Fri. Nov 26th, 2021

ಪಾಂಡವ ನ್ಯೂಸ್

ಸಮಾಜದ ಧ್ವನಿ

ಶ್ರೀ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮಿಜಿಗಳ 7ನೇ ವರ್ಷದ ಶಿವಯೋಗ ಮೌನ ತಪೋನುಷ್ಠಾನ ಮಂಗಲ ಸಮಾರಂಭ ಜುಲೈ 29 ರಂದು

ಗುತ್ತಲ: ನೆಗಳೂರ ಸಂಸ್ಥಾನ ಹಿರೇಮಠದ ಶ್ರೀ ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮಿಜಿ ಸದ್ಭಕ್ತರ ಶ್ರೇಯಸ್ಸಿಗಾಗಿ 48ದಿನಗಳ ವರೆಗೆ ಕೈಗೊಂಡ 7ನೇ ವರ್ಷದ ಶಿವಯೋಗ ಮೌನ ತಪೋನುಷ್ಠಾನ ಮಂಗಲ ಸಮಾರಂಭ ಜುಲೈ 29ನೇ ಸೋಮವಾರ ಬೆಳಿಗ್ಗೆ 10ಕ್ಕೆ ಸಮೀಪದ ನೆಗಳೂರ ಗ್ರಾಮದ ಹಿರೇಮಠದಲ್ಲಿ ಜರಗುವುದು.


ಕಾರ್ಯಕ್ರಮದ ಸಾನಿಧ್ಯವನ್ನು ಬಂಕಾಪುರದ ಭಾವೀಸ್ ಮಹಲ್ ಕಟ್ಟೀಮನಿ ಅರಳೆಲೆ ಹಿರೇಮಠ ಶ್ರೀ ರೇವಣ್ಣಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಜಿ ವಹಿಸುವರು. ಸಮ್ಮುಖ ಹಾವೇರಿ ಹರಸೂರ ಬಣ್ಣಮಠದ ಅಭಿನವರುದ್ರ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಜಿ ಹಾಗೂ ಗುತ್ತಲ ಕಲ್ಮಠದ ಶ್ರೀ ಗುರುಶಿದ್ದ ಸ್ವಾಮಿಜಿ ವಹಿಸುವರು. ಅಲ್ಲದೆ ಗುರುಶಾಂತೇಶ್ವರ ಶ್ರೀಗಳಿಂದ ಶ್ರಾವಣ ಮಾಸದ ಶಿವಪೂಜಾ ಕಾರ್ಯಕ್ರಮ ಆಗಷ್ಟ 2ರಿಂದ ಆಗಷ್ಟ 30ರ ವರೆಗೆ ಬೆಳಿಗ್ಗೆ 8ರಿಂದ 9.30 ವರೆಗೆ ನೆರವೇರವುದೆಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.

  •  
  •  
  •  
  •  
  •  
  •  

Leave a Reply

Your email address will not be published. Required fields are marked *

Copyright © All rights reserved. | Developed by EXPOLOG TECHNOLOGIES
error: Content is protected !!