Sat. Jan 22nd, 2022

ಪಾಂಡವ ನ್ಯೂಸ್

ಸಮಾಜದ ಧ್ವನಿ

“ಸುಣಕಲ್ಲಬಿದರಿಯಲ್ಲಿ ಕನಕದಾಸರ ಜಯಂತಿ”

ರಾಣೇಬೆನ್ನೂರು: ಭಕ್ತ ಶ್ರೇಷ್ಠ ಶ್ರೀ ಕನಕದಾಸರು 15ನೇ ಶತಮಾನದಲ್ಲಿ ಸಮಾಜವನ್ನು ಕೀರ್ತನೆಗಳಿಂದ ತಿದ್ದುವ ಮೂಲಕ ಅಸಮಾನತೆ ಹೋಗಲಾಡಿಸಲು ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದು ಪ್ರಾಂಶುಪಾಲರಾದ ಶ್ರೀ ಪಿ.ಮುನಿಯಪ್ಪ ಅಭಿಪ್ರಾಯಪಟ್ಟರು.
ಸುಣಕಲ್ಲಬಿದರಿ ಗ್ರಾಮದ ಶ್ರೀ ಸದ್ಗುರು ಶಿವಾನಂದ ಸಂಯುಕ್ತ ಪ.ಪೂ ಕಾಲೇಜಿನ ರಾಷ್ಟ್ರೀಯ ಸೇವಾಯೋಜನಾ ಘಟಕದವತಿಯಿಂದ 534ನೇ ಶ್ರೀ ಕನಕದಾಸರ ಜಯಂತ್ಯುತ್ಸವದಲ್ಲಿ ಕನಕದಾಸರ ಭಾವಚಿತ್ರಕ್ಕೆ ಪುಷ್ರ್ಪಾಚನೆ ಮಾಡಿ ಮಾತನಾಡಿದ ಅವರು ಒಬ್ಬ ಶ್ರೇಷ್ಠ ಸಾಹಿತಿ, ಕವಿಗಳು, ಸಂಗೀತಗಾರರು ಆಗಿ ದೇಶದಲ್ಲಿ ಅಸಮಾನತೆ ವಿರುದ್ಧ ಆಂದೋಲನ ನಡೆಸಿದರು. ತಮ್ಮ ಕೀರ್ತನೆಗಳ ಮೂಲಕ ಹೋರಾಡಿ ಶೋಷಿತ ಸಮಾಜವನ್ನು ಜಾಗೃತಿ ಗೊಳಿಸುವ ಕೆಲಸ ಮಾಡಿದರು. ಅಲ್ಲದೇ ಬಸವಣ್ಣನಂತೆಯೇ ಕನಕದಾಸರೂ ಸಹ ಜಾತಿ ಪದ್ಧತಿ ವಿರುದ್ಧ ತಮ್ಮ ವೈಚಾರಿಕ ಅಭಿಪ್ರಾಯವನ್ನು ಸ್ಪಷ್ಟವಾಗಿ ಹೇಳುವ ಮೂಲಕ ನಾಡಿನ ಅಭಿವೃದ್ಧಿಯನ್ನು ಮಾಡಿದ್ದಾರೆಂದು ಹೇಳಿದರು.
ರಾಜ್ಯ ಪ್ರಶಸ್ತಿ ಪುರಸ್ಕøತ ಉಪನ್ಯಾಸಕ ಎಚ್.ಶಿವಾನಂದ ಮಾತನಾಡಿ ಕನಕದಾಸರ ಬದುಕು ಮತ್ತು ಸಾಧನೆಗಳ ಬಗ್ಗೆ ಎಲ್ಲರೂ ತಿಳಿದುಕೊಳ್ಳಬೇಕಾಗಿದೆ, ಸರ್ವ ಸಮೂದಾಯದ ಭಕ್ತಶ್ರೇಷ್ಠ ಹಾಗೂ ಸಂತ ಕನಕದಾಸರ ಸಮಾಜಿಕ ಕಳಕಳಿ ಇಂದಿಗೂ ಪ್ರಸ್ತುತವಾಗಿದೆ. ಇವರು ದೇಶ ಕಂಡ ಹರಿಭಕ್ತರಲ್ಲಿ ಒಬ್ಬರಾಗಿದ್ದು ಇವರು ತತ್ವಾದರ್ಶ ಹಾಗೂ ಸಂದೇಶಗಳನ್ನು ಪ್ರತಿಯೊಬ್ಬರು ಅನುಸರಿಸಿಕೊಳ್ಳಬೇಕೆಂದರು.
ಕಾರ್ಯಕ್ರಮದಲ್ಲಿ ಶಿಕ್ಷಕರಾದ ಬಿ.ಎ.ವಿಜಯಕುಮಾರ, ಎಸ್.ಎಸ್.ಬಡ್ನಿ, ಕೆ.ಜೆ.ಆಶಾ, ಉಮ್ಮೇಹಭೀಬ, ಸುಚಿತ್ರಾ ಜಿ.ಎಂ. ಹಾಗೂ ಜಿ.ಬಿ.ಪ್ರಸನ್ನಕುಮಾರ್. ಆರ್.ಪ್ರವೀಣಕುಮಾರ, ಜಗದೀಶ ಕೊರಗರ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.

  •  
  •  
  •  
  •  
  •  
  •  

Leave a Reply

Your email address will not be published. Required fields are marked *

Copyright © All rights reserved. | Developed by EXPOLOG TECHNOLOGIES
error: Content is protected !!