Sat. Nov 27th, 2021

ಪಾಂಡವ ನ್ಯೂಸ್

ಸಮಾಜದ ಧ್ವನಿ

20 ನೌಕರರು ಕರ್ತವ್ಯಕ್ಕೆ ಹಾಜರು: 10 ಬಸ್‍ಗಳು ಸಂಚಾರ

ರಾಣೇಬೆನ್ನೂರು: 6ನೇ ವೇತನ ಆಯೋಗ ಜಾರಿಗಾಗಿ ಒತ್ತಾಯಿಸಿ ಸಾರಿಗೆ ನೌಕರರು ಕಳೆದ 10ದಿನಗಳಿಂದ ಮುಷ್ಕರ ನಡೆಸುತ್ತಿರುವ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನಿರ್ದೇಶಕ ಸಂತೋಷಕುಮಾರ ಪಾಟೀಲ ಶುಕ್ರವಾರ ನಗರದ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ಸಾರಿಗೆ ನೌಕರರೊಂದಿಗೆ ಮಾತುಕತೆ ನಡೆಸಿದರು.
ಸಾರಿಗೆ ನೌಕರರು ಸಾರ್ವಜನಿಕರಿಗೆ ಸೇವೆ ನೀಡುತ್ತಿರುವುದು ಹೆಮ್ಮೆಯ ಸಂಗತಿ.ನಿಮ್ಮ ಹೋರಾಟ ನ್ಯಾಯಬದ್ಧವಾಗಿದೆ. ಹೋರಾಟದಜತೆಗೆ ಸಾರ್ವಜನಿಕರಿಗೆ ಸೇವೆ ನೀಡುವುದರಿಂದ ನಿಮ್ಮ ಹೋರಾಟಕ್ಕೆ ಬೆಲೆ ಬರುತ್ತದೆ. ಈ ಮುಷ್ಕರದಿಂದಗರ್ಭೀಣಿಯರು, ಶಾಲಾ ಕಾಲೇಜ್ ಮಕ್ಕಳು ಸೇರಿದಂತೆಇತರರಿಗೆ ಸಮಸ್ಯೆಯಾಗುತ್ತಿದೆ.ಈಗಾಗಲೇ ಕೊರೋನಾ ಹೆಮ್ಮಾರಿಯಿಂದ ನಿಗಮ ನಷ್ಟದಲ್ಲಿದೆ.ಇಂತಹ ಸಮಯದಲ್ಲಿ ಮುಷ್ಕರ ನಡೆಸುವುದರಿಂದ ನಿಗಮ ಇನ್ನಷ್ಟು ನಷ್ಟ ಅನುಭವಿಸುತ್ತದೆ.ನಿಗಮಕ್ಕೆ ನಿಮ್ಮ ಸಹಕಾರಅಗತ್ಯವಾಗಿದೆ.ಆದ್ದರಿಂದ ಮುಷ್ಕರಕೈಬಿಟ್ಟು ಕೆಲಸಕ್ಕೆ ಬಂದು ನಿಮ್ಮ ಸೇವೆಯನ್ನು ನೀಡಬೇಕುಎಂದು ವಿನಂತಿಸಿದರು.
ಇದರಿಂದ ಸುಮಾರು 20 ನೌಕರರು ಶುಕ್ರವಾರ ಕೆಲಸಕ್ಕೆ ಹಾಜರಾಗಿದ್ದು, 10ರಿಂದ 15 ಬಸ್‍ಗಳು ರಸ್ತೆಗಿಳಿದು ಸಾರ್ವಜನಿಕರಿಗೆ ಸೇವೆ ನೀಡಿದರು.
ಈ ಸಮಯದಲ್ಲಿ ಸ್ಥಳೀಯ ಘಟಕದ ವ್ಯವಸ್ಥಾಪಕ ಶಿವಮೂರ್ತಿ, ನಗರಠಾಣೆಯ ಪಿಎಸ್‍ಐ ಸೇರಿದಂತೆಮತ್ತಿತರುಇತರರಿದ್ದರು.

  •  
  •  
  •  
  •  
  •  
  •  

Leave a Reply

Your email address will not be published. Required fields are marked *

Copyright © All rights reserved. | Developed by EXPOLOG TECHNOLOGIES
error: Content is protected !!