಅಲ್ಲದೆ ಆ ಪೈಪ್‍ಲೈನ್‍ನಿಂದ ಹೊರಸೂಸುವ ಕೊಳಕು, ಚರಂಡಿ ರಸ್ತೆ ಮೂಲಕ ಹಾಯ್ದು ಗಟಾರ ಸೇರಿ ಚೌಡೇಶ್ವರಿ ದೇವಸ್ಥಾನದವರೆಗೂ ಗಬ್ಬು ಸೂಸುತ್ತ ಹರಿಯುತ್ತಿದೆ. 10 ಗಂಟೆಯ ನಂತರ ಅಂಗಡಿ ಮುಂಗಟ್ಟುಗಳೇನೋ ಮುಚ್ಚುತ್ತವೆ ನಿಜ. ಆದರೆ, ಗಟಾರಗಳ ಪಕ್ಕದಲ್ಲಿಯೇ ನೂರಾರು ಮನೆಗಳು ಇವೆ. ಅಲ್ಲಿ ವಾಸಿಸುವ ನಿವಾಸಿಗಳು ಗಬ್ಬು ವಾಸನೆ ಸೇವಿಸುತ್ತಲೇ ಇರಬೇಕೇ? ಕೊರೊನಾ ಮಹಾಮಾರಿಯಿಂದ ಎಷ್ಟೇ ಸುರಕ್ಷಿತವಾಗಿದ್ದರೂ ಸರಿದೂಗದೆ ಹೋಗುತ್ತಿರುವ ಈ ಸಂದಿಗ್ದ ಪರಿಸ್ಥಿತಿಯಲ್ಲಿ, ಈ ಯಡಬಿಡಂಗಿ ಗುತ್ತಿಗೆದಾರರು ಮಾಡುತ್ತಿರುವ ಅನಾಹುತವನ್ನು ಸಹಿಸುವುದಾದರೂ ಹೇಗೆ? ಇವರೇನು ಮಾಡಿದರೂ ಸಾರ್ವಜನಿಕರು ಸುಮ್ಮಿನಿರಬೇಕೇ? ಇವರನ್ನು ಹಿಡಿದು ಹೇಳುವವರು; ಕೇಳುವವರ್ಯಾರೂ ಇಲ್ಲವೇ?
ಮೇಡ್ಲೇರಿ ರಸ್ತೆಯ ಬದಿಯಲ್ಲಿ ಇದಕ್ಕಿಂತ ಮುಂಚಿನಿಂದಲೂ ಯಾವುದೇ ಕಾಮಗಾರಿ ಪ್ರಾರಂಭಗೊಂಡರೂ, ಇಂತಹ ಸಮಸ್ಯೆ ಹೊಸದೇನೂ ಅಲ್ಲ. ಇದ್ಯಾಕೆ ಹೀಗೆಂದು ಯಾರಾದರೂ ಕೇಳಿದರೆ, ಸಂಬಂಧಪಟ್ಟವರು ಮನೆಹಾಳು ಉತ್ತರ ನೀಡುತ್ತ ಕಾಲ ತಳ್ಳುತ್ತಿದ್ದಾರೆ. ಈಗಿನ ಇಲ್ಲಿನ ವಾಸನೆ ತಡೆದುಕೊಳ್ಳಲಾಗುತ್ತಿಲ್ಲ. ಸಂಬಂಧಪಟ್ಟ ವಾರ್ಡ್ ಸದಸ್ಯರಾಗಲೀ ಅಧಿಕಾರಿ ವರ್ಗವಾಗಲಿ; ಈ ಜಾಗಕ್ಕೊಂದು ಸಾರಿ ಭೇಟಿ ನೀಡಿ ಪರಿಶೀಲಿಸಿದರೆ ಗೊತ್ತಾಗುತ್ತದೆ ಮತ್ತು ಇಲ್ಲಿನ ನಿವಾಸಿಗಳು ಹೇಗೆ ವಾಸಿಸಬೇಕೆಂಬುದು. ಸರಿಪಡಿಸುತ್ತಾರೆಯೋ; ಇಲ್ಲವೋ, ಕಾದು ನೋಡಬೇಕಿದೆ.

______________________________________________________________________________________________________________________________

ಕಸಾಪ ಮತದಾರರ ಪರಿಷ್ಕರಣೆಗೆ ಮೊದಲ ಕಂತಿನ ಮೃತ ಹತ್ತು ಸದಸ್ಯರ ಹಾವೇರಿ ಜಿಲ್ಲೆಯ ಮಾಹಿತಿ ರವಾನೆ http://pandavanews.com/kasapa-election-voters/

ನ್ಯಜ ಸುದ್ದಿಗಾಗಿ ಸಂಪರ್ಕಿಸಿ 9742789207 ಮತ್ತು ನಮ್ಮ web site pandavanews.com ಗೆ ಲಾಗಿನ್ ಮಾಡಿ

  •  
  •  
  •  
  •  
  •  
  •  

Leave a Reply

Your email address will not be published. Required fields are marked *

Copyright © All rights reserved. | Developed by EXPOLOG TECHNOLOGIES
error: Content is protected !!