Sat. Oct 16th, 2021

ಪಾಂಡವ ನ್ಯೂಸ್

ಸಮಾಜದ ಧ್ವನಿ

ವಿದ್ಯಾರ್ಥಿಗಳ‌ ಭವಿಷ್ಯದ ಜೊತೆ ಚೆಲ್ಲಾಟವಾಡಿದ ಮುಖ್ಯಶಿಕ್ಷಕ, ಗುಮಾಸ್ತರ ಮೇಲೆ ಕಾನೂನು ಕ್ರಮಕ್ಕೆ ಎಸ್ ಎಫ್ ಐ ಒತ್ತಾಯ:

ಹಾವೇರಿ: ಚಿಕ್ಕೇರೂರಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಿಂದ ವಂಚಿತರಾದ ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆಯಲ್ಲಿ ಅವಕಾಶ ಮಾಡಿಕೊಡುಬೇಕು ಜೊತೆಗೆ ಮುಖ್ಯೋಪಾಧ್ಯಾಯ ಹಾಗೂ ಗುಮಾಸ್ತರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಎಸ್ಎಫ್ಐ ನೇತೃತ್ವದಲ್ಲಿ ಪ್ರತಿಭಟನೆ ಮಾಡಲಾಯಿತು.

ಸೋಮವಾರ ಜಿಲ್ಲಾಧಿಕಾರಿ ‌ಕಚೇರಿ ಮುಂಭಾಗದಲ್ಲಿ ಎಸ್ ಎಫ್ ಐ ನೇತೃತ್ವದಲ್ಲಿ ಪಾಲಕರು ಪ್ರತಿಭಟನೆ ಮಾಡಿದರು.‌

ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ಮಾತಾನಾಡಿ, ಶಿಕ್ಷಕರು ಹೇಳಿದ ಎಲ್ಲ ಹೋಂವರ್ಕ್ ನ್ನು ವಿದ್ಯಾರ್ಥಿಗಳು ಮಾಡಿದರು. ಜೊತೆಗೆ ಪರೀಕ್ಷೆ ಶುಲ್ಕಗಳನ್ನು ನೀಡಿದರು. ಆದರೆ, ಶಿಕ್ಷಕರು ಮಾಡಿದ ತಪ್ಪಿಗೆ ವಿದ್ಯಾರ್ಥಿಗಳ ಭವಿಷ್ಯದ ಗತಿಯೇನು?’
ವಿದ್ಯಾರ್ಥಿಗಳ ಪಾಲಕರು ಪರೀಕ್ಷೆ ಅರ್ಜಿ ತುಂಬಲು ಹಣ ನೀಡಿದ್ದಾರೆ. ಶಾಲೆಯಲ್ಲಿ ಅದನ್ನು ತುಂಬದೇ ಹಾಗೇ ಇಟ್ಟುಕೊಂಡಿದ್ದಾರೆ. ಈಗ ಪರೀಕ್ಷೆ ಬರೆಯಲು ಅವಕಾಶ ಸಿಗದೆ ವಿದ್ಯಾರ್ಥಿಗಳ ಆತಂಕ ಒಳಗಾಗಿದ್ದಾರೆ. ಶಿಕ್ಷಕರ ಯಡವಟ್ಟಿನಿಂದಾಗಿ ಮಕ್ಕಳು ಶಿಕ್ಷೆ ಅನುಭವಿಸುವಂತಾಗಿದ್ದು, ವಿದ್ಯಾರ್ಥಿಗಳ ಶಿಕ್ಷಣದ ಹಕ್ಕನ್ನು ಕೊಲೆ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನ್ಯಾಯವಾದಿ ನಾರಾಯಣ ಕಾಳೆ ಮಾತಾನಾಡಿ, ವಿದ್ಯಾರ್ಥಿಗಳಿಗೆ ನ್ಯಾಯ ಸಿಗುವರೆಗೂ ಹೋರಾಟ ನಿಲ್ಲದು, ಎಸ್ಎಫ್ಐ ವಿದ್ಯಾರ್ಥಿಗಳ ಪರವಾಗಿ ನ್ಯಾಯಯುತ ಹೋರಾಟ ಮಾಡುತ್ತಿದ್ದು, ಜಿಲ್ಲಾಧಿಕಾರಿಗಳು ಮಧ್ಯ ಪ್ರವೇಶ ಮಾಡಿ ನ್ಯಾಯ ಒದಗಿಸಬೇಕು. ವಿದ್ಯಾರ್ಥಿಗಳಿಗೆ ನ್ಯಾಯ ಸಿಗಲಿಲ್ಲ ಅಂದರೆ ಹಗಲು ರಾತ್ರಿ ಹೋರಾಟಕ್ಕೆ ಸಿದ್ದರಾಗತ್ತೇವೆ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಎಸ್ಎಫ್ಐ ಜಿಲ್ಲಾ ಸಹಕಾರ್ಯದರ್ಶಿ ಬಸವರಾಜ ಭೋವಿ ಮಾತಾನಾಡಿ, ಚಿಕ್ಕೇರೂರಿನ ಅನುದಾನಿತ ಮಹಾತ್ಮಗಾಂಧಿ ಪ್ರೌಢಶಾಲೆಯಲ್ಲಿ ಒಟ್ಟು 64 ವಿದ್ಯಾರ್ಥಿಗಳಲ್ಲಿ 34 ವಿದ್ಯಾರ್ಥಿಗಳು ಪರೀಕ್ಷೆ ಕೇಂದ್ರದಲ್ಲಿ ಪರೀಕ್ಷೆ ಬರೆಯುತ್ತಿದ್ದಾರೆ. ಆದರೆ, ಮುಖ್ಯೋಪಾಧ್ಯಾಯ ಹಾಗೂ ಗುಮಾಸ್ತರ ತಪ್ಪಿನಿಂದ ವಂಚಿತ ವಿದ್ಯಾರ್ಥಿಗಳು ಪೇಪರ್ ಪೆನ್ ಹಿಡಿದು ಜಿಲ್ಲಾಧಿಕಾರಿ ಕಛೇರಿ ಕುಳಿತಿದ್ದಾರೆ.

ಶಿಕ್ಷಣ ಸಚಿವರು ಮಧ್ಯ ಪ್ರವೇಶ ಮಾಡಿ ವಂಚಿತ ವಿದ್ಯಾರ್ಥಿಗಳಿಗೆ ವಿಶೇಷ ನಿಯಮದಡಿ ಅವಕಾಶ ಕಲ್ಪಿಸಬೇಕೆಂದು ಎಸ್ಎಫ್ಐ ನೇತೃತ್ವದಲ್ಲಿ ಪ್ರತಿಭಟನೆ ಮಾಡಿದೆ. ಜೊತೆಗೆ ಮನವಿ ಸಲ್ಲಿಸಿದ ನಂತರ ಮಾಧ್ಯಮದಲ್ಲಿ ಈ ಪ್ರಕರಣ ಕುರಿತು ಸುದ್ದಿಯಾದರು ಜಿಲ್ಲಾ ಶಿಕ್ಷಣಾಧಿಕಾರಿಗಳಾಗಲಿ ಅನ್ಯಾಯಕ್ಕೆ ಒಳಗಾದ ವಿದ್ಯಾರ್ಥಿಗಳನ್ನು, ಪಾಲಕರನಾಗಲಿ ವಿದ್ಯಾರ್ಥಿ ಮುಖಂಡರನಾಗಲಿ ಸಂಪರ್ಕ ಮಾಡಿಲ್ಲ. ವಿದ್ಯಾರ್ಥಿ ಸಮಸ್ಯೆಗಳ ಕುರಿತು ಅಧಿಕಾರಿಗಳು ಭರವಸೆ ಕುರಿತು ಚರ್ಚೆ ಮಾಡದೆ ನಿರ್ಲಕ್ಷ್ಯದಿಂದ, ಬೇಜವಾಬ್ದಾರಿ ತೋರಿದ್ದು ವಿದ್ಯಾರ್ಥಿಗಳಿಗೆ ಬೇಸರ ಉಂಟುಮಾಡಿದೆ.

ಪರೀಕ್ಷೆಯಿಂದ ವಂಚಿತರಾದ ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆಯಲ್ಲಿ ಬರೆಯುವ ಅವಕಾಶವನ್ನು ಪ್ರಥಮ ತೇರ್ಗಡೆ ಎಂದು ಪರಿಗಣಿಸಿಬೇಕು ಇಡೀ ವರ್ಷ ಅಭ್ಯಾಸ ಮಾಡಿ ಕ್ಷುಲ್ಲಕ ಕಾರಣಗಳಿಂದ ವಿದ್ಯಾರ್ಥಿಗಳ ಭವಿಷ್ಯಕ್ಕೆ ಕೊಡಲಿ ಪೆಟ್ಟು ನೀಡಿ ಶಿಕ್ಷಣದ ಹಕ್ಕನ್ನು ಉಲ್ಲಂಘನೆ ಮಾಡಿದ ಮಹಾತ್ಮಗಾಂಧಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಹಾಗೂ ಗುಮಾಸ್ತರನ್ನು ಶಿಕ್ಷಣ ಇಲಾಖೆಯು ಕೆಲಸದಿಂದ ವಜಾಗೊಳಿಸಬೇಕೆಂದು ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ಹಾವೇರಿ ಜಿಲ್ಲಾ ಸಮಿತಿ ಆಗ್ರಹಿಸುತ್ತದೆ ಎಂದರು.

ಈ ಸಂದರ್ಭದಲ್ಲಿ ನಿಖಿತಾ ಪಾಟೀಲ್, ಕೃಷ್ಣ ಕಡಕೋಳ, ಮಹ್ಮದ ಫರಾನ, ಭುವನ್ ಒಂಟಕರ್, ಮಹ್ಮದ ಮುಸ್ತಫ ದಾವಣಗೆರೆ, ಶಾನಬಾಜ ಸೊರಬದ, ದುಲಶಾನ ತವನಂದಿ, ನಿಖಿತಾ ಪಾಟೀಲ್, ದಸ್ತಗೀರಿ ಕೊಂಡವಾಡಿ, ಪಾಲಕರಾದ ಶಂಕರ್ ವಂಟಕರ್, ಉಮರ್ ಶರಬ್, ಅಲ್ಲಾಬಶ್ ದಾವಣಗೆರೆ, ಇನಾಯತ್ ನಯಕೊಡಿ, ಫಯಾಜ್ ತವನಂದಿ, ಜಿಕ್ರಿಯಾ ಬಳ್ಳಾರಿ ಸೇರಿದಂತೆ ಮುಂತಾದವರು ಹಾಜರಿದ್ದರು. ‌

  •  
  •  
  •  
  •  
  •  
  •  

Leave a Reply

Your email address will not be published. Required fields are marked *

Copyright © All rights reserved. | Developed by EXPOLOG TECHNOLOGIES
error: Content is protected !!