Sat. Jan 22nd, 2022

ಪಾಂಡವ ನ್ಯೂಸ್

ಸಮಾಜದ ಧ್ವನಿ

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕತ ಪಕ್ಕೀರೇಶ ಕೊಂಡಾಯಿಯವರ ಸನ್ಮಾನ ಸಮಾರಂಭ

ಶಿಗ್ಗಾವಿ : ಪಕ್ಕೀರೇಶ ಕೊಂಡಾಯಿ ಯವರು ಅಪ್ಪಟ ಗ್ರಾಮೀಣ ಪ್ರತಿಭೆಯಾಗಿದ್ದು, ಹಕವಾರು ವರ್ಷಗಳಿಂದ ರಂಗಭೂಮಿ ಕ್ಷೇತ್ರದಲ್ಲಿ ಅವಿರತ ಕಲಾ ಸೇವೆ ಮಾಡುತ್ತಾ ಬಂದಿರುವ ಪ್ರತಿಫಲವಾಗಿ ರಾಜ್ಯೋತ್ಸವ ಪ್ರಶಸ್ತಿ ಅರಸಿಕೊಂಡು ಬಂದಿದೆ ಎಂದು ಕರ್ನಾಟಕ ಜಾನಪದ ವಿ.ವಿ.ಸಹಾಯಕ ಪ್ರಾಧ್ಯಾಪಕಿ ಡಾ. ಇಜಯಲಕ್ಷ್ಮೀ ಗೇಟಿಯವರ ಹೇಳಿದರು.
ತಾಲೂಕಿನ ಹುಲಸೋಗಿಯಲ್ಲಿ ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ ತಾಲೂಕಾ ಕಲಾಬಳಗದ ಆಶ್ರಯದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಪಕ್ಕೀರೇಶ ಕೊಂಡಾಯಿ ಯವರ ಸನ್ಮಾನ ಸಮಾರಂಭ ಕಾರ್ಯಕ್ರಮವನ್ನುದ್ದೇಸಿಸಿ ಮಾತನಾಡಿದ ಅವರು, ಯಾರೇ ಆಗಲಿ ಪ್ರಶಸ್ತಿ, ಹಾರ, ತುರಾಯಿ, ಸನ್ಮಾನವನ್ನು ಅರಸಿಹೋಗದೇ ತಮ್ಮ, ತಮ್ಮ ಸೇವೆಯನ್ನು ಪ್ರಾಮಾಣಿಕ, ನಿಸ್ವಾರ್ಥ ಸೇವೆಯಿಂದ ಮಾಡಿದಾಗ ಮಾತ್ರ ಇಂತಹ ಪ್ರಶಸ್ತಿ, ಹಾರ, ತುರಾಯಿ, ಸನ್ಮಾನಗಳು ನಮ್ಮನ್ನು ಅರಸಿಬರಲಿವೆ. ಅದಕ್ಕೇ ಪ್ರಸ್ತುತ ಉದಾಹರಣೆ ಎಂದರೆ, ನಮ್ಮ ರಂಗಭೂಮಿ ಕಲಾವಿದ ಪಕ್ಕೀರೇಶ ಕೊಂಡಾಯಿ ಯವರಾಗಿದ್ದಾರೆ. ಅಂತಹ ಮಹಾನ್ ಕಲಾವಿದನಿಗೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಿರುವುದು ನಮಗೆ ಎಲ್ಲಿಲ್ಲದ ಸಂತಹ ತಂದಿದೆ ಎಂದು ಹೇಳಿದರು.
ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ಶಂಕರ ಅರ್ಕಸಾಲಿ, ಶರೀಫ್ ಮಾಕಪ್ಪನವರ, ಗ್ರಾ.ಪಂ.ಸದಸ್ಯ ನಾಗರಾಜ ಸಿಂಧೆ, ರಾಮಚಂದ್ರ ಬಿಲ್ಲೆ, ಗದಿಗಯ್ಯ ಹಿರೇಮಠ, ಶಂಕ್ರಪ್ಪ ಜಂಕಣ್ಣವರ, ಬಸವರಾಜ ಜವಳಗಟ್ಟಿ, ದೇವೆಂದ್ರಪ್ಪ ಸುಣಗಾರ, ಗಂಗಾಧರ ಮಡಿವಾಳರ, ಮನೋಹರ ದೊಡ್ಡಮನಿ, ರಾಜಪ್ಪ ಕೊಂಡಾಯಿ ಸೇರಿದಂತೆ ಇತರರು ಇದ್ದರು.
ಫೋಟೋ : 27 ಎಸ್.ಜಿ.ಎನ್. 1 : ತಾಲೂಕಿನ ಹುಲಸೋಗಿಯಲ್ಲಿ ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ ಹಾಗು ತಾಲೂಕಾ ಕಲಾಬಳಗದ ಆಶ್ರಯದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಪಕ್ಕೀರೇಶ ಕೊಂಡಾಯಿ ಯವರನ್ನು ಸನ್ಮಾನಿಸಲಾಯಿತು.

  •  
  •  
  •  
  •  
  •  
  •  

Leave a Reply

Your email address will not be published. Required fields are marked *

Copyright © All rights reserved. | Developed by EXPOLOG TECHNOLOGIES
error: Content is protected !!