Sat. Jan 22nd, 2022

ಪಾಂಡವ ನ್ಯೂಸ್

ಸಮಾಜದ ಧ್ವನಿ

ಮಾಸೂರು ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ವಾಲ್ಮೀಕಿ ಜಯಂತಿ ರಾಮಾಯಣ ಮನುಕುಲಕ್ಕೆ ದಾರಿದೀಪ: ಹ ಮು ತಳವಾರ

1 min read

ಪಾಂಡವ,ರಟ್ಟಿಹಳ್ಳಿ: ಮನುಕುಲದ ಸಮಸ್ಯಗಳಿಗೆ ಒಂದಲೊಂದು ರೀತಿಯಲ್ಲಿ ರಾಮಾಯಣದ ಮೂಲಕ ಮಹರ್ಷಿ ವಾಲ್ಮೀಕಿ ಪರಿಹಾರ ತೋರಿದ್ದಾರೆ. ರಾಮಾಯಣವು ನಿತ್ಯ ನಿರಂತರವಾಗಿ ಮನುಕುಲಕ್ಕೆ ದಾರಿದೀಪ ಎಂದು ರಾಷ್ಟ್ರಪ್ರಶಸ್ತಿ ವಿಜೇತ ಶಿಕ್ಷಕ ಸಂಸ್ಥೆಯ ಆಡಳಿತಾಧಿಕಾರಿ ಹ ಮು ತಳವಾರ ಹೇಳಿದರು.


ರಟ್ಟೀಹಳ್ಳಿ ತಾಲೂಕಿನ ಮಾಸೂರು ಗ್ರಾಮದ ಶ್ರೀ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢಶಾಲಾ ಹಾಗೂ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಮಹರ್ಷಿ ವಾಲ್ಮೀಕಿ ರಚಿಸಿದ ರಾಮಾಯಣದಿಂದ ನಾವೆಲ್ಲರೂ ಅವರ ಆದರ್ಶಗಳನ್ನು ಪಾಲನೆ ಮಾಡಬೇಕು , ಜಾತಿರಹಿತ ವರ್ಗರಹಿತ ಶೋಷಣೆರಹಿತ ಸಮಪಾಲು-ಸಹಬಾಳ್ವೆ , ಸಮಾನ ಅವಕಾಶದ ಸಮಾಜವೇ ರಾಮರಾಜ್ಯ ಎಂಬುದನ್ನು ಮಹರ್ಷಿ ವಾಲ್ಮೀಕಿ ರಾಮಾಯಣದ ಮೂಲಕ ಮನುಕುಲಕ್ಕೆ ತೋರಿದ್ದಾರೆ ಎಂದರು.


ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಚಾರ್ಯ ಚಂದ್ರಶೇಖರ ಪಿ, ಶಿಕ್ಷಕ ಮಂಜುನಾಥ ವಾಯ್, ರಮೇಶ ಹಿತ್ತಲಮನಿ ಹಾಗೂ ಎಲ್ಲಾ ಸಿಬ್ಬಂದಿ ವರ್ಗದವರು ಹಾಜರಿದ್ದರು

  •  
  •  
  •  
  •  
  •  
  •  

Leave a Reply

Your email address will not be published. Required fields are marked *

Copyright © All rights reserved. | Developed by EXPOLOG TECHNOLOGIES
error: Content is protected !!