Sat. Nov 27th, 2021

ಪಾಂಡವ ನ್ಯೂಸ್

ಸಮಾಜದ ಧ್ವನಿ

ಮೊಬೈಲ್ ನ ಹಳೆ ಬ್ಯಾಟರಿ ಬ್ಲಾಸ್ಟ್ : ಬಾಲಕನಿಗೆ ಗಂಭೀರ ಗಾಯ:

ಹಾವೇರಿ: ಮೊಬೈಲ್ ನ ಹಳೆಯ ಬ್ಯಾಟರಿ ಏಕಾಏಕಿ ಬ್ಲಾಸ್ಟ್ ಆಗಿ, ಬಾಲಕನಿಗೆ ಗಂಭೀರ ಗಾಯವಾದ ಘಟನೆ ಸವಣೂರು ತಾಲೂಕಿನ ಹುರಳಿಕುಪ್ಪಿ ಗ್ರಾಮದಲ್ಲಿ ನಡೆದಿದೆ.

ಗಾಯಗೊಂಡ ಬಾಲಕನನ್ನು 10 ವರ್ಷದ ಕಾರ್ತಿಕ ರಮೇಶ ಕಲಾದಗಿ ಎಂದು ತಿಳಿದು ಬಂದಿದ್ದು, ಮನೆಯಲ್ಲಿ ಬಿಸಾಕಿದ್ದಾ ಮೊಬೈಲ್ ನ ಬ್ಯಾಟರಿ ಹಿಡಿದುಕೊಂಡು ಆಟವಾಡುತ್ತಿದ್ದ ವೇಳೆ ಘಟನೆ ನಡೆದಿದೆ. ತೀವ್ರ ಅಸ್ವಸ್ಥಗೊಂಡ ಬಾಲಕನನ್ನು ಸವಣೂರು ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯಿಂದ ಬಾಲಕನ ಮುಖಕ್ಕೆ ಹಾಗೂ ಬಲಗೈಗೆ ಗಂಭೀರ ಗಾಯವಾಗಿದ್ದು, ಜೊತೆಗೆ ಬಾಲಕನ ಮೂರು ಬೆರಳು ಕತ್ತರಿಸಿ, ಆಪರೇಷನ್ ಮಾಡಲಾಗಿದೆ. ಸವಣೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆ

ಇನ್ನ ಮೇಲಾದರು ಪೋಷಕರು ನಿಮ್ಮ ಮಕ್ಕಳ ಬಗ್ಗೆ ಎಚ್ಚರ ವಹಿಸಬೇಕು. ಮಕ್ಕಳ ಕೈಯಲ್ಲಿ ಮೊಬೈಲ್ ಕೊಡುವ ಮುನ್ನ ಜಾಗೃತಿ ವಹಿಸುವುದು ಸೂಕ್ತ.‌

  •  
  •  
  •  
  •  
  •  
  •  

Leave a Reply

Your email address will not be published. Required fields are marked *

Copyright © All rights reserved. | Developed by EXPOLOG TECHNOLOGIES
error: Content is protected !!