Thu. Jan 20th, 2022

ಪಾಂಡವ ನ್ಯೂಸ್

ಸಮಾಜದ ಧ್ವನಿ

ಬಿಜೆಪಿಯಿಂದ ಜನ ವಿರೋಧಿ, ಭ್ರಷ್ಟಾಚಾರ ಆಡಳಿತ: ಕೋವಿಡ್ ನಿರ್ವಹಣೆಯಲ್ಲಿ ಸರಕಾರ ವಿಫಲ: ಎಸ್.ಆರ್. ಪಾಟೀಲ ಆರೋಪ

ಹಾವೇರಿ: ಬಿಜೆಪಿ ಸರಕಾರ ಜನವಿರೋಧಿ, ಭ್ರಷ್ಟಾಚಾರದಿಂದ ಕೂಡಿದ ಸರಕಾರ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ ಆರೋಪಿಸಿದರು.‌

ಮಂಗಳವಾರ ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಬಿಜೆಪಿ ಸರಕಾರದಲ್ಲಿ ದಿನಕ್ಕೆ 100 ಕೋಟಿ ಭ್ರಷ್ಟಾಚಾರ ನಡೆಯುತ್ತಿದೆ ಬಿಜೆಪಿ ನಾಯಕರು ಹೇಳುತ್ತಿದ್ದಾರೆ, ಜೊತೆಗೆ ಎಚ್. ವಿಶ್ವನಾಥ ಅವರು ಕಮಿಷನ್ ದಂಧೆಯನ್ನು ಬಹಿರಂಗ ಮಾಡಿದ್ದಾರೆ. ಇಷ್ಟೊಂದು ಭ್ರಷ್ಟ ಸರಕಾರ ಈ ಹಿಂದೆ ಇರಲಿಲ್ಲ ಎಂದು ದೂರಿದರು.

ಎರಡನೇ ನಿಯಂತ್ರಣ ಮಾಡುವಲ್ಲಿ ಸರಕಾರ ಸಂಪೂರ್ಣ ವಿಫಲವಾಗಿದೆ. ತಜ್ಞರು ಮುಂಚಿತವಾಗಿ ಎಚ್ಚರಿಕೆ‌ ನೀಡಿದ್ದರು ಸರಕಾರ ನಿರ್ಲಕ್ಷ್ಯ ವಹಿಸಿದ ಪರಿಣಾಮ ಬಹಳಷ್ಟು ತೊಂದರೆ, ಸಾವು,ನೋವು ಹೆಚ್ಚಾಯಿತು. ರಾಜ್ಯದಲ್ಲಿ ಆಕ್ಸಿಜನ್ ಹೆಚ್ಚು ಕೊರತೆಯಿಂದ ಜನರು ಜೀವ ಕಳೆದುಕೊಂಡಿದ್ದಾರೆ.

ರಾಜ್ಯ ಪ್ರತಿ ದಿನ 1800 ಕೆ.ಎಲ್ ನಷ್ಟು ಆಕ್ಸಿಜನ್ ಅಗತ್ಯವಿತ್ತು. ಆದರೆ, ಅಷ್ಟು ಸರಬರಾಜು ಆಗದ ಪರಿಣಾಮ ಜನರು ಜೀವ ಕಳೆದುಕೊಂಡಿದ್ದಾರೆ.

ರಾಜ್ಯಕ್ಕೆ ಅಗತ್ಯವಿದ್ದ ಆಕ್ಸಿಜನ್ ನ್ನು ಸರಬರಾಜು ಮಾಡುವಂತೆ ಹೈಕೋರ್ಟ್ ಆದೇಶ ನೀಡಿತು. ಅದನ್ನ ಪ್ರಶ್ನಿಸಿ ಕೇಂದ್ರ ಸುಪ್ರೀಂಕೋರ್ಟ್ ಮೋರೆ ಹೋದರು. ಹೈಕೋರ್ಟ್ ತೀರ್ಪನ್ನು ದೇಶದ ನ್ಯಾಯಾಲಯದ ಎತ್ತಿ ಹಿಡಿಯುತು. ಅದರಂತೆ 1200 ಕೆ.ಎಲ್ ನಷ್ಟು ಆಕ್ಸಿಜನ್ ನೀಡುವಂತೆ ತೀರ್ಪು ನೀಡಿತು. ರಾಜ್ಯದ ಜನರನ್ನು ದೇಶದ ನ್ಯಾಯಲಯವು ಉಳಿಸಿದವು. ಆಡಳಿತ ನಡೆಸುವ ಸರಕಾರಗಳು ಜೀವ ಬಲಿ ತೆಗೆದುಕೊಂಡರು ಎಂದು ದೂರಿದರು.

ಈ ಸರಕಾರದ ಅವಧಿಯಲ್ಲಿ ಆಂಟಿ ವೈರಲ್ ಡ್ರಗ್ ಸರಬರಾಜು ಮಾಡಲಿಲ್ಲ. ಬ್ಲಾಕ್ ಫಂಗಸ್ ಸರಿಯಾದ ಚಿಕಿತ್ಸೆ ಕೊಡಿಸಲು ಸಾಧ್ಯವಾಗಲಿಲ್ಲಾ. ಮೂರನೇ ಅಲೆ ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ ಎಂದು ತಜ್ಞರು ಹೇಳಿದ್ದರು, ಅದರ ಬಗ್ಗೆ ಇಲ್ಲಿ ತನಕ ಯಾವುದೇ ಮುಂಜಾಗ್ರತಾ ಕ್ರಮ ಕೈಗೊಳ್ಳದೇ ಇರುವುದು ದುರಂತ. ಜಿಲ್ಲೆಯಲ್ಲಿ 12. ಲಕ್ಷ ಹೆಚ್ಚು ಜನರ ವಾಕ್ಸಿನ್ ಅರ್ಹರಿದ್ದಾರೆ. ಅದರಲ್ಲಿ 52 ಸಾವಿರ ಹೆಚ್ಚು ಜನರಿಗೆ ಎರಡು ಡೋಸ್ ಲಸಿಕೆ ನೀಡಿದ್ದಾರೆ. ದಿನಕ್ಕೆ 25000 ಜನರಿಗೆ ಲಸಿಕೆ ಹಾಕುವ ಸಾಮರ್ಥ್ಯ ಇಲ್ಲಿನ ವೈದ್ಯಕೀಯ ಸಿಬ್ಬಂದಿಗೆ ಇದೆ. ಆದರೆ, ಲಸಿಕೆ ಸರಿಯಾಗಿ ಸರಬರಾಜು ಆಗುತ್ತಿಲ್ಲ. ದೇಶದಲ್ಲಿ 100 ಕೋಟಿ ಜನರು ವಾಕ್ಸಿನ್ ಅರ್ಹತೆ ಇರುವ ಜನರಿದ್ದಾರೆ. ರಾಜ್ಯ 7 ಕೋಟಿ ಜನರಲ್ಲಿ 5. ಕೋಟಿ ಜನರು ವಾಕ್ಸಿನ್ ಅರ್ಹತೆ ಹೊಂದಿದ್ದಾರೆ. ಇದರಲ್ಲಿ ಶೇ. 92 ರಷ್ಟು ಜನರಿಗೆ ವಾಕ್ಸಿನ್ ತಲುಪಿಲ್ಲ. ವಾಕ್ಸಿನ್ ಕೋಡಲು ಎನಾಗಿದೆ.‌ ಈ ಸರಕಾರಕ್ಕೆ ಹೊರಗಿನ ದೇಶಕ್ಕೆ ವಾಕ್ಸಿನ್ ಕೊಡಲು ಸಾಧ್ಯವಾಗಿದೆ. ಆದರೆ, ದೇಶದಲ್ಲಿನ‌ ಜನರಿಗೆ ಕೊಡಲು ಯಾಕೆ ಸಾಧ್ಯವಾಗುತ್ತಿಲ್ಲ‌ ಎಂದು ಸರಕಾರವನ್ನು ತರಾಟೆ ತೆಗೆದುಕೊಂಡರು.

ಈ ಸರಕಾರವು ಕೊರೊನಾ ಕಂಟ್ರೋಲ್ ಮಾಡಲು ಸಾಧ್ಯವಾಗದಕ್ಕೆ, ಆರ್ಥಿಕ ಸಂಕಷ್ಟ ಎದುರಾಗಿದೆ. ತೈಲ ಬೆಲೆ ಶತಕ ಬಾರಿಸಿದೆ. ಇವರ ಅವಧಿಯಲ್ಲಿ ಸಿಕ್ಸರ್ ಬಾರಿಸುವ ನಾಟ್ ಔಟ್ 100 ರೂ ಆಗಿದೆ. ಯುಪಿಎ ಅವಧಿಯಲ್ಲಿ ತೈಲ್ ಬೆಲೆ ಹೆಚ್ಚಾದ ಸಮಯದಲ್ಲಿ ಚಕ್ಕಡಿಯಲ್ಲಿ ಓಡಾಡಿದವರು, ಇಂದು ಮಾಯವಾಗಿದ್ದಾರೆ. 3500 ಕೋಟಿ ತೈಲ್ ಬಾಂಡ್ ನೀಡಿದ್ದು, 1.5. ಲಕ್ಷ ಕೋಟಿ ನೀಡಿಲ್ಲ. ಬೇಕಿದ್ದರೇ ಬಜೆಟ್ ನಲ್ಲಿ ನೋಡಿ. ದೊಡ್ಡ ಪ್ರಮಾಣದಲ್ಲಿ ಟ್ಯಾಕ್ಸ್ ಹಾಕುವ ಮೂಲಕ ದೇಶದ ಜನರ ಹಣ ಲೂಟಿ ಮಾಡುತ್ತಿದೆ. ಇದರಿಂದ ಬಡವರ, ಮಧ್ಯಮದ ವರ್ಗದ ಜನರ ಬದುಕು ದುಸ್ತರವಾಗಿದೆ. ಡಬಲ್ ಇಂಜಿನ್ ಸರಕಾರ ಆಡಳಿತಕ್ಕೆ ಬಂದರೆ ಸ್ವರ್ಗ ತರುತ್ತವೆ ಎಂದರು. ಈಗ ನರಕ ಸೃಷ್ಟಿ ಮಾಡಿದ್ದಾರೆ.

ರಾಹುಲ್ ಗಾಂಧಿ ಅವರ ರಫೆಲ್‌ ಯುದ್ಧ ವಿಮಾನ ಹಗರಣದ ಬಗ್ಗೆ ಪ್ರಸ್ತಾಪಿಸಿದ್ದರು.‌ ಈಗ ಪ್ರಾನ್ಸ್ ಸರಕಾರ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಕೆ ಆರಂಭಿಸಿದೆ. ಇವರ ಅವಧಿಯಲ್ಲಿ ಕೇಂದ್ರದ ಸಂಸ್ಥೆಗಳನ್ನು ಖಾಸಗಿ ಅವರಿಗೆ ಮಾರಾಟ ಮಾಡಿದರು. ಬ್ರಿಟಿಷರ ಅವಧಿಯಲ್ಲಿ ಇದ್ದ ಒಂದು ಇಷ್ಟ್ ಇಂಡಿಯಾ ಕಂಪನಿ ದೇಶವನ್ನು ಆಳಿತು.
ಈಗ ಅಂತಹ ನೂರು ಕಂಪನಿಗಳು ತಲೆ ಎತ್ತಿವೆ. ಇದರಿಂದ ದೇಶದ ಸ್ಥಿತಿಗತಿ ಅದೋಗತಿಗೆ ಸಾಗಲಿದೆ.‌ ಈ ಎಲ್ಲ ಕಾರಣಗಳಿಂದ ದೇಶದ ಸ್ಥಿತಿ ಬಾಂಗ್ಲಾ, ಪಾಕಿಸ್ತಾನಕ್ಕಿಂತ ಕೆಳ ಮಟ್ಟಕ್ಕೆ ತಲುಪಿದೆ‌ ಎಂದು ದೂರಿದರು.

ಈ ಎಲ್ಲ ಕಾರಣಗಳನ್ನು ಮುಂದಿಟ್ಟುಕೊಂಡ ಕಾಂಗ್ರೆಸ್ ಪಕ್ಷವೂ 5. ಕೋಟಿ ಜನರಿಗೆ ವಾಕ್ಸಿನ್ ಕೊಡಬೇಕು. ತ್ವರಿತವಾಗಿ ನೀಡಬೇಕು ಎಂದು ಒತ್ತಾಯಿಸುತ್ತದೆ ಎಂದರು.‌

ಈ ಸಮಯದಲ್ಲಿ ಮಾಜಿ ಸಚಿವರಾದ ಮನೋಹರ್ ತಹಶಿಲ್ದಾರರ, ಬಸವರಾಜ ಶಿವಣ್ಣನವರ, ರುದ್ರಪ್ಪ ಲಮಾಣಿ, ನಗರಸಭೆ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಎಂ.ಹಿರೇಮಠ, ಕಾಂಗ್ರೆಸ್ ಮುಖಂಡ ಡಾ.ಸಂಜಯ ಡಾಂಗೆ ಸೇರಿದಂತೆ ಮುಂತಾದವರು ಹಾಜರಿದ್ದರು.

  •  
  •  
  •  
  •  
  •  
  •  

Leave a Reply

Your email address will not be published. Required fields are marked *

Copyright © All rights reserved. | Developed by EXPOLOG TECHNOLOGIES
error: Content is protected !!