Thu. Jan 20th, 2022

ಪಾಂಡವ ನ್ಯೂಸ್

ಸಮಾಜದ ಧ್ವನಿ

ಸಂಕಷ್ಟಕ್ಕೆ ತುತ್ತಾದವರ ನೇರವಿಗೆ ಮುಂದಾದ ಸಂಸ್ಥೆ: ಶಾಸಕರ ನೇತೃತ್ವದಲ್ಲಿ ವೈದ್ಯಕೀಯ ಸೇವೆ, ಆಹಾರಧಾನ್ಯ ಪೂರೈಕೆ:

ಹಾವೇರಿ: ಶಾಸಕ‌ ನೆಹರು ಓಲೇಕಾರ, ಸೇವಾ ಭಾರತಿ ಮತ್ತು ಬಹುದ್ದೂರ್ ದೇಸಾಯಿ ಮೋಟರ್ಸ್ ಅವರಿಂದ ಫೋನ್ ಮೂಲಕ ವೈದ್ಯಕೀಯ ಸೇವೆ ಮತ್ತು ಅವಶ್ಯಕತೆ ಇರುವ ರೋಗಿಗಳಿಗೆ ಮನೆಗೆ ಆಹಾರ ಧಾನ್ಯ ವಿತರಣೆ ವ್ಯವಸ್ಥೆಗೆ ಸೋಮವಾರ ಚಾಲನೆ ನೀಡಲಾಯಿತು.

ನಗರದ ಬಹದ್ದೂರ್ ಮೋಟಾರು ಶೋ ರೂಂ ನಲ್ಲಿ
ಕೋವಿಡ್ ಸಂಕಷ್ಟಕ್ಕೆ ತುತ್ತಾದ ಜನರಿಗೆ ವೈದ್ಯಕೀಯ ‌ಸೇವೆ ಹಾಗೂ ಆಹಾರಧಾನ್ಯ ಒದಗಿಸುವ ಕಾರ್ಯಾರಂಭಗೊಂಡಿತು.‌

ಈ ಸಮಯದಲ್ಲಿ ಮಾತನಾಡಿದ ಶಾಸಕ ನೆಹರು ಓಲೇಕಾರ ಅವರು, ಜಿಲ್ಲೆಯಲ್ಲಿ ಸರಿಯಾದ ಸಮಯಕ್ಕೆ ಸರಿಯಾದ ರೀತಿ ಸ್ಪಂದಿಸುವ ಕಾರ್ಯ‌ ನಡೆಯದೆ ಇಂದು ಸಾವು ನೋವು ಹೆಚ್ಚಾಗುತ್ತಿದೆ. ಈ ಸಂಕಷ್ಟ ಸ್ಥಿತಿಯಲ್ಲಿ ಅನೇಕ ಕುಟುಂಬಗಳು ಸಮಸ್ಯೆ ಎದುರಿಸುತ್ತಿದ್ದಾರೆ. ಅವರಿಗೆ ತಕ್ಷಣವೇ ಅಗತ್ಯವಾಗಿರುವ ವೈದ್ಯಕೀಯ ಸೇವೆ, ತಜ್ಞರಿಂದ ಮಾನಸಿಕ ಸ್ಥೈರ್ಯ ಸಿಕ್ಕರೆ ಅವರಲ್ಲಿ ಆತ್ಮವಿಶ್ವಾಸ ಇಮ್ಮುಡಿಯಾಗುತ್ತದೆ. ಅದರಿಂದ ಅವರು ಬೇಗ ಗುಣಮುಖರಾಗಲು ಸಾಧ್ಯವಾಗುತ್ತದೆ. ಆ ಕಾರ್ಯವನ್ನು ಸೇವಾ ಭಾರತಿ ಸಂಸ್ಥೆ, ಬಹದ್ದೂರ್ ದೇಸಾಯಿ ಶೋ ರೂಂ, ಸಹಯೋಗದಲ್ಲಿ‌ ಹಲವು ವೈದ್ಯರನ್ನೋಳಗೊಂಡ ತಂಡ ಇಂದಿನಿಂದ ಕಾರ್ಯಾರಂಭ ಮಾಡಿದೆ.‌

ಈ ತಂಡಕ್ಕೆ ಜನರಿಂದ ವ್ಯಾಪಕ ಸ್ಪಂದನೆ ಲಭ್ಯವಾಗಿದ್ದು, 118 ಜನರ ಸಂಕಷ್ಟದಲ್ಲಿದ್ದವರು ಸಹಾಯ ಕೋರಿದ್ದಾರೆ.‌ 36 ಜನ ಕೋವಿಡ್ ಸೋಂಕಿರನ್ನು ಗುರುತಿಸಲಾಗಿದೆ.‌ ಅದರಲ್ಲಿ 21 ಸೋಂಕಿತರಿಗೆ ಅಗತ್ಯ ವೈದ್ಯಕೀಯ ‌ಸೇವೆ, ಆಹಾರ ಧಾನ್ಯ ಒದಗಿಸಲಾಗಿದೆ.‌ ಅವರಲ್ಲಿ ಸಮಸ್ಯೆಗಳನ್ನು ಹಂಚಿಕೊಂಡ‌ ಸಲಹೆ ಪಡೆದುಕೊಂಡಿದ್ದಾರೆ. 21 ರೋಗಿಗಳ ಸಮಸ್ಯೆ ನೋಡಿಕೊಂಡ ಅವರ ಸಮಸ್ಯೆ ಬಗೆಹರಿಸುವ ಕಾರ್ಯವನ್ನು ವೈದ್ಯರ ತಂಡ ‌ಮಾಡತಿದೆ‌ ಎಂದು ತಿಳಿಸಿದರು. ‌

ನಗರದ ಕೆಲವರು ಸಣ್ಣು ಪುಟ್ಟ ಆರೋಗ್ಯದ ಸಮಸ್ಯೆಗೆ ಆರೋಗ್ಯ ಸಹಾಯಕಿಯರ ನೇರವು ಕೋರಿದ್ದರು. ಅವರ ಬೇಡಿಕೆ ಈಡೇರಿಸಲಾಗಿದೆ.‌ ಸಂಸ್ಥೆಯಿಂದ ಇಂದು ಆರಂಭ ಮಾಡಿರುವ ಈ ಕಾರ್ಯಕ್ಕೆ ಸರಕಾರಿ ಆಸ್ಪತ್ರೆಯಲ್ಲಿ ಇರುವ ರೋಗಿಗಳು ಪೋನ್ ಮಾಡಿ ಶ್ಲಾಘನೀಯ ವ್ಯಕ್ತಪಡಿಸುತ್ತಿದ್ದಾರೆ ಎಂದು ತಿಳಿಸಿದರು.

ಸಧ್ಯ ನಮ್ಮಲ್ಲಿ 6 ಆಕ್ಸಿಜನ್ ಕಾನ್ಸಂಟ್ರೇಟ್ ಲಭ್ಯ ಇವೆ. ಅವುಗಳನ್ನು ಬೇಡಿಕೆ ಇರುವ ಸೋಂಕಿತರ ನೇರವಿಗೆ ನೀಡಲಾಗುವುದು. ಜೊತೆಗೆ ಜಿಲ್ಲೆಯಲ್ಲಿ ಖಾಲಿ ಇರುವ ಬೆಡ್ ಗಳ ಸಂಖ್ಯೆಗೆ ಅನುಗುಣವಾಗಿ ಸೋಂಕಿತರಿಗೆ ಬೆಡ್ ಕೊಡಿಸುವ ಮತ್ತು ಸೋಂಕಿತರನ್ನು ತಲುಪಿಸುವ ಕಾರ್ಯವನ್ನು ಈ ಸಂಸ್ಥೆಯ ಮೂಲಕ‌ ಮಾಡಲಾಗುವುದು.

ಈ ಸೋಂಕನ್ನು ಗ್ರಾಮೀಣ ಮಟ್ಟದಿಂದ ಮಟ್ಟ ಹಾಕಬೇಕು. ಅದಕ್ಕಾಗಿ ಅಲ್ಲಿ ಜನರಲ್ಲಿ ಜಾಗೃತಿ‌ ಮೂಡಿಸಬೇಕಾಗಿದೆ. ಗ್ರಾಮೀಣ ಭಾಗದಲ್ಲಿ ಮದುವೆ ಸಭೆ ಸಮಾರಂಭಗಳನ್ನು ಬಂದ್ ಮಾಡಬೇಕಾಗಿದೆ. ಅದಕ್ಕಾಗಿ ಜನರು ಸಹ ಜಾಗೃತಗೊಳ್ಳಬೇಕಾಗಿದೆ ಎಂದರು.

ಬಹದ್ದೂರ್ ದೇಸಾಯಿ ಶೋ ರೂಂ ಎಂ.ಡಿ.‌ ಪವನ್ ದೇಸಾಯಿ ಮಾತನಾಡಿ, ಈಗ ಸಂಸ್ಥೆಯಿಂದ ಶಹರದಲ್ಲಿ ಇರುವ ಎಲ್ಲ ಸೋಂಕಿತರನ್ನು ತಲುಪಿ ಅವರಿಗೆ ನೇರವು ನೀಡಿದ ಬಳಿಕ, ಹಳ್ಳಿಗಳಿಗೆ ತೆರಳಿ ಅಲ್ಲಿನ ಜನರಲ್ಲಿ ಜಾಗೃತಿ ಮೂಡಿಸಲಾಗುವುದು. ಈ ಸಂಸ್ಥೆಯಿಂದ ದಿನದ 24 ಗಂಟೆ 7090665557/ 8088937325 ದೂರವಾಣಿ ಸೇವೆ ಲಭ್ಯ ಇರಲಿದ್ದು, ಇದರ ಸೇವೆಯನ್ನು ‌ಜನರು ಪಡೆದುಕೊಳ್ಳಬೇಕು ಎಂದು ತಿಳಿಸಿದರು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಸಿದ್ದರಾಜ ಕಲಕೋಟಿ, ಡಾ. ಶಿವಾನಂದ ಕೆಂಭಾವಿ, ಬಹದ್ದೂರ್ ಬೇಸಾಯಿ ಶೋ ರೂಂ ಮಾಲಿಕರು ಹಾಜರಿದ್ದರು.

  •  
  •  
  •  
  •  
  •  
  •  

Leave a Reply

Your email address will not be published. Required fields are marked *

Copyright © All rights reserved. | Developed by EXPOLOG TECHNOLOGIES
error: Content is protected !!