Sat. Jan 22nd, 2022

ಪಾಂಡವ ನ್ಯೂಸ್

ಸಮಾಜದ ಧ್ವನಿ

ಸಾರ್ವಜನಿಕರ ಅನುಕೂಲಕ್ಕಾಗಿ ತಾಲೂಕಿನ ಹಲವು ಮಾರ್ಗಗಳಲ್ಲಿ ಕೆಎಸ್‍ಆರ್‍ಟಿಸಿ ಬಸ್ ಬಿಡುವಂತೆ ಶ್ರೀನಿವಾಸ್ ಮಾನೆ ಸೂಚನೆ

1 min read

ಹಾನಗಲ್ಲ : ಶಾಲೆ-ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಹಾಗೂ ನಾನಾ ಕೆಲಸ-ಕಾರ್ಯಗಳಿಗೆ ಬೇರೆ ಬೇರೆ ಸ್ಥಳಗಳಿಗೆ ಸಂಚರಿಸುವ ಸಾರ್ವಜನಿಕರ ಅನುಕೂಲಕ್ಕಾಗಿ ತಾಲೂಕಿನಲ್ಲಿ ಹಲವು ಮಾರ್ಗಗಳಲ್ಲಿ ಬಸ್ ಓಡಿಸುವಂತೆ ಶಾಸಕ ಶ್ರೀನಿವಾಸ್ ಮಾನೆ ಅವರು ಕೆಎಸ್‍ಆರ್‍ಟಿಸಿ ಹಾವೇರಿಯ ವಿಭಾಗೀಯ ನಿಯಂತ್ರಣಾಧಿಕಾರಿ ಹಾಗೂ ಹಾನಗಲ್ಲನ ಘಟಕ ವ್ಯವಸ್ಥಾಪಕರಿಗೆ ಸೂಚಿಸಿದ್ದಾರೆ.
ಈ ಕುರಿತು ಶನಿವಾರ ಮಾಧ್ಯಮ ಹೇಳಿಕೆ ನೀಡಿರುವ ಅವರು ತಾಲೂಕಿನ ಹಲವು ಗ್ರಾಮಗಳಿಗೆ ಬಸ್ ಹೋಗುತ್ತಿಲ್ಲ. ಹೀಗಾಗಿ ವಿದ್ಯಾರ್ಥಿಗಳು ಸಮಯಕ್ಕೆ ಸರಿಯಾಗಿ ಶಾಲೆ-ಕಾಲೇಜುಗಳಿಗೆ ತೆರಳಲಾಗದೇ ತೊಂದರೆ ಅನುಭವಿಸುವಂತಾಗಿದೆ. ಇದಲ್ಲದೇ ಕೆಲ ಮಾರ್ಗಗಳಲ್ಲಿ ಬಸ್ ಓಡಾಡದ ಹಿನ್ನೆಲೆಯಲ್ಲಿ ಸಾರ್ವಜನಿಕರೂ ಕೂಡ ಪರದಾಡುವಂತಾಗಿತ್ತು. ಇದೆಲ್ಲವನ್ನೂ ಗಮನಿಸಿ ಎಲ್ಲೆಲ್ಲಿ ಸಮಸ್ಯೆ ಆಗುತ್ತಿದೆಯೋ, ಅಂಥ ಮಾರ್ಗಗಳನ್ನು ಗುರುತಿಸಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಬಸ್ ಓಡಿಸಲು ಸೂಚನೆ ನೀಡಲಾಗಿದೆ ಎಂದು ಶ್ರೀನಿವಾಸ್ ಮಾನೆ ತಿಳಿಸಿದ್ದಾರೆ.
ಹಾವೇರಿಯಿಂದ ತಿಳವಳ್ಳಿ ಮತ್ತು ತಿಳವಳ್ಳಿಯಿಂದ ಹಾವೇರಿ ವಾಯಾ ಬ್ಯಾಗವಾದಿ, ಹಾನಗಲ್-ಕೂಸನೂರು-ಚಿಕ್ಕಬಾಸೂರು, ಹಾವೇರಿ-ಉಪ್ಪುಣಸಿ-ಕೂಸನೂರು-ಹಾವೇರಿ, ಹುಬ್ಬಳ್ಳಿ-ಹಾನಗಲ್-ಅಕ್ಕಿಆಲೂರು-ಶಿವಮೊಗ್ಗ ಮಾರ್ಗಗಳಲ್ಲಿ ಬಸ್ ಓಡಾಡಲಿದ್ದು, ಇದಲ್ಲದೇ ಬೆಳಗ್ಗೆ 9 ಗಂಟೆಗೆ ಬಮ್ಮನಹಳ್ಳಿ-ಎಲಿವಾಳ-ಮಹರಾಜಪೇಟೆ-ಹಾನಗಲ್, ಬೆಳಗ್ಗೆ 9 ಗಂಟೆಗೆ ಇನಾಂಯಲ್ಲಾಪುರ-ಯತ್ತಿನಹಳ್ಳಿ-ಕಲ್ಲಾಪುರ-ಅಕ್ಕಿಆಲೂರು, ಮಧ್ಯಾಹ್ನ 3 ಗಂಟೆಗೆ ಕಲ್ಲಾಪುರ-ಯತ್ತಿನಹಳ್ಳಿ-ಇನಾಂಯಲ್ಲಾಪುರ-ಕೊಂಡೋಜಿ-ಶಾಡಗುಪ್ಪಿ-ತಿಳವಳ್ಳಿ, ಬೆಳಗ್ಗೆ 9.30 ಗಂಟೆಗೆ ಹಾನಗಲ್-ಶಿರಗೋಡ, ಬೆಳಗ್ಗೆ 9 ಗಂಟೆಗೆ ತಿಳವಳ್ಳಿ-ಹೊಂಕಣ-ಹಾನಗಲ್, ಬೆಳಗ್ಗೆ 7.30 ಗಂಟೆಗೆ ಅರಳೇಶ್ವರ-ಹಾನಗಲ್, ಬೆಳಗ್ಗೆ 8 ಗಂಟೆಗೆ ಯಳ್ಳೂರು ವಾಯಾ ಬಮ್ಮನಹಳ್ಳಿ-ಹಾನಗಲ್, ಬೆಳಗ್ಗೆ 8.30 ಗಂಟೆಗೆ ಕೂಡಲ-ನರೇಗಲ್-ಹಾವೇರಿ, ಬೆಳಗ್ಗೆ 9 ಗಂಟೆಗೆ ಹಾವೇರಿ ವಾಯಾ ಬ್ಯಾಗವಾದಿ-ತಿಳವಳ್ಳಿ, ಬೆಳಗ್ಗೆ 9 ಗಂಟೆಗೆ ದಶರಥಕೊಪ್ಪ-ಹಾನಗಲ್, ಬೆಳಗ್ಗೆ 8.30 ಗಂಟೆಗೆ ಬಿಂಗಾಪುರ-ಹಾನಗಲ್, ಬೆಳಗ್ಗೆ 9 ಗಂಟೆಗೆ ಗಾಜೀಪುರ-ಕೊಪ್ಪರಸಿಕೊಪ್ಪ-ಹಾನಗಲ್, ಸಂಜೆ 5 ಗಂಟೆಗೆ ಹಾನಗಲ್-ಗಾಜೀಪುರ-ಕೊಪ್ಪರಸಿಕೊಪ್ಪ ಮಾರ್ಗಗಳಲ್ಲಿ ಬಸ್ ಓಡಾಡಲಿವೆ ಎಂದು ಶ್ರೀನಿವಾಸ್ ಮಾನೆ ತಿಳಿಸಿದ್ದಾರೆ.

  •  
  •  
  •  
  •  
  •  
  •  

Leave a Reply

Your email address will not be published. Required fields are marked *

Copyright © All rights reserved. | Developed by EXPOLOG TECHNOLOGIES
error: Content is protected !!