Sat. Jan 22nd, 2022

ಪಾಂಡವ ನ್ಯೂಸ್

ಸಮಾಜದ ಧ್ವನಿ

ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ ಸಮರ: ತೈಲ ಬೆಲೆ, ಅಡಿಗೆ ಅನಿಲದ ಬೆಲೆ ಏರಿಕೆಯಿಂದ ಜನರ ಬದುಕು ದುಸ್ತರ: ಸಲೀಂ ಅಹ್ಮದ್

ಹಾವೇರಿ: ತೈಲ ಬೆಲೆ ಹಾಗೂ ಅಡಿಗೆ ಅನಿಲದ ಬೆಲೆ ಏರಿಕೆಯಿಂದ ದಿನ ನಿತ್ಯ ಅಗತ್ಯ ವಸ್ತುಗಳ ಬೆಳೆ ಗಗಕ್ಕೇರಿದ್ದು, ಬೆಲೆ ಏರಿಕೆಯಿಂದ ದೇಶದ ಬಡ ಹಾಗೂ ಮಧ್ಯಮ ವರ್ಗದ ಜನತೆ ಬದುಕು ದುಸ್ತರವಾಗಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮೀತಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ ಅವರು ಹೇಳಿದರು.

ಗುರುವಾರ ತೈಲ ಹಾಗೂ ಅಡಿಗೆ ಅನಿಲ ಬೆಲೆ ಏರಿಕೆ ಖಂಡಿಸಿ, ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ನಡೆದ ಪ್ರತಿಭಟನೆಯ ಲ್ಲಿ ಅವರು ಮಾತನಾಡಿದರು.

ಅಧಿಕಾರಕ್ಕೆ ಬಂದರೆ ತೈಲ ಹಾಗೂ ಅಡುಗೆ ನಿಲದ ಬೆಲೆಯನ್ನು ನಿಯಂತ್ರಿಸುವದಾಗಿ ಹೇಳಿದ್ದ ನರೇಂದ್ರ ಮೋದಿಯವರು ಜನತೆಗೆ ನೀಡಿದ ಮಾತನ್ನು ತಪ್ಪಿ ಈ ಎಲ್ಲ ಅಗತ್ಯ ವಸ್ತುಗಳ ಬೆಲೆಯನ್ನು ಗಗನಕ್ಕೆ ಏರಿಸುವ ಮೂಲಕ ಜನತೆಗೆ ಮೋಸ ಮಾಡಿದ್ದಾರೆ ಎಂದು ದೂರಿದರು.

ಕೊರೋನಾ ಸಂದರ್ಭದಲ್ಲಿ ಜನತೆಗೆ ಕೆಲಸವಿಲ್ಲದ್ದು ಒಂದೆಡೆಯಾದರೆ, ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನತೆ ಕಂಗಾಲಾಗಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೊರೋನಾ ಹಾಗೂ ಬೆಲೆ ನಿಯಂತ್ರಿಸುವಲ್ಲಿ ವಿಫಲವಾಗಿವೆ ಎಂದು ಆರೋಪಿಸಿದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಂ.ಎಂ.ಹಿರೇಮಠ ಮಾತನಾಡಿ, ಕೊರೋನಾದಿಂದ ಕಂಗೆಟ್ಟಿದ್ದ ಜನತೆಗೆ ಬೆಲೆ ಏರಿಕೆಯಿಂದ ಬದುಕು ಕಟ್ಟಿಕೊಳ್ಳುವುದಕ್ಕೆ ಹೆಣಗುತ್ತಿದ್ದಾರೆ. ಬೆಲೆ ಏರಿಕೆಯನ್ನು ನಿಯಂತ್ರಿಸುವವರೆಗೂ ಕಾಂಗ್ರೆಸ್ ನಿರಂತರವಾಗಿ ಹೋರಾಟ ಮಾಡಲಿದೆ ಎಂದು ತಿಳಿಸಿದರು.

ಇದಕ್ಕೂ ಪೂರ್ವದಲ್ಲಿ ನಗರದ ಪುರ ಸಿದ್ಧೇಶ್ವರ ದೇವಸ್ಥಾನದ ಹತ್ತಿರ ಸೈಕಲ್ ಜಾಥಾಕ್ಕೆ ಸಲೀಂ ಅಹ್ಮದ ಅವರು ಚಾಲನೆ ನೀಡಿದರು. ಸೈಕಲ್ ಜಾಥಾ ನಗರದ ಮುಖ್ಯ ಮಾರುಕಟ್ಟೆ, ಎಂ.ಜಿ ರೋಡ್, ಜೆ.ಪಿ ವೃತ್ತ ಮಾರ್ಗವಾಗಿ ಸಿದ್ದಪ್ಪ ಹೊಸಮನಿ ವೃತ್ತಕ್ಕೆ ಆಗಮಿಸಿ ಇಲ್ಲಿ ಕೆಲ ಕಾಲ ಪ್ರತಿಭಟನೆ ಮಾಡಲಾಯಿತು.

ಸೈಕಲ್ ಜಾಥಾದಲ್ಲಿ ಎತ್ತಿನ ಬಂಡಿ, ಕುದರಿ ಟಾಂಗಾದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಜಾಥಾ ಉದ್ದಕ್ಕೂ ಆಗಮಿಸುವ ಮೂಲಕ ಗಮನಸೆಳೆದರು.

ಸೈಕಲ್ ಜಾಥಾದಲ್ಲಿ ಸಲೀಂ ಅಹ್ಮದ್, ಮಾಜಿ ಸಚಿವರಾದ ರುದ್ರಪ್ಪ ಲಮಾಣಿ, ಬಸವರಾಜ ಶಿವಣ್ಣನವರ, ಮನೋಹರ ತಹಶೀಲ್ದಾರ, ವಿಪ ಮಾಜಿ ಸದಸ್ಯ ಸೋಮಣ್ಣ ಬೇವಿನಮರದ, ಜಿ.ಪಂ ಮಾಜಿ ಅಧ್ಯಕ್ಷರಾದ ಕೊಟ್ರೇಶಪ್ಪ ಬಸೇಗಣ್ಣಿ ಹಾಗೂ ಎಸ್.ಕೆ.ಕರಿಯಣ್ಣನವರ, ನಗರಸಭಾಧ್ಯಕ್ಷ ಸಂಜೀವಕುಮಾರ ನೀರಲಗಿ, ಶಿವಯೋಗಿ ಹಿರೇಮಠ, ಎಂ.ಎಂ.ಮೈದೂರ, ಪ್ರಕಾಶ ಕೋಳಿವಾಡ್, ಪ್ರೇಮಾ ಪಾಟೀಲ, ಶಿವಕುಮಾರ ತಾವರಗಿ, ನಗರಸಭಾ ಸದಸ್ಯರು ಸೇರಿದಂತೆ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.

  •  
  •  
  •  
  •  
  •  
  •  

Leave a Reply

Your email address will not be published. Required fields are marked *

Copyright © All rights reserved. | Developed by EXPOLOG TECHNOLOGIES
error: Content is protected !!