Mon. Oct 18th, 2021

ಪಾಂಡವ ನ್ಯೂಸ್

ಸಮಾಜದ ಧ್ವನಿ

ರಾಣೇಬೆನ್ನೂರಿನ ಮಾರುತಿ ನಗರದ ತುಂಗಾಜಲ ಶ್ರೀ ಚೌಡೇಶ್ವರಿ ದೇವಿಯ ಗೋಪುರ ನಿರ್ಮಾಣ ಕಾರ್ಯಕ್ಕೆ ಚನ್ನವೀರ ಸ್ವಾಮಿಗಳಿಂದ ಪೂಜೆ

ರಾಣೇಬೆನ್ನೂರು : ಆಧುನಿಕ ಸಮಾಜದ ಜಂಜಾಟದಲ್ಲಿ ಧರ್ಮದ ಮಾರ್ಗದಲ್ಲಿ ಸಾಗುವ ಮೂಲಕ ಸುಭಿಕ್ಷ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಮುಂದಾಗಬೇಕಿದೆ ಎಂದು ಲಿಂಗನಾಯಕನಹಳ್ಳಿ ಜಂಗಮ ಕ್ಷೇತ್ರದ ಚನ್ನವೀರ ಸ್ವಾಮಿಗಳು ನುಡಿದರು.
ಸ್ಥಳೀಯ ಮಾರುತಿನಗರದ ಬೆಂಚಿ ತುಂಗಾಜಲ ಶ್ರೀ ಚೌಡೇಶ್ವರಿದೇವಿಯ ಗೋಪುರ ನಿರ್ಮಾಣ ಕಾರ್ಯಕ್ಕೆ ಶುಕ್ರವಾರ ಪೂಜೆ ಸಲ್ಲಿಸಿ ಮಾತನಾಡಿದರು. ಧಾರ್ಮಿಕ ಕ್ಷೇತ್ರಗಳು ಮನುಷ್ಯನಿಗೆ ಶಾಂತಿ ನೆಮ್ಮದಿ ನೀಡುವ ತಾಣಗಳಾಗಿವೆ. ಇತ್ತೀಚಿಗೆ ಮನುಷ್ಯನಲ್ಲಿ ಸ್ವಾರ್ಥ ಮನೋಭಾವ ಮೂಡುತ್ತಿದ್ದು. ಇದರಿಂದ ಹೊರಗೆ ಬರಬೇಕು. ಎಲ್ಲರೂ ಧಾನಧರ್ಮ ಅಂತಹ ಪುಣ್ಯದ ಕೆಲಸÀ ಮಾಡಬೇಕು ಎಂದರು.
ಶಾಸಕ ಅರುಣಕುಮಾರ ಪೂಜಾರ, ನಗರಯೋಜನಾ ಪ್ರಾಧಿಕಾರ ಅಧ್ಯಕ್ಷ ಚೋಳಪ್ಪ ಕಸವಾಳ, ದೇವಸ್ಥಾನ ಸಮಿತಿ ಅಧ್ಯಕ್ಷ ಶೇಖಪ್ಪ ಹೊಸಗೌಡ್ರ, ನಗರಸಭೆ ಉಪಾಧ್ಯಕ್ಷೆ ಕಸ್ತೂರಿಚಿಕ್ಕಬಿದರಿ, ಸದಸ್ಯ ಪುಟ್ಟಪ್ಪ ಮರಿಯಮ್ಮನವರ, ಮಾಜಿ ಸದಸ್ಯ ರಾಘವೇಂದ್ರ ಚಿನ್ನಿಕಟ್ಟಿ, ಬಸವರಾಜ ಹುಚ್ಚಗೊಂಡರ, ಏಕಾಂತ ಮುದಿಗೌಡ್ರ, ಕುಮಾರ ಮಡಿವಾಳರ, ಡಾ. ಎಚ್.ಕೆ.ಕದರ ಮಂಡಲಗಿ, ಹನುಮಂತಪ್ಪ ಮುಕ್ತೇನಹಳ್ಳಿ, ಸಿದ್ದು ಚಿಕ್ಕಬಿದರಿ, ಎನ್.ಸಿ.ಬೆಳೆಕೇರಿ, ಶೇಖಪ್ಪ ನರಸಗೊಂಡರ, ಪಿ.ಎಸ್.ಸುಲಾಖೆ ಸೇರಿದಂತೆ ಮತ್ತಿತರು ಇದ್ದರು.
* * *

  •  
  •  
  •  
  •  
  •  
  •  

Leave a Reply

Your email address will not be published. Required fields are marked *

Copyright © All rights reserved. | Developed by EXPOLOG TECHNOLOGIES
error: Content is protected !!