Sat. Nov 27th, 2021

ಪಾಂಡವ ನ್ಯೂಸ್

ಸಮಾಜದ ಧ್ವನಿ

ಶಾಸಕರಿಗೆ ಕಿಂಚಿತ್ತಾದರೂ ಕಾಳಜಿ ಇದ್ದರೆ 10 ಗಂಟೆ ನಂತರ ಸಂಪೂರ್ಣ ರಾಣೇಬೆನ್ನೂರು ಬಂದ್ ಆಗಲಿ..!

1 min read

ಪಾಂಡವ ನ್ಯೂಸ್, ರಾಣೇಬೆನ್ನೂರು: ಕೊರೊನಾ (ಕೋವಿಡ್ – 19) ವೈರಸ್ ಸಾಂಕ್ರಾಮಿಕ ರೋಗವು ದಿನೇ ದಿನೇ ತನ್ನ ರೌದ್ರನರ್ತನ ತೋರುತ್ತ ರಣಭೇಟೆಯಾಡುತ್ತಿದೆ. ಇದರಿಂದ ಮಕ್ಕಳು, ವಯಸ್ಕರು ವೃದ್ದರಾದಿಯಾಗಿ ರಾಜ್ಯ, ಜಿಲ್ಲೆ ಸೇರಿದಂತೆ ರಾಣೇಬೆನ್ನೂರು ತಾಲೂಕಿನಾದ್ಯಂತ ಕೋವಿಡ್ ಸೋಂಕಿತರ ಸಂಖ್ಯೆ 400 ರ ಅಂಕಿ ದಾಟಿಯಾಗಿದೆ. ಇದನ್ನು ತಡೆಯಲು ತಾಲೂಕಾಡಳಿತ ಹಾಗೂ ಜಿಲ್ಲಾಡಳಿತ ಮುಂಜಾಗ್ರತಾ ಕ್ರಮ ಏನು ತೆಗೆದುಕೊಂಡಿದೆ? ವಿಶೇಷವಾಗಿ ರಾಣೇಬೆನ್ನೂರು ವಿಧಾನಸಭಾ ಕ್ಷೇತ್ರದ ಶಾಸಕ ಅರುಣಕುಮಾರ ಪೂಜಾರ ಎಲ್ಲಿದ್ದಾರೆ? ಅಧಿಕಾರಿಗಳಿಗೆ ಏನು ಸೂಚನೆ ನೀಡುತ್ತಿದ್ದಾರೆ? ಜನರು ಬೇಕಾಬಿಟ್ಟಿಯಾಗಿ ತಿರುಗಾಡುತ್ತಿದ್ದರೂ ಸಹ ಪೊಲೀಸರೇನು ಕಡ್ಲೆ ಕಾಯಿ ತಿನ್ನುತ್ತಿದ್ದಾರೆಯೇ? ತಾಲೂಕಿನಲ್ಲಿ ಕೋವಿಡ್‍ನ ನಾಗಾಲೋಟದ ವಿಷಯವಾಗಿ ಅಧಿಕಾರಿಗಳ ಸಭೆ ಕರೆದು ಏನು ಸೂಚನೆ ನೀಡುತ್ತಿದ್ದಾರೆ? ಎಂದು ಸಾರ್ವಜನಿಕರು ಕೇಳುವಂತಾಗಿದೆ.


ಕೋವಿಡ್‍ನಿಂದ ಜನರ ನಿತ್ಯದ ಬದುಕು ಅತಂತ್ರವಾಗಬಾರದೆಂಬ ಉದ್ದೇಶದಿಂದ ವಾರಾಂತ್ಯದ 2 ದಿನಗಳ ಕಾಲ ಕಫ್ರ್ಯೂ ಘೋಷಿಸಿದ ರಾಜ್ಯ ಸರಕಾರ, 14 ದಿನಗಳ ಕಾಲ ಲಾಕ್‍ಡೌನ್ ಸಹ ಘೋಷಿಸಿ ಪ್ರತಿಯೊಬ್ಬರೂ ಮಾಸ್ರ್ಕ ಧರಿಸಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ಸಿಎಂ ಯಡಿಯೂರಪ್ಪನವರು ಸೂಚಿಸಿದ್ದಾರೆ. ಮೊದಲಿಗೆ ಜನರ ಅಗತ್ಯ ವಸ್ತುಗಳ (ಹಣ್ಣು, ಹಾಲು, ತರಕಾರಿ, ತರಕಾರಿ ಇತ್ಯಾದಿ) ಖರೀದಿಗೆಂದು ಬೆಳಗಿನ 6 ಗಂಟೆಯಿಂದ 10 ಗಂಟೆಯವರೆಗೆ ವೇಳೆ ನಿಗಧಿ ಮಾಡಿತ್ತು. ಮತ್ತೆ ಕಿರಾಣಿ, ದಲಾಲಿ ಅಂಗಡಿಗಳು ಸೇರಿದಂತೆ ಇತ್ಯಾದಿಗಳ ವ್ಯಾಪಾರ ವಹಿವಾಟನ್ನು 12 ಗಂಟೆಗೆಂದು ವಿಸ್ತರಿಸಿತು.
ಏತನ್ಮಧ್ಯೆ.. ಬಿಡಾಡಿ ಜನರು ಕೆಲಸವಿಲ್ಲದಿದ್ದರೂ ಸಹ ಬಿಡಾಡಿ ನಾಯಿಗಳಂತೆ ಓಡಾಡಲೂ ಸಹ ಶುರುವಿಟ್ಟುಕೊಂಡಿದ್ದಾರೆ. ಇಂತಹ ಕೆಲಸಕ್ಕೆ ಬಾರದ ಜನರ ದಟ್ಟಣೆಯನ್ನು ಪೊಲೀಸರು ಯಾವ ರೀತಿ ನಿರ್ಬಂಧಿಸುತ್ತಿದ್ದಾರೆ? ಎಂಬುದು ಪ್ರಜ್ಞಾವಂತ ನಾಗರಿಕರ ಮನಸ್ಸಿನಲ್ಲಿ ಯಕ್ಷ ಪ್ರಶ್ನೆಯಾಗಿ ಕಾಡುತ್ತಿದೆ. ರಾಜ್ಯದಾದ್ಯಂತ ಆಕ್ಸಿಜನ್ ಕೊರತೆಯಾಗುತ್ತಿದೆ. ಇದರಿಂದ ರೋಗಿಗಳ ಆರೋಗ್ಯದ ಮೇಲೆ ದುಷ್ಪರಿಣಾಮಗಳು ಬೀರುತ್ತಿವೆ. ಇದೇ ಕಾರಣದಿಂದ ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಬ್ಬಾಯಿ ತಮ್ಮ ಕ್ಷೇತ್ರಗಳ ಮೇಲೆ ಹೆಚ್ಚು ನಿಗಾ ಇಡುತ್ತಿದ್ದಾರೆ. ಪದೇಪದೇ ವಿಡಿಯೋ ಕಾನ್ಪರೆನ್ಸ್ ಮೂಲಕ ಸವÀಣೂರ – ಶಿಗ್ಗಾವಿ ಕ್ಷೇತ್ರದ ಅಧಿಕಾರಿಗಳ ಸಭೆ ನಡೆಸಿ ವಿಚಾರಿಸುತ್ತಿದ್ದಾರೆ.
ಅಷ್ಟೇ ಅಲ್ಲದೇ ಬಸವರಾಜ ಬೊಮ್ಮಾಯಿಯವರೇ ಸ್ವತಃ ಮುತುವರ್ಜಿ ವಹಿಸಿ ತಮ್ಮ ಕ್ಷೇತ್ರಗಳಿಗೆ 50 ಜಂಬು ಆಕ್ಸಿಜನ್ ಸಿಲಿಂಡರ್‍ಗಳನ್ನು ವಿತರಿಸಲು ವ್ಯವಸ್ಥೆ ಮಾಡಿದ್ದಾರೆ. ಆದರೆ, ಈ ನಿಟ್ಟಿನಲ್ಲಿ ರಾಣೇಬೆನ್ನೂರು ವಿಧಾನಸಭಾ ಕ್ಷೇತ್ರದ ಶಾಸಕ ಅರುಣಕುಮಾರ ಪೂಜಾರ ಯಾವ ಕ್ರಮ ಕೈಗೊಂಡಿದ್ದಾರೆ? ಕೋವಿಡ್ ಸೋಂಕಿಗೆ ಒಳಗಾದವರ ಕುಟುಂಬದ ಪರಿಸ್ಥಿತಿ ಹೇಗಿದೆಯೆಂದು ಅವಲೋಕನ ಮಾಡಿದ್ದಾರೆಯೇ? ಅದರಲ್ಲೂ ವಿಶೇಷವಾಗಿ ಬಡ ಕುಟುಂಬದಲ್ಲಿನ ಸದಸ್ಯರಿಗೆ ಈ ಸೋಂಕು ಬಂದರೆ ಅವರ ಪರಿಸ್ಥಿತಿ ಏನಾಗಿದೆಯೆಂದು ವಿಚಾರಿಸಿದ್ದಾರೆಯೇ? ತಮ್ಮ ಕ್ಷೇತ್ರದ ಜನತೆ ಬಗ್ಗೆ ಅರುಣಕುಮಾರಗೆ ಕಿಂಚಿತ್ತಾದರೂ ಕಾಳಜಿ ಇದ್ದರೆ, ಕಟ್ಟುನಿಟಿನ ಕ್ರಮ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ತಾಕೀತು ಮಾಡಲಿ.
ಮಾರ್ಕೆಟ್‍ನಲ್ಲಿ ಶಾಸಕರು ಒಮ್ಮೆ ಸಂಚರಿಸಿದರೆ ಗೊತ್ತಾಗುತ್ತದೆ. ಸಾರ್ವಜನಿಕರು ಎಷ್ಟರಮಟ್ಟಿಗೆ ಸಾಮಾಜಿಕ ದೂರ ಕಾಯ್ದುಕೊಂಡಿದ್ದಾರೆ ಎಂಬುದು ಮತ್ತು ಎಷ್ಟು ಜನರು ಮಾಸ್ಕ್ ಧರಿಸಿದ್ದಾರೆಂಬುದು. ಅಲ್ಲೊಬ್ಬ; ಇಲ್ಲೊಬ್ಬ ಪೊಲೀಸ್ ಪೇದೆ ಲಾಠಿ ಬೀಸುತ್ತಾನೆ ನಿಜ. ಆದರೆ, ಜನರು ಅವರಿಗೆ ಯಾವ ರೀತಿ ಕ್ಯಾರೆ ಎನ್ನುತ್ತಾರೆ ಎಂಬುದು. ಕೋವಿಡ್ ಬಗ್ಗೆ ಇನ್ನೂ ಹೆಚ್ಚೆಚ್ಚು ಜನಜಾಗೃತಿ ಮೂಡಿಸುವ ಗುರುತರ ಜವಾಬ್ದಾರಿ ಶಾಸಕರ ಮುಂದಿದೆ. ಹಳ್ಳಿಹಳ್ಳಿಗಳಲ್ಲಿಯೂ ಧ್ವನಿವರ್ಧಕದ ಮೂಲಕ ಜಾಗೃತಿ ಮೂಡಿಸುವ ಅವಶ್ಯಕತೆಯಿದೆ. ಅಲ್ಲದೆ, ಈ ವಿಚಾರವಾಗಿ ಪೊಲೀಸರು ಅನವಶ್ಯಕವಾಗಿ ಓಡಾಡುವವರನ್ನು ಹೆಡಮುರಿಗೆ ಕಟ್ಟಬೇಕಾಗಿದೆ ಮತ್ತು ಅವರು ಬಳಸುವ ವಾಹನಗಳನ್ನು ಮುಲಾಜಿಲ್ಲದೆ ಸೀಜ್ ಮಾಡಬೇಕು. ಕೆಲವು ಆಟೋ ಹಾಗೂ ದ್ವಿಚಕ್ರ ವಾಹನ ಸವಾರರು ಸಕಾರಣವಿಲ್ಲದೆ, ಮಾಸ್ಕ್ ಕೂಡ ಧರಿಸದೆ ಬೇಕಾಬಿಟ್ಟಿಯಾಗಿ ತಿರುಗುತ್ತಿದ್ದಾರೆ. ಅಂತವರ ವಾಹನ ಸೀಜ್ ಮಾಡುವ ಅವಶ್ಯಕತೆ ಇದೆ. ಈ ಪರಿಪಾಠ ಮುಂದುವರಿದರೆ ಯಾವ ಕುನ್ನಿಯೂ ಮನೆಯಿಂದ ಹೊರ ಬರಲಾರದು. ಈ ಕುರಿತು ಶಾಸಕ ಪೂಜಾರ ಕೂಡ, ಕಾಯಾ, ವಾಚಾ, ಮನಸಾ ಕಾರ್ಯ ನಿರ್ವಹಿಸಬೇಕಿದೆ.

___________________________________________________________________________________________________________________________

ಕಸಾಪ ಮತದಾರರ ಪರಿಷ್ಕರಣೆಗೆ ಮೊದಲ ಕಂತಿನ ಮೃತ ಹತ್ತು ಸದಸ್ಯರ ಹಾವೇರಿ ಜಿಲ್ಲೆಯ ಮಾಹಿತಿ ರವಾನೆ http://pandavanews.com/kasapa-election-voters/

ನ್ಯಜ ಸುದ್ದಿಗಾಗಿ ಸಂಪರ್ಕಿಸಿ 9742789207 ಮತ್ತು ನಮ್ಮ web site pandavanews.com ಗೆ ಲಾಗಿನ್ ಮಾಡಿ

  •  
  •  
  •  
  •  
  •  
  •  

Leave a Reply

Your email address will not be published. Required fields are marked *

Copyright © All rights reserved. | Developed by EXPOLOG TECHNOLOGIES
error: Content is protected !!