Sun. Jan 16th, 2022

ಪಾಂಡವ ನ್ಯೂಸ್

ಸಮಾಜದ ಧ್ವನಿ

ಸ್ಥಳೀಯರಿಗೆ ಟಿಕೆಟ್ ನೀಡುವಂತೆ ಒತ್ತಾಯ: ಮನೋಹರ್ ತಹಶಿಲ್ದಾರರ ನೇತೃತ್ವದಲ್ಲಿ ಸಭೆ:

ಹಾವೇರಿ: ಮಾಜಿ ಸಚಿವ ಹಾನಗಲ್ಲ ಶಾಸಕ ಸಿ.ಎಂ.ಉದಾಸಿಯಿಂದ ತೆರವಾಗಿರುವ ಹಾನಗಲ್ಲ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಸ್ಥಳೀಯರಿಗೆ ಟಿಕೆಟ್ ನೀಡಬೇಕು ಎಂಬ ಕೂಗು ಕೇಳಿ ಬಂದಿದೆ.

ಗುರುವಾರ ಹಾನಗಲ್ಲಿನಲ್ಲಿ ನಡೆದ ಸಭೆಯಲ್ಲಿ ಈ ಕೂಗು‌ ಕೇಳಿ ಬಂದಿದ್ದು, ವಿಧಾನಸಭಾ ಉಪ ಚುನಾವಣೆಯಲ್ಲಿ ಸ್ಥಳೀಯರಿಗೆ ಟಿಕೆಟ್ ನೀಡುವಂತೆ ಕಾಂಗ್ರೆಸ್ ಕಾರ್ಯಕರ್ತರ ಬಲವಾಗಿ ಆಗ್ರಹಿಸಿದ್ದಾರೆ.

ಗುರುವಾರ ನಡೆದ ಸಭೆಯಲ್ಲಿ ಮಾಜಿ ಸಚಿವ ಮನೋಹರ್ ತಹಶಿಲ್ದಾರರ ಸಮ್ಮುಖದಲ್ಲಿ ಈ ಸಭೆ ನಡೆದಿರುವುದು ಕುತುಹಲಕ್ಕೆ ಕಾರಣವಾಗಿದೆ. ಈ ಸಭೆಯಲ್ಲಿಯೇ ಸ್ಥಳೀಯರಿಗೆ ಕಾಂಗ್ರೆಸ್ ಪಕ್ಷದ ಟಿಕೆಟ್ ನೀಡಬೇಕು ಎಂದು ತಹಸಿಲ್ದಾರ ಆಗ್ರಹಿಸಿದ್ದಾರೆ.

ಒಂದು ವೇಳೆ ಪಕ್ಷದ ಹೈ ಕಮಾಂಡ್ ಸ್ಥಳೀಯರಿಗೆ ಟಿಕೆಟ್ ನೀಡದಿದ್ದರೇ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಹಾನಗಲ್ ಕಾಂಗ್ರೆಸ್ ನಲ್ಲಿ ಇದೀಗ ವಲಸೆ ಕಾಂಗ್ರೆಸ್, ಸ್ಥಳೀಯ ಕಾಂಗ್ರೆಸ್ ಎಂದು ಒಡಕು ಮೂಡಿದ್ದು. ಮಾಜಿ ಸಚಿವರಿಂದ ಸ್ಥಳಿಯರಿಗೆ ಟಿಕೆಟ್ ನೀಡ ಬೇಕೆಂದು ಸಭೆಯಲ್ಲಿ ತೀರ್ಮಾನವಾಗಿ.

ಸಭೆಯಲ್ಲಿ ಭಾಗವಹಿಸಿದ್ದ ಕಾಂಗ್ರೆಸ್ ಕಾಂಗ್ರೆಸ್ ಕಾರ್ಯಕರ್ತರು, ಕೆಪಿಸಿಸಿ ಕಾರ್ಯದರ್ಶಿ ಪ್ರಕಾಶಗೌಡ ಪಾಟೀಲ ಅವರಿಗಾಗಲಿ ಅಥವಾ ಶಿವಯೋಗಿ ಹಿರೇಮಠ ಅವರಿಗಾಗಲಿ ಅಥವಾ ಇನ್ನುಳಿದ ಸ್ಥಳೀಯ ನಾಯಕರಿಗಾಗಲಿ ಟಿಕೆಟ್ ನೀಡಿದರೆ ಎಲ್ಲರೂ ಒಗ್ಗೂಡಿ ಪಕ್ಷವನ್ನು ಗೆಲ್ಲಿಸಿಕೊಂಡು ಬರುತ್ತೇವೆ. ಅದನ್ನು ಬಿಟ್ಟು ಹೊರಗಿನವರಿಗೆ ಟಿಕೆಟ್ ನೀಡಿದರೆ, ಹಾನಗಲ್ಲನಲ್ಲಿ ಕಾಂಗ್ರೆಸ್ ಅಸ್ತಿತ್ವಕ್ಕೆ ದಕ್ಕೆ ಬರುತ್ತದೆ ಎಂದು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚುನಾವಣೆ ಆಯೋಗ ಉಪಚುನಾವಣೆಗೆ ದಿನಾಂಕ ಘೋಷಣೆ ಮಾಡಿಲ್ಲ. ಘೋಷಣೆಗೂ ಮೊದಲೆ ಕಾಂಗ್ರೆಸ್ ನಲ್ಲಿ ಒಳಗಿನವರು, ಹೊರಗಿನವರು ಎಂಬ ಕೂಗು ಕೇಳಿಬರುತ್ತಿರುವುದು ಮುಂದಿನ ದಿನಗಳಲ್ಲಿ ಎಲ್ಲಿಗೆ ತಲುಪುತ್ತೋ ಕಾದು ನೋಡಬೇಕು.

  •  
  •  
  •  
  •  
  •  
  •  

Leave a Reply

Your email address will not be published. Required fields are marked *

Copyright © All rights reserved. | Developed by EXPOLOG TECHNOLOGIES
error: Content is protected !!