Tue. Nov 23rd, 2021

ಪಾಂಡವ ನ್ಯೂಸ್

ಸಮಾಜದ ಧ್ವನಿ

ಮೈಲಾರ ಲಿಂಗೇಶ್ವರನ ಕಾರ್ಣಿಕದಂತೆ ಮೈತ್ರಿ ಸರ್ಕಾರ ಪತನವಾಗಿದ್ದು, ಮೋದಿ ಸರ್ಕಾರವೂ ಅಲುಗಾಡಲಿದೆ: ಭವಿಷ್ಯ ನುಡಿದ ಧರ್ಮದರ್ಶಿ ವೆಂಕಪ್ಪಯ್ಯ ಒಡೆಯರ್.

1 min read

ಹಾವೇರಿ: ಮೈಲಾರ ಲಿಂಗೇಶ್ವರನ ದೈವವಾಣಿಯಂತೆ ಕಾಂಗ್ರೆಸ್​-ಜೆಡಿಎಸ್​ ನೇತೃತ್ವದ ಮೈತ್ರಿ ಸರ್ಕಾರ ಪತನವಾಗಿದ್ದು, ದೈವವಾಣಿಯಂತೆ ಕೇಂದ್ರ ಸರ್ಕಾರ ಅಲುಗಾಡುವ ಸಂಭವವಿದೆ ಎಂದು ಮೈಲಾರ ದೇವಸ್ಥಾನದ ಧರ್ಮದರ್ಶಿ ವೆಂಕಪ್ಪಯ್ಯ ಒಡೆಯರ್​​ ತಿಳಿಸಿದ್ದಾರೆ.

ಈಗಿನ ಬಿಜೆಪಿ ಸರ್ಕಾರಕ್ಕೆ ಯಾವುದೇ ತೊಂದರೆಯಿಲ್ಲ. ಬಿ.ಎಸ್​.ಯಡಿಯೂರಪ್ಪ ಸರ್ಕಾರ ಸುಭದ್ರವಾಗಿರುತ್ತದೆ. ಮುಂದಿನ ದೈವವಾಣಿ ಕಾರ್ಣಿಕ ಬರುವವರೆಗೂ ಯಾವುದೇ ತೊಂದರೆ ಇಲ್ಲ. ದೈವವಾಣಿಯಂತೆ ಕೇಂದ್ರ ಸರ್ಕಾರವೂ ಅಲುಗಾಡುವ ಸಂಭವವಿದೆ. ಮೋದಿ ಎಷ್ಟೇ ಗಟ್ಟಿಯಾಗಿದ್ದರೂ ಅಲುಗಾಡುವ ಸಮಯ ಬರಲಿದೆ ಎಂದು ತಿಳಿಸಿದ್ದಾರೆ.

ಈ ಹಿಂದೆ ಕಾರ್ಣಿಕದ ವಿಶ್ಲೇಷಣೆ ಮಾಡಿದ್ದ ಅವರು 2018ರಲ್ಲಿ ಮೈಲಾರ ಲಿಂಗೇಶ್ವರ ನುಡಿದಿದ್ದ ‘ಆಕಾಶ ಗಿಡಕ್ಕೆ ಗಿಳಿ ಕಿತ್ತಲೇ ಪರಾಕ್​’ ಎಂಬ ದೈವವಾಣಿಯಂತೆ ದೊಡ್ಡ ಪಕ್ಷದಿಂದ ಸಣ್ಣ ಪಕ್ಷ ಆಡಳಿತವನ್ನು ಕಿತ್ತುಕೊಳ್ಳುತ್ತದೆ. ಸಮ್ಮಿಶ್ರ ಸರ್ಕಾರ ಬರುತ್ತದೆ ಎಂದು ಭವಿಷ್ಯ ನುಡಿಯಲಾಗಿತ್ತು. ಅದರಂತೆ ಕಾಂಗ್ರೆಸ್​-ಜೆಡಿಎಸ್​ ಸಮ್ಮಿಶ್ರ ಸರ್ಕಾರ ಬಂತು. ಈ ವರ್ಷ ನುಡಿದ್ದಿದ್ದ ‘ಕಬ್ಬಿಣದ ಸರಪಳಿ ಹರಿಯುತ್ತಲೇ ಪರಾಕ್​’ ಎಂಬ ಕಾರ್ಣಿಕ ನುಡಿದಿತ್ತು. ಇದರರ್ಥ ಕಬ್ಬಿಣದ ಸರಪಳಿಯಂತೆ ಇದ್ದ ಸಮ್ಮಿಶ್ರ ಸರ್ಕಾರ ಹರಿದುಕೊಂಡು ಅಂದರೆ ಕಿತ್ತಾಡಿಕೊಂಡು ಮೊಟಕುಗೊಳಿಸಲಿದೆ ಎಂದು ವಿಶ್ಲೇಷಿಸಲಾಗಿತ್ತು. ಅದರಂತೆ ಇದೀಗ ಸಮ್ಮಿಶ್ರ ಸರ್ಕಾರ ಪತನಗೊಂಡಿದೆ.

  •  
  •  
  •  
  •  
  •  
  •  

Leave a Reply

Your email address will not be published. Required fields are marked *

Copyright © All rights reserved. | Developed by EXPOLOG TECHNOLOGIES
error: Content is protected !!