Sat. Nov 27th, 2021

ಪಾಂಡವ ನ್ಯೂಸ್

ಸಮಾಜದ ಧ್ವನಿ

6ನೇ ವೇತನ ಆಯೋಗ ಜಾರಿಗೆ ಹಾಗೂ 9 ಬೇಡಿಕೆಗಳ ಈಡೇರಿಕೆಗಾಗಿ ಶಾಸಕರಿಗೆ ಮನವಿ

1 min read

ಪಾಂಡವ ನ್ಯೂಸ್, ರಾಣೆಬೆನ್ನೂರು : 6ನೇ ವೇತನ ಆಯೋಗ ಜಾರಿ ಮಾಡುವುದು ಸೇರಿ 9 ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ರಾಜ್ಯ ರಸ್ತೆ ಸಾರಿಗೆ ನೌಕರರ ಒಕ್ಕೂಟದ ತಾಲೂಕು ಘಟಕದ ವತಿಯಿಂದ ಶುಕ್ರವಾರ ಶಾಸಕ ಅರುಣಕುಮಾರ ಪೂಜಾರ ಅವರಿಗೆ ಮನವಿ ಸಲ್ಲಿಸಲಾಯಿತು.
ನೇತೃತ್ವ ವಹಿಸಿಕೊಂಡಿದ್ದ ನೌಕರ ಮಹಾಂತೇಶ ಬೆಣ್ಣಿಹಳ್ಳಿ ಮಾತನಾಡಿ, 6ನೇ ವೇತನ ಆಯೋಗ ಜಾರಿಗಾಗಿ ಹಲವಾರು ವರ್ಷಗಳಿಂದ ಹೋರಾಟ ಮಾಡಿz್ದÉೀವೆ. ಆದರೆ, ಈವರೆಗೂ ಬೇಡಿಕೆ ಈಡೇರಿಸಿಲ್ಲ. ಅಲ್ಲದೆ ಕರೊನಾ ಸಮಯದಲ್ಲಿ ವಿವಿಧ ಬೇಡಿಕೆ ಈಡೇರಿಸಲು ಮುಷ್ಕರ ಆರಂಭಿಸಿದಾಗ, ಡಿಸಿಎಂ ನೇತೃತ್ವ ಸಭೆ ನಡೆಸಿ 9 ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದಾರೆ. ಆದರೆ, ಈವರೆಗೂ ಯಾವ ಬೇಡಿಕೆಯೂ ಜಾರಿಗೆ ಬಂದಿಲ್ಲ ಎಂದು ಆರೋಪಿಸಿದರು.
ಆದ್ದರಿಂದ ಸರ್ಕಾರ ಬೇಡಿಕೆ ಈಡೇರಿಸಲು ಆಗ್ರಹಿಸಿ ಮುಷ್ಕರ ಆರಂಭಿಸಿ ಹೋರಾಟ ಮಾಡುತ್ತಿದ್ದರೂ ಸರ್ಕಾರ ಕ್ಯಾರೇ ಎನ್ನುತ್ತಿಲ್ಲ. ಅಲ್ಲದೆ ನೌಕರರ ವಿರುದ್ಧ ದೂರು ದಾಖಲು ಮಾಡಲಾಗುತ್ತಿದೆ. ನೌಕರಿಯಿಂದ ವಜಾ ಮಾಡಲಾಗುತ್ತಿದೆ. ಹೀಗೆ ನಾನಾ ರೀತಿಯಲ್ಲಿ ಸಮಸ್ಯೆ ಮಾಡಿ ಹೋರಾಟ ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಆದರೆ, ನೌಕರರು ಯಾವುದೇ ಕಾರಣಕ್ಕೂ ಹೋರಾಟ ಕೈ ಬಿಡುವುದಿಲ್ಲ. ಸರ್ಕಾರ ಹೇಳಿರುವಂತೆಯೇ 9 ಬೇಡಿಕೆ ಜಾರಿಗೆ ಬರಬೇಕು. ಇಲ್ಲವಾದರೆ ಮುಂದಿನ ದಿನದಲ್ಲಿ ಹೋರಾಟ ಇನ್ನೂ ತೀವ್ರವಾಗಲಿದೆ ಎಂದು ಎಚ್ಚರಿಸಿದರು. ಸಾರಿಗೆ ಸಂಸ್ಥೆ ನೌಕರರಾದ ಪ್ರಭು ಲಮಾಣಿ, ಎಚ್. ತಿಮ್ಮರೆಡ್ಡಿ, ಆನಂದಕುಮಾರ ಸೊಂಡೇರ, ಮಂಜುನಾಥ ಬಿ.ಎಚ್., ಜಿ.ಎಸ್. ಸಣ್ಣಮನಿ, ಅಂಬರೀಷ ಎನ್., ಕೆ. ವೆಂಕಟೇಶ, ಯಲ್ಲಪ್ಪ ಪೂಜಾರಿ, ಎಂ. ಓಂಕಾರಯ್ಯ ಮತ್ತಿತರರು ಉಪಸ್ಥಿತರಿದ್ದರು.

  •  
  •  
  •  
  •  
  •  
  •  

Leave a Reply

Your email address will not be published. Required fields are marked *

Copyright © All rights reserved. | Developed by EXPOLOG TECHNOLOGIES
error: Content is protected !!