Sat. Jan 22nd, 2022

ಪಾಂಡವ ನ್ಯೂಸ್

ಸಮಾಜದ ಧ್ವನಿ

ಸಚಿವ ಬೊಮ್ಮಾಯಿಂದ ಜಿಲ್ಲಾಸ್ಪತ್ರೆಗೆ ಆಕ್ಸಿಜನ್ ಬ್ಯಾಕ್ ಪ್ಯಾಕ್ ಹಸ್ತಾಂತರ:

1 min read

ಹಾವೇರಿ: ನಗರದ ಜಿಲ್ಲಾ ಆಸ್ಪತ್ರೆಗೆ ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಬಸವರಾಜ್ ಬೊಮ್ಮಾಯಿ ಅವರು ವೆಂಟಿಲೇಟರ್ ಗೆ ಪರ್ಯಾಯವಾಗಿ ತಯಾರಿಸಲಾಗಿರುವ 4 ಸೆಮಿ ವೆಂಟಿಲೇಟರ್ ಆಕ್ಸಿಜನ್ ಬ್ಯಾಕ್ ಪ್ಯಾಕ್ ಹಸ್ತಾಂತರಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ಆರೋಗ್ಯ ಜಿಲ್ಲೆಯ ಅಧಿಕಾರಿಗಳೊಂದಿಗೆ ಕೋವಿಡ್ ಸ್ಥಿತಿಗತಿ ಕುರಿತು ಸಭೆ ನಡೆಸಿ ಕೈಗೊಳ್ಳು ಬೇಕಾದ ಕ್ರಮಗಳ ಕುರಿತು‌ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಎಸ್.ಡಿ.ಆರ್ ಎಫ್ ಅನುದಾನ ದಲ್ಲಿ ಒಟ್ಟು ನಲವತ್ತು ಸೆಮಿ ವೆಂಟಿಲೇಟರ್ ಗಳನ್ನು ಖರೀದಿಸಲಾಗಿದೆ. ಹಾವೇರಿ ಜಿಲ್ಲಾಸ್ಪತ್ರೆಗೆ 10. ಶಿಗ್ಗಾವ- ಸವಣೂರು
ಹಿರೇಕೆರೂರು.ಹಾನಗಲ್.ಬ್ಯಾಡಗಿ ಹಾಗೂ ರಾಣೆಬೆನ್ನೂರಿಗೆ ತಲಾ 5 ರಂತೆ ವೆಂಟಿಲೇಟರ್ ಉಪಕರಣಗಳನ್ನು ಬಳಸುವಂತೆ ಸೂಚಿಸಲಾಗಿದೆ.

ಇವು ವೆಂಟಿಲೇಟರ್ ಗೆ ಪರ್ಯಾಯವಾಗಿ ನಿರ್ಮಾಣವಾಗಿರುವ ಉಪಕರಣಗಳು. ವ್ಯಕ್ತಿಯ ಆಕ್ಸಿಜನ್ ( saturation) 80 ರಿಂದ 82 ಇರುವವರಿಗೆ ಈ ಉಪಕರಣವನ್ನು ಅಳವಡಿಸಿದರೆ, ಅವರ ಅಕ್ಜಿಜನ್ (saturation) ಲೆವಲ್ ನ್ನು 92ರವರೆಗೆ ನಿಯಂತ್ರಿಸುತ್ತದೆ. ಇದು ಬಳಕೆಗೆ ಸುಲಭವಾಗಿದೆ ಎಂದು ಅವರು ತಿಳಿಸಿದರು.

ಈಗಾಗಲೇ ಹಾವೇರಿ ಜಿಲ್ಲಾಡಳಿತ ಈ ರೀತಿಯ ಒಟ್ಟು 40 ಸೆಮಿ ವೆಂಟಿಲೇಟರ್ ಗಳನ್ನು ಖರೀದಿ ಮಾಡಿದೆ.
ಕೋವಿಡ್ ವಿರುದ್ದದ ಹೋರಾಟದಲ್ಲಿ ಸೇಮಿ ವೆಂಟಿಲೇಟರ್ ಬಹಳ ಉಪಯುಕ್ತವಾಗಿದೆ ಸಕಾಲದಲ್ಲಿ ಜಿಲ್ಲಾಡಳಿತ ತರಿಸಿದೆ. ಜಿಲ್ಲೆಯ ವಾದ್ಯಾಧಿಕಾರಿಗಳು ಇದನ್ನ ಸದುಪಯೋಗ ಪಡಿಸಿ ಕೊಳ್ಳ ಬೇಕು ಎಂದರು.

ಈ ವೇಳೆ ಜಿಲ್ಲಾಧಿಕಾರಿ ಸಂಜಯ
ಶೆಟ್ಟಣ್ಣವರ ಹಾಗೂ ಜಿಲ್ಲಾಪಂಚಾಯತ್ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಮಹಮ್ಮದ್ ರೋಷನ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

  •  
  •  
  •  
  •  
  •  
  •  

Leave a Reply

Your email address will not be published. Required fields are marked *

Copyright © All rights reserved. | Developed by EXPOLOG TECHNOLOGIES
error: Content is protected !!