Sat. Jan 15th, 2022

ಪಾಂಡವ ನ್ಯೂಸ್

ಸಮಾಜದ ಧ್ವನಿ

ಎಂ.ಎಲ್.ಎ ಕ್ಷೇತ್ರದ ಜನರ ಅಸ್ಮಿತೆ: ಹಾನಗಲ್ಲಿಗೆ ದತ್ತು ಪುತ್ರರ ಅಗತ್ಯವಿಲ್ಲ: ಸ್ಥಳೀಯರಿಗೆ ಟಿಕೆಟ್ ನೀಡದಿದ್ದರೆ ಕಾರ್ಯಕರ್ತರ ಶಕ್ತಿ ತೋರಿಸುವದು ಅನಿವಾರ್ಯ:

ಹಾವೇರಿ: ಹಾನಗಲ್ಲ ತಾಲೂಕಿಗೆ ಹೊರಗಿನ ನಾಯಕರು ಅಗತ್ಯವಿಲ್ಲ, ಸ್ಥಳೀಯವಾಗಿ ಆಡಳಿತ ನಡೆಸುವ ಶಕ್ತಿ ತಾಲೂಕಿನವರಿಗೆ ಕಾರ್ಯಕರ್ತರ ಅಭಿಪ್ರಾಯದಂತೆ ಹೈ ಕಮಾಂಡ್ ಟಿಕೆಟ್ ನ್ನು ಸ್ಥಳೀಯರಿಗೆ ನೀಡಬೇಕು. ಎಂ.ಎಲ್.ಎ ಎನ್ನುವುದು ಸ್ಥಳೀಯರ ಅಸ್ಮಿತೆ ಎಂಬ ಕೂಗು ಹಾನಗಲ್ಲ ತಾಲೂಕಿನ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರಿಂದ ಕೇಳಿ ಬಂದಿದೆ.

ಮಂಗಳವಾರ ತಾಲೂಕಿನ ಕೂಡಲ ಗ್ರಾಮದ ಗುರುನಂಜೇಶ್ವರ ಮಠದಲ್ಲಿ ನಡೆದ ಹಾನಗಲ್ಲ ತಾಲೂಕಾ ಸ್ವಾಭಿಮಾನಿ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕೇಳಿ ಬಂದವು.

ಮನೋಹರ್ ತಹಶಿಲ್ದಾರರ ಮಾತನಾಡಿ, ಈ ಹಿಂದಿನ ಚುನಾವಣೆಯಲ್ಲಿ ಯುವಜನರ ಕೋಟಾದಡಿ ಮೇಲ್ಮಟ್ಟದಲ್ಲಿ ಒಂದು ಸಂಚಿನಿಂದ ನಮ್ಮ ಕ್ಷೇತ್ರದಲ್ಲಿ ಸ್ಥಳೀಯರಿಗೆ ಟಿಕೆಟ್ ಕೈ ತಪ್ಪಿತ್ತು ಎಂದು ಸ್ವತಃ ಸಿದ್ದರಾಮಯ್ಯನವರೇ ಹೇಳಿದ್ದಾರೆ.

ಸಿದ್ದರಾಮಯ್ಯನವರ ನೇತೃತ್ವದಲ್ಲಿ ಹಾನಗಲ್ಲನಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳು ನಡೆದರು ನನಗೆ ಟಿಕೆಟ್ ತಪ್ಪಿಸಿದರು. ಎಲ್ಲ ಗುಪ್ತ ಚರ ವರದಿಗಳು ಕಾಂಗ್ರೆಸ್ ಗೆಲುವು ನಿಶ್ಚಿತ ಎಂದು ತಿಳಿಸಿದ್ದವುಮ. ಕೊನೆ ಕ್ಷಣದ ವರೆಗೆ ನನ್ನ ಹೆಸರು ಇತ್ತು. ಅಂದಿನ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ ಅವರು, ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ನನಗೆ ಕ್ಷೇತ್ರದಲ್ಲಿ ಕಾರ್ಯನಿರ್ಹಿಸಲು ಸೂಚಿಸಿದರು. ಅದರಂತೆ ನಾನು ಕ್ಷೇತ್ರದಲ್ಲಿ ಕೆಲಸ ನಿರ್ವಹಿಸುವ ವೇಳೆ. ಕುತಂತ್ರದಿಂದ ದೆಹಲಿ ಮಟ್ಟದಲ್ಲಿ ಟಿಕೆಟ್ ತಪ್ಪುವಂತೆ ಮಾಡಿದರು.

ಈ ಎಲ್ಲ ಬೆಳವಣಿಗೆ ನಂತರ ನಾಯಕರ ಮಾತಿನಂತೆ ನಾನು ಪಕ್ಷಕ್ಕೆ ದ್ರೋಹ ಮಾಡದೇ ಪಕ್ಷಕ್ಕೆ ದುಡಿದೆ. ನಾಯಕರಿಗೆ ಮಾತು ಕೊಟ್ಟಂತೆ ನಾನ ನಡೆದುಕೊಂಡೆ. ಇಷ್ಟು ಪ್ರಾಮಾಣಿಕವಾಗಿ ನಾನು ದುಡಿದರು ಮಾನೆ ಅವರು ಹಗಲಿನಲ್ಲಿ ನನ್ನ ಜೊತೆಗೆ ಇದ್ದು, ರಾತ್ರಿ ಬೇರೆ ಕೆಲಸ ಮಾಡಿದರು ಎಂದು ನನ್ನ ಮೇಲೆ ಆರೋಪ ಮಾಡಿದರು.

40 ವರ್ಷಗಳ ರಾಜಕಾರಣ ಮಾಡಿದರು, ಉದಾಸಿಯರಾಗಲಿ, ನಾನಾಗಲಿ ವೈಯಕ್ತಿಕವಾಗಿ ನಿಂದನೆ ಮಾಡಲಿಲ್ಲ. ಇಂತಹ ಸಂಸ್ಕೃತಿಯನ್ನು ಬೆಳೆಸಿಕೊಂಡ ಕ್ಷೇತ್ರದಲ್ಲಿ ತುಂಬಿದ ಸಭೆಯಲ್ಲಿ ನಾಯಕರನ್ನು ಅವಮಾನಿಸುವ ಸಂಸ್ಕೃತಿ ಹುಟ್ಟು ಹಾಕಿದ್ದಾರೆ. ಇಂತಹ ನಾಯಕ ಹಾನಗಲ್ಲಿಗೆ ಬೇಡ.

ಕಾಂಗ್ರೆಸ್ ಹೈ ಕಮಾಂಡ್ ಹಿರಿಯರ ಕೋಟಾದಡಿ ಟಿಕೆಟ್ ನೀಡಿದರೆ ನಾನು ಅಖಾಡಕ್ಕೆ ರೆಡಿ, ಸ್ಥಳೀಯವಾಗಿರುವ ಕಿರಿಯರಿಗೆ ಟಿಕೆಟ್ ನೀಡಿದರು, ನಾನೇ ಅಭ್ಯರ್ಥಿಯಂದುಕೊಂಡು ಓಡಾಡಿ ಗೆಲ್ಲಿಸಿಕೊಂಡು ಬರುವೆ. ಈ ತಾಲೂಕಿನ ಆಡಳಿತ, ಈ ತಾಲೂಕಿನ ಮಕ್ಕಳಿಗೆ ಕೊಡಲಿ‌ ಎಂಬ ಉದ್ದೇಶ ನನ್ನದು ಎಂದರು.

ಈ ಕ್ಷೇತ್ರದಲ್ಲಿ ಯಾವುದೇ ಗುದ್ದಾಟವಲ್ಲ. ಒಬ್ಬರನ್ನೋಬ್ಬರು ಬೈಕೊಂಡ ಕುಡುವ ನಾಯಕರಿಲ್ಲ. ಆದ್ದರಿಂದ, ನಾವು ಕಾಂಗ್ರೆಸ್ ನವರು, ಕಾಂಗ್ರೆಸ್ ಹೈ ಕಮಾಂಡ್ ಮೇಲೆ ನಂಬಿಕೆ ಉಳ್ಳವರು. ಅದೇ ಕಾರಣದಿಂದ ಹೈ ಕಮಾಂಡ್ ಕಣ್ಣು ತೆರೆಸುವಂತ ಕೆಲಸ ಮಾಡುತ್ತಿದ್ದೇವೆ. ಎಂ.ಎಲ್.ಎ ಎನ್ನುವದು ಆ ಕ್ಷೇತ್ರದ ಅಸ್ಮಿತೆ, ಅದನ್ನು ಸ್ಥಳೀಯರಿಗೆ ಟಿಕೆಟ್ ನೀಡುವ ಮೂಲಕ ಹೈ ಕಮಾಂಡ್ ಉಳಿಸಿಕೊಡಬೇಕು ಎಂದರು.

ಕಳೆದ ಚುನಾವಣೆಯಲ್ಲಿ ನಾನು 5. ಕೋಟಿ ತೆಗೆದುಕೊಂಡ ಟಿಕೆಟ್ ಬಿಟ್ಟು ಕೊಟ್ಟೆ ಎಂಬ ಗುಮಾನಿ ಹಬ್ಬಿಸಿದ್ದರು. ಟಿಕೆಟ್ ನೀಡುವುದು, ಬಿಡುವುದು ಹೈ ಕಮಾಂಡ್ ಗೆ ಬಿಟ್ಟಿರುತ್ತದೆ. ಒಂದಂತೂ ನಿಜಾ, ಪ್ರಮಾಣ ಮಾಡಿ ಹೇಳುವೆ, ಮಾನೆ ಅವರೊಂದಿಗೆ ಒಂದು ರೂಪಾಯಿ ತೆಗೆದುಕೊಂಡಿಲ್ಲ, ಹಣದಿಂದ ನನ್ನ ಕೊಂಡುಕೊಳ್ಳಲು ಸಾಧ್ಯವಿಲ್ಲ. ಇದು ಹಾನಗಲ್ಲ ತಾಲೂಕಿನ ಸ್ವಾಭಿಮಾನಿ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ಸ್ಥಳೀಯರಿಗೆ ಟಿಕೆಟ್ ನೀಡುವಂತೆ ಮಾಡುತ್ತಿರುವ ಹಕ್ಕೊತ್ತಾಯ. ಈ ಕಾರಣದಿಂದ ಹಾನಗಲ್ಲನಲ್ಲಿ ಕಾಂಗ್ರೆಸ್ ಪಕ್ಷದ ಸಮಾನ ಮನಸ್ಕರರು ಒಂದೇಡೆ ಸೇರಿ ಸ್ಥಳೀಯರಿಗೆ ಟಿಕೆಟ್ ನೀಡಬೇಕು ಎಂದು ತಿರ್ಮಾನಿಸಿದ್ದೇವಿ ಎಂದರು.

ಶಿವಯೋಗಿ ಹಿರೇಮಠ, ಪ್ರಕಾಶಗೌಡ ಪಾಟೀಲ, ನೆರಗಲ್ಲ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ನಾಯಕರು ಮಾತನಾಡ, 2018 ರಲ್ಲಿ ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ‌ ಲಮಾಣಿ ಅವರು ನಿವಾಸದಲ್ಲಿ ನಡೆದ ಸಭೆಯಂತೆ ಮಾನೆ ಅವರು ನಡೆದುಕೊಳ್ಳಬೇಕು. ಜೊತೆಗೆ ಹಾನಗಲ್ಲನಲ್ಲಿ ಮನೋಹರ್ ತಹಶಿಲ್ದಾರರ ಪಕ್ಷವನ್ನು ಕಟ್ಟಿ ಬೆಳೆಸಿದ್ದಾರೆ. ದಯಮಾಡಿ ಸ್ಥಳೀಯರಿಗೆ ಟಿಕೆಟ್ ನೀಡಬೇಕು. ನಿಮ್ಮ ಜನಸೇವೆಯನ್ನು ನಿಮ್ಮೂರಿನಲ್ಲಿ ಮಾಡಿ. ಸ್ಥಳೀಯರಿಗೆ ಟಿಕೆಟ್ ಕೊಡಿಸಲು ಮಾನೆ ಅವರು ಮುಂದಾಗಬೇಕು. 40 ವರ್ಷ ಹಾನಗಲ್ಲನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮಹೋಹರ್ ತಹಶಿಲ್ದಾರರ ಉಳಿಸಿಕೊಂಡು ಬಂದಿದ್ದಾರೆ. ಅದನ್ನು ಮರೆತಿರುವ ಮಾನೆ ಅವರು, ಹಾನಗಲ್ಲ ಕಾಂಗ್ರೆಸ್ ಗೆ ಮೂರು ವರ್ಷದಿಂದ ನಾನೇ ಎಲ್ಲಾ ಎಂದರೆ ಹೇಗೆ ಎಂದು ತರಾಟೆ ತೆಗೆದುಕೊಂಡರು. ಮಾನೆ ಅವರಿಗೆ ಈ ತಾಲ್ಲೂಕಿನಲ್ಲಿ ಯಾವುದೇ ಅಧಿಕಾರ ಇಲ್ಲಾ. ತಾಲೂಕಿನಲ್ಲಿ ಮನೋಹರ್ ತಹಶಿಲ್ದಾರರ ಅವರ ಮುಂದಾಳತ್ವದಲ್ಲಿ ಚುನಾವಣೆಗಳು ನಡೆಯಲಿದೆ. ಮಾನೆ ಅವರು ಗ್ರಾಮ ಗ್ರಾಮದಲ್ಲಿ ಕಾಂಗ್ರೆಸ್ ಒಡೆಯುವಂತ ಕೆಲಸ ಮಾಡುತ್ತಿದ್ದಾರೆ. ಅದನ್ನು ಕ್ಷೇತ್ರದ ಜನರು ಕ್ಷಮಿಸುವುದಿಲ್ಲ ಎಂದರು.

ಸಭೆಯಲ್ಲಿ ನೆರೆಗಲ್ಲ ಜಿ.ಪಂ.‌ಕ್ಷೇತ್ರದ ಸುಮಾರ 500 ಹೆಚ್ಚು ಕಾರ್ಯಕರ್ತರು ಭಾಗಿಯಾಗಿದ್ದರು.

  •  
  •  
  •  
  •  
  •  
  •  

Leave a Reply

Your email address will not be published. Required fields are marked *

Copyright © All rights reserved. | Developed by EXPOLOG TECHNOLOGIES
error: Content is protected !!