Sat. Jan 22nd, 2022

ಪಾಂಡವ ನ್ಯೂಸ್

ಸಮಾಜದ ಧ್ವನಿ

ಕಾರ್ಮಿಕ ಬಂಧುಗಳನ್ನು ಮುಂದುವರೆಸುವಂತೆ ಕಾರ್ಮಿಕ ಸಚಿವರಿಗೆ ಮನವಿ ಸಲ್ಲಿಕೆ

ಬ್ಯಾಡಗಿ: ಕಾರ್ಮಿಕ ಇಲಾಖೆಯ ವಿವಿಧ ಯೋಜನೆಗಳನ್ನು ತ್ವರಿತ ಗತಿಯಲ್ಲಿ ತಲುಪಿಸುವ ನಿಟ್ಟಿನಲ್ಲಿ ಆಯ್ಕೆಗೊಳಿಸಿದ್ದ ಕಾರ್ಮಿಕ ಬಂಧುಗಳ ಸೇವಾವಧಿಯು ಮುಕ್ತಾಯಗೊಂಡಿದ್ದು, ಅವರನ್ನು ಮತ್ತೆ ಸೇವೆಯಲ್ಲಿ ಮುಂದುವರಿಸುವ ಕುರಿತು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಅವರಿಗೆ ಕಾರ್ಮಿಕ ಬಂಧುಗಳ ನಿಯೋಗ ಭೇಟಿ ಮಾಡಿ ಮನವಿ ಸಲ್ಲಿಸಿತು.
ಯಲ್ಲಾಪುರದ ಸಚಿವರ ನಿವಾಸದಲ್ಲಿ ಶಿವರಾಮ ಹೆಬ್ಬಾರ್ ಅವರನ್ನು ಭೇಟಿ ಮಾಡಿದ ನಿಯೋಗದ ಸದಸ್ಯರು ಇಲಾಖೆಯಲ್ಲಿ ಉತ್ತಮವಾಗಿ ಸೇವೆ ಸಲ್ಲಿಸುತ್ತಿದ್ದ ಕಾರ್ಮಿಕ ಬಂಧುಗಳನ್ನು ಅವರ ಸೇವಾವಧಿ ಮುಗಿದ ನಂತರ ಮತ್ತೇ ಮುಂದುವರೆಸಲು ಯಾವುದೇ ಕ್ರಮಕೈಗೊಂಡಿಲ್ಲ. ಕಾರ್ಮಿಕ ಬಂಧುಗಳು ಇಲಾಖೆಯ ಯೋಜನೆಗಳನ್ನು ಸಮರ್ಪಕವಾಗಿ ಅನುμÁ್ಠನಗೊಳಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಸರ್ಕಾರದ ಅವಕೃಪೆಯಿಂದ ಮತ್ತೇ ನಿರದ್ಯೋಗಿಗಳಾಗಿರುವ ಕಾರ್ಮಿಕ ಬಂಧುಗಳನ್ನು ಸೇವೆಯಲ್ಲಿ ಮುಂದುವರೆಸಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಸಚಿವ ಶಿವರಾಮ ಹೆಬ್ಬಾರ್ ಅವರು ಕನಿಷ್ಠ ವೇತನ ಅಡಿಯಲ್ಲಿ ರಾಜ್ಯದಾದ್ಯಂತ ಸಕ್ರಿಯ ಕಾರ್ಮಿಕ ಬಂಧುಗಳ ಆಯ್ಕೆಗೆ ಆದ್ಯತೆಯನ್ನು ನೀಡಿ ಇಲಾಖೆಯ ಸೇವೆಗೆ ಅವಕಾಶ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಕಾರ್ಮಿಕ ಬಂಧುಗಳಾದ ಮಂಜುನಾಥ ಪೂಜಾರ, ಬಸವರಾಜ ಬೋವಿ, ಹುಸೇನ ನದಾಫ್, ಆನಂದ ಇಟಗಿ, ಹನುಮಂತ ಬಂಡಿವಡ್ಡರ, ಗೋವಿಂದ ಕಾಳಮಂಟೂರ, ಕಿರಣ ನಾಯಕ್, ಮಲ್ಲಪ್ಪ ನಾಗರವಲ್ಲಿ ಸೇರಿದಂತೆ ಇನ್ನಿತರರು ಇದ್ದರು.

  •  
  •  
  •  
  •  
  •  
  •  

Leave a Reply

Your email address will not be published. Required fields are marked *

Copyright © All rights reserved. | Developed by EXPOLOG TECHNOLOGIES
error: Content is protected !!