Wed. Nov 24th, 2021

ಪಾಂಡವ ನ್ಯೂಸ್

ಸಮಾಜದ ಧ್ವನಿ

ಹಾರೀಕಟ್ಟಿತಾಂಡಾಕ್ಕೆ ಮೊದಲ ಬಸ್ಸಿನ ಸೇವೆ ಉತ್ತರಕರ್ನಾಟಕ ರೈತ ಸಂಘದ ಹೋರಾಟಕ್ಕೆ ಫಲ !

ಪಾಂಡವ ನ್ಯೂಸ್ ರಟ್ಟೀಹಳ್ಳಿ : ಉತ್ತರಕರ್ನಾಟಕರೈತ ಸಂಘದ ಹೋರಾಟಕ್ಕೆ ಸ್ಪಂದಿಸಿ ವಾಯುವ್ಯಕರ್ನಾಟಕ ಸಾರಿಗೆ ಸಂಸ್ಥೆಯವರು ರಟ್ಟೀಹಳ್ಳಿ ತಾಲ್ಲೂಕಿನ ಹಾರೀಕಟ್ಟಿತಾಂಡಕ್ಕೆ ಬಸ್ಸಿನ ಸೇವೆಯನ್ನು ಮೊದಲ ಸಲ ಪ್ರಾರಂಭಿಸಿದರು.


ಈ ಹಿಂದೆರೈತ ಸಂಘದವರು ಹಾರಿಕಟ್ಟಿತಾಂಡಾಕ್ಕೆ ಬಸ್ಸಿನ ಸೌಕರ್ಯ, ರಟ್ಟೀಹಳ್ಳಿ ತಾವರಗಿ ಮಾರ್ಗವಾಗಿ ಹಿರೆಕೆರೂರಗೆ ಚಲಿಸುವ ಬಸ್ಸಿನ ದರಕಡಿಮೆ ಮಾಡುವುದು, ಡೀಪೊ ಮತ್ತುಇಲಾಖೆಯಲ್ಲಿ ಸರಿಯಾದ ಸೇವೆ ಸಲ್ಲಿಸಿದ ನೌಕರರ ವರ್ಗಾವಣೆ ಹೀಗೆ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಹೋರಾಟ ಮಾಡಿದ್ದುಅದರ ಫಲವಾಗಿ ಇಲಾಖೆ ಎಲ್ಲ ಮನವಿಗೆ ಸ್ಪಂದಿಸಿದ್ದು ಸಾರ್ವಜನಿಕರಿಗೆ ಅನುಕೂಲವಾಗಿದೆ.


ರಟ್ಟೀಹಳ್ಳಿ ತಾವರಗಿ ಮಾರ್ಗವಾಗಿ ಹಿರೆಕೆರೂರಗೆ ಚಲಿಸುವ ಬಸ್ಸಿನ ದರ ಮೊದಲ ಪ್ರಾಯೋಗಿಕವಾಗಿ 15 ರೂಇದ್ದು ನಂತರಅದನ್ನು 22 ರೂ ಗೆ ಏರಿಸಲಾಗಿತ್ತು. ಕಡಿಮೆ ಮಾಡುವಂತೆರೈತ ಸಂಘ ಆಗ್ರಹಿಸಿದ ಹಿನ್ನಲೆಯಲ್ಲಿ 2 ರೂಕಡಿಮೆ ಮಾಡಿ 20 ರೂ ನಿಗದಿ ಮಾಡಲಾಗಿದೆ.ಇಲಾಖೆಯ ಮತ್ತುಡೀಪೊ ನೌಕರರನ್ನು ವರ್ಗಾವಣೆ ಮಾಡಲಾಗಿದೆ. ಈ ಮೂಲಕ ಸಾರ್ವಜನಿಕರಿಗೆ ನೆರವಾಗುವಂತೆ ಇಲಖೆ ಸ್ಪಂದಿಸಿದ್ದು ಶ್ಲಾಘನೀಯವಾಗಿದೆಎಂದು ಸಂಘದ ಪದಧಿಕಾರಿಗಳು ತಿಳಿಸಿದರು.


ಸಂಘದರಾಜ್ಯ ಪ್ರಧಾನ ಕಾರ್ಯದರ್ಶಿ ರಾಜಶೇಖರ ದೂದೀಹಳ್ಳಿ, ಜಿಲ್ಲಾಅಧ್ಯಕ್ಷ ಹನುಮಂತಪ್ಪ ದೀವಿಗಿಹಳ್ಳಿ, ಜಗದೀಶಕೂಸಗೂರ, ವಿಜಯಕುಮಾರಕೋಣನತಲಿ, ತೇಜಪ್ಪ ಬಸರಹಳ್ಳಿ, ಸುರೇಶ ಯರಹಳ್ಳಿ, ಕಾಳಪ್ಪ ಯರಹಳ್ಳಿ, ರೇವಣೆಪ್ಪ ಸರವಂದ, ಮಿಠ್ಯಾನಾಯ್ಕ ಲಮಾಣಿ, ಪೀರಪ್ಪ ಲಮಾಣಿ, ನಾಗರಾಜಆರೀಕಟ್ಟಿ, ರಮೇಶಆರೀಕಟ್ಟಿ, ಭೀಮಾನಾಯ್ಕಆರೀಕಟ್ಟಿ, ಶರೀಫಸಾಬ ಉಕ್ಕಡಗಾತ್ರಿ, ಮತ್ತುಇಲಾಖೆಯ ಆರ್.ಎನ್,ಶೆಟ್ಟರ ಮುಂತಾದವರು ಭಾಗವಹಿಸಿದ್ದರು.

  •  
  •  
  •  
  •  
  •  
  •  

Leave a Reply

Your email address will not be published. Required fields are marked *

Copyright © All rights reserved. | Developed by EXPOLOG TECHNOLOGIES
error: Content is protected !!