Mon. Oct 18th, 2021

ಪಾಂಡವ ನ್ಯೂಸ್

ಸಮಾಜದ ಧ್ವನಿ

ಪುಡ್ ಕಿಟ್ ಮನೆಗೆ ತೆಗೆದುಕೊಂಡ ಹೋದ ಬಗ್ಗೆ ತನಿಕೆ : ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣನವರ

ಹಾವೇರಿ : ಕಾರ್ಮಿಕ ಇಲಾಖೆಯಿಂದ ನೀಡುವ ಕಿಟ್ ಗಳನ್ನು ನಗರಸಭೆಯಿಂದ ರಾತ್ರಿ ವೇಳೆ ಕಾರಿನಲ್ಲಿ ತೆಗೆದುಕೊಂಡ ಹೋದ ಘಟನೆ‌‌ ನನ್ನ ಗಮನಕ್ಕೆ ಬಂದಿಲ್ಲ.‌ ಈ ಬಗ್ಗೆ ‌ತನಿಕೆ ಮಾಡಿಸುವೆ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣನವರ ಹೇಳಿದರು.

ಶನಿವಾರ ಮಾಧ್ಯಮದೊಂದಿಗೆ ಅವರು ಮಾತನಾಡಿ, ಈಗಾಗಲೇ ಜಿಲ್ಲೆಯಲ್ಲಿ ನೊಂದಾಯಿತ ಕಾರ್ಮಿಕರು ಸಂಖ್ಯೆಯನ್ನು ಸರಕಾರಕ್ಕೆ ಸಲ್ಲಿಸಲಾಗಿದೆ. ನಮಗೆ ಬಂದಿರುವ ಕಿಟ್ ಗಳು ಕೊರತೆಯಿದೆ. ಅದಕ್ಕಾಗಿ ದಾನಿಗಳಿಂದ ಪುಡ್ ಕಿಟ್ ಗಳನ್ನು ತೆಗೆದುಕೊಂಡ ಕಾರ್ಮಿಕರಿಗೆ ಹಂಚಲಾಗಿದೆ. ಅದರಿಂದ ಹೊರಗುಳಿದ ಕಾರ್ಮಿಕರಿಗೆ ಕಾರ್ಮಿಕ ‌ಇಲಾಖೆಯ ಕಿಟ್ ಗಳನ್ನು ಹಂಚಲಾಗುತ್ತಿದೆ. ಮುಂದಿನ ದಿನಗಳಲ್ಲಿ ಸರಕಾರ ಮತ್ತೆ ಕಿಟ್ ಒದಗಿಸಿದರೆ ಕಾರ್ಮಿಕರಿಗೆ ‌ನೀಡಲಾಗುವುದು.

ಆದರೆ, ಈಗ ಕಾರ್ಮಿಕರಿಗೆ ನೀಡುವ ಕಿಟ್ ಗಳನ್ನು ಕಾರಿನಲ್ಲಿ ‌ಮನೆಗೆ ತೆಗೆದುಕೊಂಡು ಹೋಗುವ ವಿಡಿಯೋ ವೈರಲ್ ಆಗಿದ್ದನ್ನು ತನಿಕೆ‌ ಮಾಡಿಸಲಾಗುವುದು ಎಂದರು.

  •  
  •  
  •  
  •  
  •  
  •  

Leave a Reply

Your email address will not be published. Required fields are marked *

Copyright © All rights reserved. | Developed by EXPOLOG TECHNOLOGIES
error: Content is protected !!