Sun. Jun 26th, 2022

ಪಾಂಡವ ನ್ಯೂಸ್

ಸಮಾಜದ ಧ್ವನಿ

ಕುಲವಧು ಸಿರಿಯಲ್ ನಟಿಯ ಪ್ರೆಗ್ನೆನ್ಸಿ ಹಾಟ್ ಫೋಟೋಶೂಟ್

ಬೆಂಗಳೂರು: ಕಿರುತೆರೆ ನಟಿ ದಿಶಾ ಮದನ್ ಗರ್ಭಿಣಿಯಾಗಿದ್ದು, ಹಾಟ್ ಫೋಟೋಶೂಟ್ ಮಾಡಿಸಿದ್ದಾರೆ. ಈ ಫೋಟೋಗಳು ಅವರು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಕುಲವಧು’ ಧಾರಾವಾಹಿಯಲ್ಲಿ ದಿಶಾ ಮದನ್, ‘ವಚನ’ ಪಾತ್ರವನ್ನು ಮಾಡುತ್ತಿದ್ದರು. ನಂತರ ಅವರು ಡ್ಯಾನ್ಸ್ ರಿಯಾಲಿಟಿ ಶೋನಲ್ಲೂ ಭಾಗವಹಿಸಿದ್ದರು. ಬಳಿಕ ಮದುವೆಯಾದ ನಂತರ ನಟನೆಯಿಂದ ದೂರ ಉಳಿದಿದ್ದರು.

ದಿಶಾ ಮದನ್ ತಾವು ತಾಯಿ ಆಗುತ್ತಿರುವ ವಿಷಯವನ್ನು ಇನ್ಸ್ಟಾಗ್ರಾಂ ಮೂಲಕ ತಮ್ಮ ಅಭಿಮಾನಿಗಳಲ್ಲಿ ಹಂಚಿಕೊಂಡಿದ್ದರು. ಈಗ ಅವರು ತಮ್ಮ ಗರ್ಭಿಣಿ ಅವಧಿಯನ್ನು ಸಖತ್ ಎಂಜಾಯ್ ಮಾಡುತ್ತಿದ್ದು, ಇತ್ತೀಚೆಗೆ ಅವರು ಹಾಟ್ ಫೋಟೋಶೂಟ್ ಕೂಡ ಮಾಡಿಸಿದ್ದಾರೆ. ದಿಶಾ ಅವರ ಫೋಟೋವನ್ನು ‘ಮಾಮಿ ಶಾಟ್ಸ್’ ಅಮೃತ ಅವರು ಕ್ಲಿಕ್ಕಿಸಿದ್ದಾರೆ.

ಕೆಲ ತಿಂಗಳ ಹಿಂದೆ ನಟಿ ದಿಶಾ ಮದನ್ ಸಾಂಪ್ರದಾಯಿಕವಾಗಿ ಸೀಮಂತ ಮಾಡಿಕೊಂಡಿದ್ದರು. ಅಲ್ಲದೆ ಆ ಫೋಟೋಗಳನ್ನು ಕೂಡ ಅವರು ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಅಗಸ್ಟ್ ತಿಂಗಳಿನಲ್ಲಿ ದಿಶಾ ಮಗುವಿಗೆ ಜನ್ಮ ನೀಡಲಿದ್ದಾರೆ.

  •  
  •  
  •  
  •  
  •  
  •  
Copyright © All rights reserved. | Developed by EXPOLOG TECHNOLOGIES
error: Content is protected !!