Sat. Jan 22nd, 2022

ಪಾಂಡವ ನ್ಯೂಸ್

ಸಮಾಜದ ಧ್ವನಿ

ತಲೆ ಎತ್ತುತ್ತಿರುವ ಅನಧಿಕೃತ ಕಟ್ಟಡ : ಲಾಭಿಗಾಗಿ ಕುಳಿತಿರುವ ನಗರಸಭೆ ಪೌರಾಯುಕ್ತ, ಅಭಿಯಂತರರು, ಆರೋಗ್ಯ ನಿರೀಕ್ಷಕರು

1 min read

ಈಗಾಗಲೇ ನಾವು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದೇವೆ ಹಾಗೂ ಕೆಲಸವನ್ನು ನಿಲ್ಲಿಸುವಂತೆ ಸೂಚಿಸಿದ್ದೇವೆ. ಆದರೂ ಕೂಡ ಅವರು ಕೆಲಸ ನಿಲ್ಲಿಸದೆ ಪ್ರಾರಂಭಿಸಿದ್ದರಿಂದ ಅವರ ಮೇಲೆ ಸೂಕ್ತ ಕಾನೂನು ಕ್ರಮಕ್ಕೆ ಶಿಪಾರಸ್ಸು ಮಾಡುತ್ತೇವೆ.
– ಪೌರಾಯುಕ್ತರು, ನಗರಸಭೆ, ರಾಣೇಬೆನ್ನೂರು.

ಪಾಂಡವ ನ್ಯೂಸ್, ರಾಣೇಬೆನ್ನೂರು: ನಗರಗಳಲ್ಲಾಗಲಿ, ಗ್ರಾಮಾಂತರ ಪ್ರದೇಶಗಳಲ್ಲಾಗಲೀ ಅಥವಾ ಯಾವುದೇ ಸ್ಥಳದಲ್ಲಿ ಕಟ್ಟಡ ನಿರ್ಮಿಸಬೇಕೆಂದರೆ, ಅದರಲ್ಲೂ ವಾಣಿಜ್ಯ ಕಟ್ಟಡ ಅಥವಾ ವಾಣಿಜ್ಯ ಸಂಕೀರ್ಣಗಳನ್ನು ನಿರ್ಮಿಸಬೇಕೆಂದರೆ ಸಂಬಂಧಪಟ್ಟ ಇಲಾಖೆಯಿಂದ ಪರವಾನಗಿ ಪಡೆದಿ ರಲೇಬೇಕು. ಅಲ್ಲದೆ, ಅಂತಹ ಕಟ್ಟಡದ ಎದುರು ಪಾರ್ಕಿಂಗ್ ವ್ಯವಸ್ಥೆ ಕೂಡ ಇರಬೇಕೆಂಬುದು ಮಾನದಂಡ.
ಪರವಾನಗಿ ಇಲ್ಲದೆ ಕಟ್ಟಡ ನಿರ್ಮಿಸಿದರೆ ಅಪರಾಧ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಆದರೆ, ರಾಣೇಬೆನ್ನೂರು ನಗರದಲ್ಲಿ ನಗರಸಭೆ ಮತ್ತು ಹೆಸ್ಕಾಂ ಇಲಾಖೆಗಳ ಪರವಾನಗಿ ಪಡೆಯದೆ ದೊಡ್ಡ ಮಟ್ಟದ ಗಜ ಗಾತ್ರದ ಕಟ್ಟಡವೊಂದು ತಲೆ ಎತ್ತುತ್ತಿರುವುದು ಬೆಳಕಿಗೆ ಬಂದರೂ ಸಹ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿರುವುದು ಹಲವು ಅನುಮಾನಕ್ಕೆ ಎಡೆ ಮಾಡಿ ಕೊಡುತ್ತಿದೆ.ಅಂತಹ ದೊಡ್ಡ ಮಟ್ಟದಲ್ಲಿ ತಲೆ ಎತ್ತುತ್ತಿರುವ ಬೃಹತ್ ಕಟ್ಟಡ ಯಾವುದು? ಎನ್ನುವ ರೋಚಕ ಕುತೂಹಲದ ಛಿomಠಿಟeಣe ಜeಣಚಿiಟ ಇಲ್ಲಿದೆ..
ರಾಣೇಬೆನ್ನೂರು ನಗರದ ಹೃದಯ ಭಾಗವಾದ ಅಂಚೆ ವೃತ್ತದಿಂದ ಎಂಜಿ ರಸ್ತೆಗೆ ತೆರಳುವ ಮಾರ್ಗದ ಎಡಕ್ಕೆ (ಸಿದ್ದಿವಿನಾಯಕ ಬುಕ್ ಸ್ಟಾಲ್ ಎದುರು) ಅಂತಹ ಪರವಾನಗಿ ಇಲ್ಲದ ಕಟ್ಟಡವನ್ನು ಪ್ರಬಾವಿ ಎನ್ನಲಾಗುತ್ತಿರುವ ಖಾಸಗಿ ವ್ಯಕ್ತಿಯೋರ್ವರು ಸರಿಸುಮಾರು 15 ರಿಂದ 20 ದಿನಗಳಿಂದ ರಾತ್ರಿ ಸಮಯದಲ್ಲಿ ವಿದ್ಯುತ್ ಬಳಸಿಕೊಂಡು ಕಟ್ಟುತ್ತಿದ್ದಾರೆ. ಹಾಗಾದರೆ ಆ ವ್ಯಕ್ತಿ ಪರವಾನಗಿ ಇಲ್ಲದೆ ವಾಣಿಜ್ಯ ಕಟ್ಟಡ ಕಟ್ಟುತ್ತಿರುವುದು ಯಾರ ಕುಮ್ಮಕ್ಕಿನಿಂದ? ಕಟ್ಟಡ ನಿರ್ಮಾಣಕ್ಕೆ ಪರವಾನಗಿ ನೀಡಬೇಕಾದ ನಗರಸಭೆ ಪೌರಾಯುಕ್ತ ಮತ್ತು ಸಂಬಂಧಿಸಿದ ಅಧಿಕಾರಿ ವರ್ಗ ಗಪ್ಚುಪ್ ಆಗಿರುವುದೇಕೆ?
ಆ ಕಟ್ಟಡ ನಿರ್ಮಾಣ ಸಂದರ್ಭದಲ್ಲಿ ವಿದ್ಯುತ್ ಬಳೆಕೆಯಾಗುತ್ತಿದೆ. ವಿದ್ಯುತ್ ಬಳಕೆಗೆ ಪರವಾನಗಿ ಇದೆಯೇ? ಈ ವಿಷಯ ಶಾಸಕ ಅರುಣಕುಮಾರ ಪೂಜಾರ ಗಮನಕ್ಕೆ ಬಂದಿಲ್ಲವೇ? ಎಂಬುದು ಸಾರ್ವಜನಿಕರ ಯಕ್ಷ ಪ್ರಶ್ನೆಯಾಗಿದೆ. ವಾಣಿಜ್ಯ ಕಟ್ಟಡ ಅಥವಾ ಸಂಕೀರ್ಣ, ಮಳಿಗೆಗಳ ನಿರ್ಮಾಣದ ಪರವಾನಗಿಗೆ ಸಾವಿರಾರು ರೂಪಾಯಿಯಿಂದ ಲಕ್ಷಾಂತರ ರೂ.ವರೆಗೆ ಹಣ ಭರಿಸಬೇಕು. ಪರವಾನಗಿ ಪಡೆದರೆ ಮಾತ್ರ ಆ ಹಣ ಸರ್ಕಾರದ ಬೊಕ್ಕಸ ಸೇರುತ್ತದೆ ವಿನಃ ಯಾವುದೇ ಕಾರಣಕ್ಕೂ ಸೇರುವುದಿಲ್ಲ. ಹಾಗಿದ್ದರೆ, ಇಲ್ಲಿ ನಿರ್ಮಿಸುತ್ತಿರುವ ಕಟ್ಟಡಕ್ಕೆ ಪರವಾನಗಿ ಏಕಿಲ್ಲ? ಯಾರ್ಯಾರು ಪ್ರಭಾವಿಗಳು ಇದರ ಹಿಂದಿದ್ದಾರೆ? ಯಾರ್ಯಾರು ತಮ್ಮ ತಮ್ಮ ಜೇಬಿಗೆ ಎಷ್ಟು ಭಿಕ್ಷೆ ಇಳಿಸಿಕೊಂಡಿದ್ದಾರೆ? ಎನ್ನುವುದು ಸಾರ್ವಜನಿಕರ ಗಂಭೀರ ಪ್ರಶ್ನೆ ಎನ್ನಲಾಗುತ್ತಿದೆ.ಸದರಿ ವಿಷಯದ ಕುರಿತು ಸ್ವತಃ ಎಡಬಿಡಂಗಿ ಅಧಿಕಾರಿಗಳಾದ ನಗರಸಭೆ ಪೌರಾಯುಕ್ತ ಡಾ. ಮಹಾಂತೇಶ್ ಎನ್ ಹಾಗೂ ಹೆಸ್ಕಾಂ ಅಧಿಕಾರಿ ಬೆಳಕೇರಿಯವರನ್ನು ಕೇಳಿದರೆ “ನಮಗೆ ಗೊತ್ತೇ ಇಲ್ಲ. ಸ್ಥಳ ಪರಿಶೀಲಿಸುವೆವು, ಶೀಘ್ರ ಕ್ರಮ ತೆಗೆದುಕೊಳ್ಳುತ್ತೇವೆ” ಎಂಬ ಅನಾಗರಿಕ ಉತ್ತರ ಕೊಡುತ್ತಾರೆ. ಇಷ್ಟಕ್ಕೇ ಗೊತ್ತಾಗುತ್ತದೆ, ಇವರ ಅಧಿಕಾರ ದಕ್ಷತೆ ಮತ್ತು ಪ್ರಾಮಾಣಿಕತೆ ಎಂತದ್ದು ಎನ್ನುವುದು.
ಸಾಮಾನ್ಯ ಬಡವರು ಫುಟ್‍ಪಾತ್ ಬಳಿ ಹಣ್ಣು, ತರಕಾರಿ, ಹೂ ಮಾರುತ್ತಿದ್ದರೆ ಅಥವಾ ಗೃಹ ಬಳಕೆಯ ಕೆಇಬಿ ಬಿಲ್ ಸೂಕ್ತ ಸಮಯದಲ್ಲಿ ಪಾವತಿಸದಿದ್ದರೆ ಏನೆಲ್ಲ ಕಾನೂನನ್ನು ಅವರ ಮೇಲೆ ಹೇರುತ್ತಾರೆ. ಆದರೆ, ಪ್ರಭಾವಿ ಎನ್ನಲಾಗುತ್ತಿರುವ ವ್ಯಕ್ತಿಯೋರ್ವರು ಪರವಾನಗಿ ಇಲ್ಲದೆಯೇ ಈ ಜಾಗದಲ್ಲಿ ವಾಣಿಜ್ಯ ಕಟ್ಟಡ ನಿರ್ಮಿಸುತ್ತಿದ್ದರೆ ಕಿತ್ ಹೋದ್ ಈ ಅಧಿಕಾರಿಗಳು ಅದನ್ನು ಕಟ್ಟದಂತೆ ತಡೆಯದೆ ಇರುವುದರ ಹಿಂದಿನ ಅಸಲಿ ನಗ್ನ ಸತ್ಯ ಏನು? ಇಂತಹ ಎಷ್ಟು ಕಟ್ಟಡಗಳು ಅಥವಾ ಸಂಕೀರ್ಣಗಳು ನಗರದಾದ್ಯಂತ ತಲೆ ಎತ್ತುತ್ತಿವೆ? ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ. ಕಾದು ನೋಡಬೇಕಿದೆ…

  •  
  •  
  •  
  •  
  •  
  •  

Leave a Reply

Your email address will not be published. Required fields are marked *

Copyright © All rights reserved. | Developed by EXPOLOG TECHNOLOGIES
error: Content is protected !!