Fri. Nov 26th, 2021

ಪಾಂಡವ ನ್ಯೂಸ್

ಸಮಾಜದ ಧ್ವನಿ

ರಾಣೇಬೆನ್ನೂರು-ಮಾರುತಿ ನಗರದಲ್ಲಿ ನಗರಸಭೆ ಆಸ್ತಿ ಕೊಡಿಸುವ ನೆಪ ಸುಲಿಗೆ ಮಾಡುತ್ತಿರುವ ರಾಜಕಾರಣಿಗಳು

1 min read
 • ಮಾರುತಿ ನಗರದ ರಿ.ಸ.ನಂ.312 ಆಸ್ತಿಯಲ್ಲಿ ಖಾಲಿ ಇರುವ ಪ್ಲಾಟುಗಳನ್ನು ನಿಮ್ಮ ಹೆಸರಿಗೆ ದಾಖಲು ಮಾಡಿಸಿ ಕೊಡುತ್ತೇವೆ. ಆದ್ದರಿಂದ ನಮಗೆ 2 ಲಕ್ಷ ರೂಪಾಯಿ ಕೊಟ್ಟರೆ ಮಾತ್ರ. ಎಂದರವರು. ಆಗ ನಾವು ದುಡ್ಡು ಕೊಟ್ಟು ಕೈ ಸುಟ್ಟುಕೊಂಡಿದ್ದೇವೆ. ನಮಗೆ ಅನ್ಯಾಯವಾಗಿದೆ. ಏನು ಮಾಡಬೇಕೆಂಬು ತೋಚುತ್ತಿಲ್ಲ.
  -ಹೆಸರು ಹೇಳಲಿಚ್ಚಿಸದ ನಾಗರಿಕ.
 • ಮಾರುತಿ ನಗರದ ರಿ.ಸ.ನಂ.312 ಆಸ್ತಿಯಲ್ಲಿ ಅಂದಾಜು 50 ರಿಂದ 100 ಖಾಲಿ ಸೈಟುಗಳಿವೆ. ಅವುಗಳೆಲ್ಲ ನಗರಸಭೆಗೆ ಸಂಬಂಧಿಸಿದ್ದವು. ಆ ಸೈಟುಗಳ ಹೆಸರು ಹೇಳಿ ಯಾರಾದರೂ ದುಡ್ಡು ಕೇಳಿದರೆ ಕೊಡಬೇಡಿ. ಅದಕ್ಕೆ ನಮ್ಮಲ್ಲಿ ಯಾವುದೇ ಪ್ರಾವಿಜನ್ ಇಲ್ಲ. ಅಂತಹ ಪ್ರಮೇಯವೇನೇ ಇದ್ದರೂ ಪತ್ರಿಕಾ ಪ್ರಕಟಣೆ ಮೂಲಕ ಸಾರ್ವಜನಿಕರ ಗಮನಕ್ಕೆ ತರುತ್ತೇವೆ.
  -ಡಾ. ಮಹಾಂತೇಶ್ ಎನ್., ಪೌರಾಯುಕ್ತರು

ಪಾಂಡವ ನ್ಯೂಸ್, ರಾಣೇಬೆನ್ನೂರು: “ಯಾರದೋ ರೊಕ್ಕ, ಯಲ್ಲಮ್ಮನ ಜಾತ್ರೆ” ಎನ್ನುವ ಹಾಗೆ ತುತ್ತು ಅನ್ನಕ್ಕೂ ಪ್ರತಿದಿನ ದುಡಿದು ತಿನ್ನುವ (ಹಣವಂತ ಸಾರ್ವಜನಿಕರೂ ಇದ್ದಾರೆ) ಅಮಾಯಕ ಸಾರ್ವಜನಿಕರಿಗೆ ಯಾಮಾರಿಸುತ್ತ, ‘ನಗರದೆಲ್ಲೆಡೆÀ ಖಾಲಿ ಇರುವ ನಿವೇಶನಗಳ ಸಂಪೂರ್ಣ ಮಾಹಿತಿ ತಮಗಿದ್ದು, ಅದನ್ನು ನಗರಸಭೆಯಲ್ಲಿ ನಿಮ್ಮ ಹೆಸರಿಗೆ ಮಾಡಿಸಿ ಕೊಡುತ್ತೇವೆ. ಅದಕ್ಕೋಸ್ಕರ ನಮಗೆ ಇಂತಿಷ್ಟು ಹಣ ಕೊಡಬೇಕು. ಪ್ರಮುಖ ಸದಸ್ಯರು ತುಂಬಾ ಹತ್ತಿರ; ಅವರಿಗೆ ಒಂದು ಮಾತು ನಾವು ಹೇಳಿದರೆ ಸಾಕು; ನಿಮ್ಮ ಕೆಲಸ ಆದಂಗೆ’ ಎಂದು ತಮ್ಮ ಬುಜ ತಾವೇ ಚಪ್ಪರಿಸಿಕೊಳ್ಳುತ್ತ, ಅಮಾಯಕ ಸಾರ್ವಜನಿಕರಿಂದ ಈ ಖದೀಮರು ಹಣ ಪೀಕುತ್ತಿದ್ದಾರೆ ಎಂಬ ಗುಮಾನಿ ರಾಣೇಬೆನ್ನೂರು ನಗರದೆಲ್ಲೆಡೆ ಹಬ್ಬುತ್ತಿದೆ.
ಔಜಿ ಛಿouಡಿse : ಇದು ಸುಳ್ಳಲ್ಲ… ರಾಣೇಬೆನ್ನೂರಿನ ಮಾರುತಿ ನಗರದ ರಿ.ಸ.ನಂ. 312 ಆಸ್ತಿಯು ನಗರಸಭೆಯ ವ್ಯಾಪ್ತಿಗೆ ಒಳಪಡುತ್ತಿದ್ದು, ಆ ಆಸ್ತಿಯಲ್ಲಿ ಅಂದಾಜು 50 ರಿಂದ 100 ಪ್ಲಾಟುಗಳು ಖಾಲಿ ಇವೆ ಎನ್ನಲಾಗುತ್ತಿದೆ. ಅಂತಹ ಎಲ್ಲ ಖಾಲಿ ಇರುವ ಪ್ಲಾಟುಗಳ ಮೇಲೆ ಖದೀಮರೆಂಬ ಹದ್ದುಗಳ ಕಣ್ಣುಗಳಿವೆ. ರಾಜಕೀಯ ಪುಡಾರಿಗಳು ಎನ್ನಲಾಗುತ್ತಿರುವ ಈ ಹಡಬೆ ಮಂದಿ, ಸಾರ್ವಜನಿಕರಿಗೆ ಸುಳ್ಳು ಮಾಹಿತಿ ನೀಡುತ್ತ; ‘ನಿಮ್ಮ ಹೆಸರಿಗೇ ಸೈಟುಗಳನ್ನು ದಾಖಲು ಮಾಡಿಸಿ ಕೊಡುತ್ತೇವೆ’ ಎಂದು ಸುಳ್ಳು ಭರವಸೆ ನೀಡುತ್ತ ಸಾರ್ವಜನಿಕರಿಂದ ಅಂದಾಜು 1.5 ಲಕ್ಷದಿಂದ 2 ಲಕ್ಷ ರೂ.ವರೆಗೆ ದುಡ್ಡು ಪೀಕುತ್ತಿದ್ದಾರೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ದಟ್ಟವಾಗಿ ಕೇಳಿ ಬರುತ್ತಿವೆ.
ಈಗಾಗಲೇ ಈ ಹಗಲು ದರೋಡೆಕೋರರ ಮಾತು ನಂಬಿ ಮೋಸ ಹೋದ ಎಷ್ಟೋ ಜನರು ತಮ್ಮ ಲಕ್ಷಾಂತರ ದುಡ್ಡನ್ನು ಹರಾಮಕೋರರ ಜೇಬು ತುಂಬಿಸಿದ್ದಾರೆ. ‘ನಮಗೆ ಸೈಟು ಬೇಡ; ಕಡೇ ಪಕ್ಷ ನಮ್ಮ ದುಡ್ಡು ನಮಗೆ ವಾಪಾಸ್ ಕೊಡಿ’ ಎಂದು ಅಮಾಯಕರು ಇವರ ದುಂಬಾಲು ಬಿದ್ದಿದ್ದಾರೆ. ಆದರೂ ಕೂಡ ಅವರಿಗೆ ಕ್ಯಾರೆ ಎನ್ನುತ್ತಿಲ್ಲ ಎಂದು ಹೆಸರು ಹೇಳಲಿಚ್ಚಿಸದ ನಾಗರಿಕರೊಬ್ಬರು ‘ಪಾಂಡವ’ ನೊಂದಿಗೆ ತಮ್ಮ ಅಳಲು ತೋಡಿಕೊಂಡರು. ಅಷ್ಟೇ ಅಲ್ಲ; ಈ ಖದೀಮರು ಇಂದಿಗೂ ಮಾರುತಿ ನಗರದಲ್ಲಿರುವ ರಿ.ಸ.ನಂ.312 ಆಸ್ತಿಯಲ್ಲಿರುವ ಸೈಟುಗಳನ್ನೇ ಆಧಾರವಾಗಿಟ್ಟುಕೊಂಡು, ತಮ್ಮ ದುಸ್ಕøತ್ಯ ಪದಗಳೆಂಬ ಸರ್ಪಾಸ್ತ್ರಗಳನ್ನು ಅಮಾಯಕರ ಮೇಲೆ ಹರಿಬಿಡುತ್ತಾ, ಹಣ ಪೀಕುತ್ತಲೇ ಇದ್ದಾರೆ ಮತ್ತು ಹೊಸ ಹೊಸ ಅಮಾಯಕರನ್ನು ಗುರುತಿಸಿ ಹಣ ಪೀಕಲೆತ್ನಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಇಲ್ಲಿ ಗಮನಿಸಬೇಕಾದ ಗಮನಾರ್ಹ ಸಂಗತಿಯೆಂದರೆ; ಮಾರುತಿ ನಗರದಲ್ಲಿ ನಗರಸಭೆಗೆ ಸಂಬಂಧಿಸಿದ ಖಾಲಿ ಇರುವ ಈ ಸೈಟುಗಳು ಇವರಪ್ಪನಿಗೆ ಸೇರಿವೆಯೇ? ಸರಕಾರದ ಆಸ್ತಿಗಳನ್ನು ಅಮಾಯಕ ಸಾರ್ವಜನಿಕರಿಗೆ ಕೊಡಿಸಲು ಇವರಾರು? ಈ ಆಸ್ತಿ ಮೇಲೆ ಇವರಿಗೇನು ಹಕ್ಕಿದೆ? ಲೋಕಲ್ ರಾಜಕೀಯ ನಾಯಕರ ಕಾರ್ಯಕ್ರಮಗಳಲ್ಲಿ ಅಲ್ಲೊಂದು, ಇಲ್ಲೊಂದು ಫೋಟೊ ಪ್ರೇಂಗಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನಲಾಗುವ ಇವರು, ಮಂದಿ ಗಂಟು ಹೊಡೆಯಲು ಮುಂದಾಗಿರುವುದು ಏಕೆ? ಸಾರ್ವಜನಿಕ ಹಿತದೃಷ್ಟಿಯಿಂದ, ನಗರಸಭೆಯ ಸರ್ವ ಆಸ್ತಿಯ ಮೇಲೆ ಹಕ್ಕಿರುವುದು ಪೌರಾಯುಕ್ತರಿಗೆ ಮಾತ್ರ. ಅವರನ್ನು ಬಿಟ್ಟು ಬೇರಾರಿಗೂ ಇಲ್ಲ.
ವ್ಯವಸ್ಥೆ ಹೀಗಿರುವಾಗ ಜನರನ್ನು ಯಾಮಾರಿಸಿ, ಸರಕಾರದ ಆಸ್ತಿ ತೋರಿಸಿ; ಬಡವರ ದುಡ್ಡು ಹೊಡೆಯಲು ಈ ಚಿಲ್ಡ್ರಾ ಚಪಾಟಿಗಳಾರು? ಇವರಿಗೆ ಕುಮ್ಮಕ್ಕು ನೀಡಿದವರಾರು? ಇವರು ರಾಜಕೀಯ ಪ್ರೇರಿತ ಪ್ರಭಾವಿಗಳೇ? ಪ್ರಭಾವಿಗಳಾದರೂ ಕೂಡ ಸಾರ್ವಜನಿಕ ಆಸ್ತಿಯ ಮೇಲೆ ಇವರಿಗ್ಯಾವ ಹಕ್ಕು ಮತ್ತು ಅಮಾಯಕ ನಾಗರಿಕರನ್ನು ಮೊಸಗೊಳಿಸಲು ಇವರಾರು? ಈ ಕುರಿತು ನಗರಸಭೆ ಪೌರಾಯುಕ್ತ ಡಾ.ಮಹಾಂತೇಶ ಎನ್. ಅವರು ಗಂಭೀರ ಚಿಂತನೆ ನಡೆಸಿ ಸೂಕ್ತ ಕ್ರಮ ಜರುಗಿಸಬೇಕು ಎಂದು ನೊಂದ ಸಾರ್ವಜನಿಕರು ಪತ್ರಿಕೆ ಮುಖಾಂತರ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

 •  
 •  
 •  
 •  
 •  
 •  

Leave a Reply

Your email address will not be published. Required fields are marked *

Copyright © All rights reserved. | Developed by EXPOLOG TECHNOLOGIES
error: Content is protected !!