Sat. Oct 16th, 2021

ಪಾಂಡವ ನ್ಯೂಸ್

ಸಮಾಜದ ಧ್ವನಿ

ಕಾರ್ಮಿಕರ ಪುಡ್ ಕಿಟ್ ದರೋಡೆ ಮಾಡಿದವರನ್ನು ಬಂಧಿಸುವಂತೆ ಕಾಂಗ್ರೆಸ್ ಒತ್ತಾಯ: ಜಿಲ್ಲಾಧಿಕಾರಿಗೆ ಮನವಿ

ಹಾವೇರಿ: ಕಾರ್ಮಿಕರಿಗೆ ನೀಡುವ ಪುಡ್ ಕಿಟ್ ಗಳನ್ನು ನಗರಸಭೆಯಿಂದ ರಾತ್ರಿ ವೇಳೆ ದರೋಡೆ ಮಾಡಿದವರನ್ನು ಬಂಧಿಸುವಂತೆ ಯುವ ಕಾಂಗ್ರೆಸ್ ನಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.

ಶನಿವಾರ ಜಿಲ್ಲಾಧಿಕಾರಿ ಕಚೇರಿಗೆ ತೆರಳಿದ ಕಾಂಗ್ರೆಸ್ ‌ಮುಖಂಡರು ದರೋಡೆ ಮಾಡಿದರವರ ಮೇಲೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.‌

ನಗರಸಭೆಯಲ್ಲಿ ಕಾರ್ಮಿಕರಿಗೆ ನೀಡಬೇಕಾಗಿದ್ದ ಕಿಟ್ ಗಳನ್ನು ರಾತ್ರೋರಾತ್ರಿ ದರೋಡೆ ಮಾಡಿದ್ದಾರೆ. ಇದರಲ್ಲಿ ಭಾಗಿಯಾದ ವ್ಯಕ್ತಿಗಳನ್ನು ಬಂಧಿಸಬೇಕು ಹಾಗೂ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಕಾರ್ಮಿಕರ ಕಿಟ್ ಗಳನ್ನು ಕಾರ್ಡ್ ಇದ್ದವರಿಗೆ ವಿತರಿಸುತ್ತಿಲ್ಲ, ಶಾಸಕರು ಚೀಟಿಗಳನ್ನು ನೀಡಿದವರಿಗೆ ಮಾತ್ರ ಕಿಟ್ ಗಳನ್ನು ವಿತರಿಸುತ್ತಿದ್ದಾರೆ, ಇದು ಕಾನೂನು ಬಾಹಿರವಾಗಿದ್ದು, ನಿಜವಾದ ಪಲಾನುಭವಿಗಳಿಗೆ ಅನ್ಯಾಯಾಗುತ್ತಿದೆ. ಕೂಡಲೇ ಅಧಿಕಾರಿಗಳು ಇದನ್ನು ಸರಿಪಡಿಸಬೇಕೆಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಎಂ. ಹಿರೇಮಠ ಮತ್ತು ಮಾಜಿ ಸಚಿವ ರುದ್ರಪ್ಪ ಲಮಾಣಿ ಒತ್ತಾಯಿಸಿದ್ದಾರೆ.

ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನ ಹಿರೇಮಠ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಎಸ್.ಬಿಷ್ಟನಗೌಡ್ರ, ಎಂ.ಎಂ.ಮೈದುರ, ನಗರ ಸಭೆ ಸದಸ್ಯ ಐ. ಯು. ಪಠಾಣ,ಗಣೇಶ ಬಿಷ್ಟಣ್ಣವರ,ರೇಣುಕಾ ಪುತ್ರನ್, ವಿಶಾಲಾಕ್ಷಿ ಆನವಟ್ಟಿ, ಜಾಹೀರಾಬಾನು ಜಮಾದಾರ,ನಾಗರಾಜ ತಳವಾರ, ಮುಖಂಡರಾದ ದಾಸಪ್ಪ ಕರ್ಜಗಿ, ಸುನಿಲ್ ಜಮಾದಾರ,ಅಲ್ತಾಫ್ ಚೋಪದಾರ, ದ್ಯಾಮಣ್ಣ ಅರಸನಾಳ, ಯುವ ಕಾಂಗ್ರೆಸ್ ಮುಖಂಡರಾದ ನವೀದ ವರ್ದಿ, ರಫೀಕ್ ನದಾಫ, ಮಣಿಕಂಠ ಬಳ್ಳಾರಿ, ಸಂತೋಷ್ ಲಮಾಣಿ, ಉಮೀದ್ ನದಾಫ್,ಜಾಫರ್ ಅತ್ತಾರ,ಮೂರ್ತಿ ಕರ್ಜಗಿ, ಉಮರ್ ಇನಾಮದಾರ, ಮನೋಜ ಅರಸನಾಳ ಸೇರಿದಂತೆ ಮುಂತಾದವರು ಹಾಜರಿದ್ದರು.

  •  
  •  
  •  
  •  
  •  
  •  

Leave a Reply

Your email address will not be published. Required fields are marked *

Copyright © All rights reserved. | Developed by EXPOLOG TECHNOLOGIES
error: Content is protected !!