Mon. Oct 18th, 2021

ಪಾಂಡವ ನ್ಯೂಸ್

ಸಮಾಜದ ಧ್ವನಿ

ಕಾರ್ಮಿಕರ ಪುಡ್ ಕಿಟ್ ನಗರಸಭೆಗೆ ಸಂಬಂಧಿಸಿದ ಕಾರಿನಲ್ಲಿ ಅಕ್ರಮವಾಗಿ ಸಾಗಾಟ?:

ಹಾವೇರಿ: ಕಾರ್ಮಿಕ ಇಲಾಖೆಯಿಂದ ಬಡ ಕಾರ್ಮಿಕರಿಗೆ ನೀಡಲಾಗುತ್ತಿರುವ ಪುಡ್ ಕಿಟ್ ಗಳನ್ನು ರಾತ್ರಿವೇಳೆ ನಗರಸಭೆಗೆ ಸಂಬಂಧಿಸಿದ ಕಾರಿನಲ್ಲಿ ಅಕ್ರಮವಾಗಿ ಸಾಗಾಟ ಮಾಡಲಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಕಾರ್ಮಿಕ ಇಲಾಖೆಯ ಲೇಬಲ್ ಹೊಂದಿರುವ ಪುಡ್ ಕಿಟ್ ಗಳನ್ನು ಅಕ್ರಮವಾಗಿ ಸಾಗಾಟ ಮಾಡಿದ ಕಾರ್ ಹಾವೇರಿ‌ ನಗರಸಭೆ ಕಮಿಷನರ್ ಗೆ ನೀಡಲಾಗಿದ್ದ ಕಾರೆಂದು ತಿಳಿದು ಬಂದಿದೆ. ನಗರಸಭೆಯಿಂದ ರಾತ್ರಿ ಪುಡ್ ಕಿಟ್ ಗಳನ್ನು ಕಾರಿನ ಡಿಕ್ಕಿಯಲ್ಲಿ ತುಂಬುವಂತ ವಿಡಿಯೋ ವೈರಲಾಗಿದೆ‌. ಕಾರ್ಮಿಕರಿಗೆ ವಿತರಣೆ ಮಾಡುವ ಪುಡ್ ಕಿಟ್ ಗಳನ್ನು ರಾತ್ರಿಹೊತ್ತು ಎಲ್ಲಿಗೆ ತೆಗೆದುಕೊಂಡು‌ ಹೋಗುತ್ತಿರುವಿರಿ ಎಂದು ವ್ಯಕ್ತಿಯೋರ್ವ ಕೇಳಿದಾಗ, ಕಾರಿನಲ್ಲಿ ಪುಡ್ ಕಿಟ್ ತುಂಬುವ ದಾದಾಪೀರ್ ಎಂಬ ವ್ಯಕ್ತಿ ಬಾಬಣ್ಣನವರು ಹೇಳಿದಾರೆ ಎನ್ನುವ ಮಾತುಗಳು ವಿಡಿಯೋ ದಲ್ಲಿ ಕೇಳಿ ಬಂದಿವೆ.

ಕಾರೊಂದರ ಡಿಕ್ಕಿಯಲ್ಲಿ ನಗರಸಭೆಯ ಕಾರ್ಯಾಲಯದ
ಒಳಗಿನಿಂದ ಇಬ್ಬರು ವ್ಯಕ್ತಿಗಳು ಕಿಟ್‌ಗಳನ್ನು ತಗೆದುಕೊಂಡು ಬಂದು ಕಾರಿನ ಡಿಕ್ಕಿಯಲ್ಲಿ ಸಂಗ್ರಹಿಸುತ್ತಿರವ ದೃಶ್ಯಗಳು
ಸೆರೆಯಾಗಿವೆ. ಕಾರ್ಮಿಕ ಇಲಾಖೆಯ ಕಾರ್ಮಿಕರಿಗೆಂದು ನೀಡಿರುವ ಕಿಟ್‌ಗಳನ್ನು ಎಲ್ಲಿಗೆ ಸಾಗಿಸಲಾಗಿದೆ? ಯಾರಿಗೆ ನೀಡಲು ಸಾಗಿಸಲಾಗಿದೆ? ರಾತ್ರಿವೇಳೆ ಕಿಟ್ ತಗೆದುಕೊಂಡು ಹೋಗುವ ಅಗತ್ಯವಾದರು ಏನಿತ್ತು? ಎಂಬ ಪ್ರಶ್ನೆಗಳನ್ನು ಕಾಂಗ್ರೆಸ್ ಮುಖಂಡರು ಮಾಡುತ್ತಿದ್ದಾರೆ.

ನಗರಸಭೆ ಸಂಬಂಧಿಸಿದವರು ಪುಡ್ ಕಿಟ್ ಗಳನ್ನು ಅಧಿಕೃತವಾಗಿ ಹಂಚಲು ತೆಗೆದುಕೊಂಡರು ಹೋಗುವುದಾಗಿದ್ದರೇ, ಅವುಗಳನ್ನು ರಾತ್ರಿ ಹೊತ್ತು ಏಕೆ ತೆಗೆದುಕೊಂಡ ಹೋಗಬೇಕಿತ್ತು ಎಂದು ಸಾಮಾಜಿಕ ಜಾಲತಾಣದಲ್ಲಿ ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

  •  
  •  
  •  
  •  
  •  
  •  

Leave a Reply

Your email address will not be published. Required fields are marked *

Copyright © All rights reserved. | Developed by EXPOLOG TECHNOLOGIES
error: Content is protected !!