Mon. Jun 20th, 2022

ಪಾಂಡವ ನ್ಯೂಸ್

ಸಮಾಜದ ಧ್ವನಿ

ಬರ್ತಿದೆ ‘ಚುಟು ಚುಟು..’ ಶೈಲಿಯ ಮತ್ತೊಂದು ಜವಾರಿ ಹಾಡು ನಾಳೆ ರೀಲಿಸ್

ಬೆಂಗಳೂರು: ಚುಟು ಚುಟು..’ ಯೂಟ್ಯೂಬ್ ನಲ್ಲಿ ಅತಿ ಹೆಚ್ಚು ಹಿಟ್ಸ್ ಪಡೆದ ಕನ್ನಡದ ನಂಬರ್ ಒನ್ ಹಾಡಾಗಿದೆ. ಈಗ ಇದೇ ಹಾಡಿನ ಶೈಲಿಯಲ್ಲಿ ಮತ್ತೊಂದು ಹಾಡು ಬಿಡುಗಡೆ ಆಗುತ್ತಿದೆ. ‘ಚುಟು ಚುಟು..’ ಹಾಡು ಬರೆದ ಸಾಹಿತಿ ಮತ್ತು ಗಾಯಕರೇ ಇಲ್ಲಿಯೂ ಜೊತೆಯಾಗಿದ್ದಾರೆ.

ಗೋರಿ’ ಸಿನಿಮಾ ಹಾಡುಗಳು ನಾಳೆ ಅ 26 ರಂದು ಬಿಡುಗಡೆ ಆಗಲಿದೆ. ಈಗಾಗಲೇ ಸಿನಿಮಾದ ”ಅದು ಬ್ಯಾರೇನ ಐತಿ..” ಹಾಡು ಚಿತ್ರರಂಗದವರ ಗಮನ ಸೆಳೆದಿದೆ. ನಿರ್ದೇಶಕ ಯೋಗರಾಜ್ ಭಟ್, ಆರ್ ಚಂದ್ರು, ನಟರಾದ ಶರಣ್, ನೀನಾಸಂ ಸತೀಶ್, ನಟಿ ಹರಿಪ್ರಿಯಾ, ಸೋನು ಗೌಡ, ಬಿಗ್ ಬಾಸ್ ಖ್ಯಾತಿಯ ಕವಿತಾ ಸೇರಿದಂತೆ ಹಲವರು ಹಾಡನ್ನು ಕೇಳಿ ಇಷ್ಟ ಪಟ್ಟಿದ್ದಾರೆ. ಪಕ್ಕಾ ಉತ್ತರ ಕರ್ನಾಟಕ ಶೈಲಿಯ ಜವಾರಿ ಹಾಡು ಇದಾಗಿದೆ.

ಚಿತ್ರದ ನಾಲ್ಕು ಹಾಡುಗಳಿಗೆ ವಿನು ಮನಸು ಸಂಗೀತ ನೀಡಿದ್ದಾರೆ. ಶಿವು ಬೇರ್ಗಿ, ಕೆ ಕಲ್ಯಾಣ್, ಎಂ ಹೆಚ್ ಜಗ್ಗೀನ್ ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ. ರವೀಂದ್ರ ಸೊರಗಾವಿ, ಸರಿಗಮಪ ಖ್ಯಾತಿಯ ಮೆಹಬೂಬ್ ಸಾಬ್, ಸಂತೋಷ ವೆಂಕಿ ಹಾಡುಗಳಿಗೆ ಧ್ವನಿ ನೀಡಿದ್ದಾರೆ.

ಕಿರಣ್ ಸಿನಿಮಾದ ನಾಯಕನಾಗಿದ್ದಾರೆ. ಮೊದಲ ಬಾರಿಗೆ ಗೋಪಾಲ್ ಕೃಷ್ಣ ನಿರ್ದೇಶನ ಮಾಡುತ್ತಿದ್ದಾರೆ. ಸ್ಮೀತಾ ಮತ್ತು ಶ್ವೇತ ಚಿತ್ರದ ನಾಯಕಿಯರಾಗಿದ್ದಾರೆ. ಹಾವೇರಿ ಟಾಕೀಸ್ ಬ್ಯಾನರ್ ನಲ್ಲಿ ಚಿತ್ರ ನಿರ್ಮಾಣ ಆಗುತ್ತಿದೆ. ‘ಚುಟು ಚುಟು..’ ಶೈಲಿಯ ಈ ಹಾಡಿನ ಬಗ್ಗೆ ನಿರೀಕ್ಷೆ ಹೆಚ್ಚಿದೆ.

  •  
  •  
  •  
  •  
  •  
  •  
Copyright © All rights reserved. | Developed by EXPOLOG TECHNOLOGIES
error: Content is protected !!