Sat. Jan 22nd, 2022

ಪಾಂಡವ ನ್ಯೂಸ್

ಸಮಾಜದ ಧ್ವನಿ

ದಾಸಶ್ರೇಷ್ಠ ಕನಕದಾಸರ 534ನೇ ಜಯಂತಿ ಅಂಗವಾಗಿ ರಕ್ತದಾನ ಶಿಬಿರ

ಬ್ಯಾಡಗಿ : ದಾಸಶ್ರೇಷ್ಠ ಕನಕದಾಸರನ್ನು ಜಾತಿಗೆ ಸೀಮಿತ ಮಾಡುವುದರಲ್ಲಿ ಅರ್ಥವಿಲ್ಲ. ಕನಕ ಎಂಬುದು ಅದೊಂದು ಆಗಾದ ಶಕ್ತಿ, ಅದಮ್ಯ ಚೇತನ. ಭಗವಂತನಿಗೆ ಹತ್ತಿರವಾಗಿದ್ದವರು. ಭಕ್ತಿಯ ಶಕ್ತಿಯನ್ನು ಮಾನವರಿಗೆ ತೋರಿಸಿಕೊಟ್ಟವರು. ಜಾತಿವ್ಯವಸ್ಥೆಯ ವಿರುದ್ಧ ಹೋರಾಡಿ ಸಮಾನತೆಯ ತತ್ವವನ್ನು ಸಾರಿದವರು. ಸಮಾಜದಲ್ಲಿ ಹಲವಾರು ದೋಷ ಲೋಪಗಳನ್ನು ನಿವಾರಿಸಿ ಮಾನವೀಯತೆಗೆ ಮಾಹಾಬೆಳಕನ್ನು ಹರಿಸಿದ ದಾರ್ಶನಿಕರಾಗಿದ್ದಾರೆಂದು ಶಾಸಕ ವೀರೂಪಾಕ್ಷಪ್ಪ ಬಳ್ಳಾರಿ ಹೇಳಿದರು.
ದಾಸಶ್ರೇಷ್ಠ ಕನಕದಾಸರ 534ನೇ ಜಯಂತಿಯ ಅಂಗವಾಗಿ ಪಟ್ಟಣದ ಶ್ರೀ ಬೀರಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಸಂಗೊಳ್ಳಿ ರಾಯಣ್ಣ ಯುವ ವೇದಿಕೆ ಹಾಗೂ ವಿಶ್ವಧಾರ ಬ್ಲಡ್ ಬ್ಯಾಂಕ್ ಇವರ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ರಕ್ತದಾನ ಶಿಬಿರಿದಲ್ಲಿ ಅವರು ಮಾತನಾಡಿದರು. ಜನಸಾಮಾನ್ಯನು ಕೂಡ ಭಗವಂತನನ್ನು ಕಾಣುವ ಅವಕಾಶ ಇರಬೇಕೆಂಬುದು ಕನಕದಾಸರ ಮುಖ್ಯವಾದ ಹಂಬಲವಿತ್ತು ಹಾಗೂ ಎಲ್ಲರನ್ನು ಪ್ರೀತಿಸುವ ಕನಕರ ಆದರ್ಶ ತತ್ವವನ್ನು ನಾವೆಲ್ಲರೂ ಮೈಗೂಡಿಸಿಕೊಳ್ಳಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಬಸವರಾಜ ಶಿವಣ್ಣನವರ, ಎಪಿಎಂಸಿ ಅಧ್ಯಕ್ಷ ವೀರಭದ್ರಪ್ಪ ಗೊಡಚಿ, ಜಿಪಂ ಮಾಜಿ ಅಧ್ಯಕ್ಷ ಶಂಕ್ರಣ್ಣ ಮಾತನವರ, ಪುರಸಭೆ ಅಧ್ಯಕ್ಷೆ ಸರೋಜಮ್ಮ ಉಳ್ಳಾಗಡ್ಡಿ, ಸಮಾಜದ ತಾಲೂಕಾಧ್ಯಕ್ಷ ಚಿಕ್ಕಣ್ಣ ಹಾದಿಮನಿ, ಪುರಸಭೆ ಸದಸ್ಯ ಬಸವಣ್ಣೆಪ್ಪ ಛತ್ರದ, ಮಾಸಣಗಿ ಗ್ರಾ.ಪಂ ಅಧ್ಯಕ್ಷ ಮಲ್ಲೇಶಣ್ಣ ಬಣಕಾರ, ಮುಖಂಡರಾದ ರಾಮಾಣ್ಣ ಉಕ್ಕುಂದ, ಬೀರಪ್ಪಜ್ಜ ಬಣಕಾರ, ಡಾ.ಎಸ್.ಎನ್.ನಿಡಗುಂದಿ, ಸುರೇಶ ಅಷಾದಿ ಸಮಾಜದ ಮುಖಂಡರು ಹಾಗೂ ತಾಲೂಕುಮಟ್ಟದ ಅಧಿಕಾರಿಗಳು ಇದ್ದರು.

  •  
  •  
  •  
  •  
  •  
  •  

Leave a Reply

Your email address will not be published. Required fields are marked *

Copyright © All rights reserved. | Developed by EXPOLOG TECHNOLOGIES
error: Content is protected !!